ನಂದ ವಂಶದ ವಿರುದ್ದ ಯುದ್ಧದಲ್ಲಿ ಗೆಲ್ಲಲು ಚಾಣಕ್ಯ ಅನುಸರಿಸಿದ 7 ಯುದ್ಧ ನೀತಿಗಳು ..!

1 min read

ನಂದ ವಂಶದ ವಿರುದ್ದ ಯುದ್ಧದಲ್ಲಿ ಗೆಲ್ಲಲು ಚಾಣಕ್ಯ ಅನುಸರಿಸಿದ 7 ಯುದ್ಧ ನೀತಿಗಳು ..!

ಆಚಾರ್ಯ  ಚಾಣಕ್ಯನ ಹೆಸರು ಕೇಳದ ವ್ಯಕ್ತಿಗಳು ನಮ್ಮ ಭಾರತದಲ್ಲಿ ಇರೋದಕ್ಕೆ ಸಾಧ್ಯವೇ ಇಲ್ಲ. ಇತಿಹಾಸದ ಅತಿ ಬುದ್ಧಿವಂತ ರಾಜನಾಯಕ ಮಹಾನ್  ಜ್ಞಾನಿ ಚಾಣಕ್ಯ.  ಚಾಣಕ್ಯನ ನೀತಿಗಳು ಅಥವ ಸೂತ್ರಗಳನ್ನು ಇಂದಿಗೂ ಜನರು ಅನುಸರಿಸುತ್ತಾರೆ. ಆ ಸೂತ್ರಗಳನ್ನ ಅಳವಡಿಸಿಕೊಳ್ತಾರೆ. ಶಕ್ತಿಯಿಂದ ಸಾಧಿಸಲು ಸಾಧ್ಯವಿಲ್ಲದನ್ನ ಯುಕ್ತಿಯಿಂದ ಸಾಧಿ ಸಬಹುದು ಎನ್ನುವುದನ್ನ ತೋರಿಸಿಕೊಟ್ಟಿದ್ದ ಚಾಣಕ್ಯ ಹೇಗೆ ನಂದ ವಂಶವನ್ನು ಯುದ್ಧದಲ್ಲಿ ಸೋಲಿಸಿ ಮೌರ್ಯ ಸಾಮ್ರಾಜ್ಯ ಪ್ರತಿಸ್ಠಾಪನೆ ಮಾಡಿದ್ದರು ಎನ್ನುವುದೂ ಎಲ್ಲರಿಗೂ ಗೊತ್ತೇ ಇದೆ.

ಆದ್ರೆ ಈ ಯುದ್ಧದಲ್ಲಿ ಗೆಲುವು ಸಾಧಿಸಲು ಚಾಣಕ್ಯ 7 ವಿಶೇಷ ನೀತಿಗಳ ರಚನೆ ಮಾಡಿದ್ದರು. ಇದೇ ನೀತಿಗಳನ್ನ ಅನುಸರಿಸಿ ಅವರಿಗೆ ವಿಜಯ ಪ್ರಾಪ್ತಿ ಆಗಿತ್ತು. ಆದರೆ ಈ ನೀತಿಗಳು ಹಲವರಿಗೆ ತಿಳಿದಿರುವುದಿಲ್ಲ. ಹಾಗಾದ್ರೆ ಚಾಣಕ್ಯನ ಆ 7 ನೀತಿಗಳು ಯಾವುವು. ಅವರು ಯುದ್ಧದಲ್ಲಿ ಈ ನೀತಿಗಳನ್ನ ಯಾವ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದರು ಅನ್ನೋದನ್ನ ನಾವು ಇವತ್ತು ತಿಳಿಯೋಣ.

ಬುದ್ಧಿಯ ಭಗವಂತ ಎಂದೇ ಚಾಣಕ್ಯನನ್ನ ಕರೆಯಲಾಗುತಿತ್ತು. ಇದಕ್ಕೆ ಕಾರಣ ಚಾಣಕ್ಯನ ಬುದ್ದಿಶಕ್ತಿ, ಜ್ಞಾನ. ಇವತ್ತಿನವರೆಗೂ ಚಾಣಕ್ಯನಷ್ಟು ಬುದ್ಧಿವಂತ ವ್ಯಕ್ತಿಯನ್ನು ಇತಿಹಾಸದಲ್ಲಿ ನೋಡಿಯೇ ಇಲ್ಲ ಎನ್ನಲಾಗುತ್ತದೆ. ನಂದ ಸಾಮ್ರಾಜ್ಯದಲ್ಲಿ ಅಪಮಾನಿತರಾಗಿದ್ದ ಚಾಣಕ್ಯ , ಆ ಸಾಮ್ರಾನ್ಯವನ್ನ ನೆಲಸಮ ಮಾಡುವ ಪಣ ತೊಟ್ಟಿದ್ದರು. ಹೀಗೆ ಚಾಣಕ್ಯನಿಗೆ ಚಂದ್ರಗುಪ್ತ ಮೌರ್ಯನ ಪರಿಚಯವಾಗಿತ್ತು. ಈತನೇ ನಂದವಂಶ ನಿರ್ಣಾಮವಾದ ಬಳಿಕ ರಾಜಾಡಳಿತ ನಡೆಸುವುದಕ್ಕೆ ಸೂಕ್ತ ವ್ಯಕ್ತಿ ಎನ್ನುವ ನಿರ್ಣಯಕ್ಕೆ ಬಂದಿದ್ದ ಚಾಣಕ್ಯ ಚಂದ್ರಗುಪ್ತನಿಗೆ ರಾಜನೀತಿ , ರಾಜತಾಂತ್ರಿಕತೆಯ ಬಗ್ಗೆ ತರಬೇತಿ ನೀಡಲು ಶುರು ಮಾಡಿದ್ದರು.

ಮೊಲನೇ ಬಾರಿಗೆ ಯಾವುದೇ ಸರಿಯಾದ ತಯಾರಿಗಳಿಲ್ಲದೇ , ಯುದ್ಧ ತಾಂತ್ರಿಕತೆಗಳನ್ನ ಹೊಂದದೇ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಚಾಣಕ್ಯ ಚಂದ್ರಗುಪ್ತನ ಜೊತೆಗೆ ಮೊದಲ ಬಾರಿಗೆ ಮಗದ್ ನ ಸಾಮ್ರಾಜ್ಯದ ಮೇಲೆ ಸಮರ ಸಾರಿದ್ದರು. ಪರಿಣಾಮ ಚಂದ್ರಗುಪ್ತ ಸೋಲಿಗೆ ಶರಣಾಗಬೇಕಾಯ್ತು. ಇದಾದ  ಬಳಿಕ ಯಾವುದೇ ಸರಿಯಾದ ಸ್ಟ್ರಾಟಜಿಗಳಿಲ್ಲದೆ ಧನಾನಂದನನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂಬುದನ್ನ ಚಾಣಕ್ಯ ಅರ್ಥ ಮಾಡಿಕೊಂಡಿದ್ದರು. ಧನಾನಂದನನ್ನು ಸೋಲಿಸಲು ಚಾಣಕ್ಯ 7 ನೀತಿಗಳನ್ನ ರಚನೆ ಮಾಡಿದರು.

ಪ್ರಮುಖವಾಗಿ ಮಗದ್ ರಾಜ್ಯದ ಮೇಲೆ ನೇರವಾಗಿ ದಾಳಿ ಮಾಡದೇ ಮೊದಲಿಗೆ ಅದರ ಸುತ್ತಲಿನ ನೆರೆಹೊರೆಯ ಚಿಕ್ಕ ಚಿಕ್ಕ ರಾಜ್ಯಗಳ ಮೇಲೆ ದಾಳಿ ಮಾಡುವುದು ಮೊದಲನೇಯ ಚಾಣಕ್ಯನ ನೀತಿಯಾಗಿತ್ತು.

2ನೇ ನೀತಿ ವಿಷಕನ್ಯ – ಈ ನೀತಿಯಂತೆ ಚಾಣಕ್ಯ ಅತ್ಯಂತ ಸುಂದರವಾದ ಮಹಿಳೆಯರ ಒಂದು ಸೇನೆಯನ್ನೇ ತಯಾರು ಮಾಡಿದರು. ಈ ಮಹಿಳೆಯರಿಗೆ ಬಹಳ ದಿನಗಳವರೆಗೂ ಪ್ರತಿದಿನ ಸ್ವಲ್ಪಸ್ವಲ್ಪ ಪ್ರಮಾಣದಲ್ಲೇ ವಿಷುಣಿಸಲಾಗುತ್ತಿತ್ತು. ಇದರ ಪರಿಣಾಮವಾಗಿ ಈ ಮಹಿಳೆಯರು ವಿಷಪೂರಿತ ನಾಗಿಣಿಗಳ ರೀತಿಯಲ್ಲಿ ಬದಲಾಗಿದ್ದರು. ಬಳಿಕ ಇವರುಗಳನ್ನ ಮಗದ್ ನ ಆಸುಪಾಸಿನಲ್ಲಿರುವ ರಾಜ್ಯಗಳಲ್ಲಿ ಅಲ್ಲಿನ ರಾಜರ ಮನರಂಜನೆಗಾಗಿ ನೃತ್ಯ ಮಾಡಲು ಕಳುಹಿಸಿಕೊಡಲಾಗುತಿತ್ತು. ಈ ವೇಳೆ ಈ ಮಹಿಳೆಯರು ರಾಜರನ್ನ ಚುಂಬಿಸುವ ನೆಪದಲ್ಲಿ ಅವರಿಗೆ ವಿಷ ಉಣಿಸಿ ಸಾವಿನ ದವಡೆಗೆ ತಳ್ಳುತ್ತಿದ್ದರು.

3ನೇ ನೀತಿ ಗುಪ್ತಚರರ ಸೇನೆ – ಗುಪ್ತಚರರು ಅಂದ್ರೆ ಡಿಟೆಕ್ಟಿವ್ ಗಳು ಆಗಿರುವ ಜೊತೆಗೆ ಗುಪ್ತಚರ ಮಾಹಿತಿಗಳನ್ನ ಹೊರತೆಗೆಯುವಲ್ಲಿ ನಿಪುಣರೂ ಆಗಿರಬೇಕು. ಅಂದ್ರೆ ಈಗಿನ ಇಂಟಲಿಜೆನ್ಸ್ ಬ್ಯೂರೋ ರೀತಿ. ಚಾಣಕ್ಯ ಇದಕ್ಕಾಗಿ ಒಂದು ಸೇನೆಯನ್ನೇ ತಯಾರು ಮಾಡಿ, ಇವರೆಲ್ಲರಿಗೂ ಸ್ವತಃ ತಾವೇ ತರಬೇತಿ ನೀಡದ್ದರು.ಇದಾದ ಬಳಿಕ ಅವರ ಈ ಸೇನೆಯು ಮಗದ್ ರಾಜ್ಯದ ಅನೇಕ ಆಂತರಿಕ ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕಲು ಶರುಮಾಡಿದ್ದರು.

4ನೇ ನೀತಿ – ಅಸಲಿಗೆ ಚಾಣಕ್ಯನ ಈ ನೀತಿ ನಿಜಕ್ಕೂ ಆಶ್ಚರ್ಯವಾಗುತ್ತದೆ. ಯಾಕಂದರೆ ಈ ವೇಳೆ ಚಾಣಕ್ಯ ವಿಶಾಲವಾದ ಸೇನೆಯನ್ನ ನಿರ್ಮಾಣ ಮಾಡಲು ಹೊರಟಿದ್ದರು. ಇದಕ್ಕಾಗಿ ಖುದ್ದು ವೇಷ ಬದಲಾಯಿಸಿಕೊಂಡು ಮುನಿಯ ವೇಷ ಧಾರಣೆ ಮಾಡಿದ್ದ ಚಾಣಕ್ಯ ಹಳ್ಳಿ ಹಳ್ಳಿಗಳೂ , ಎಲ್ಲಾ ಚಿಕ್ಕ ದೊಡ್ಡ ಪ್ರದೇಶಗಳಿಗೂ ತೆರಳಿ ತಮ್ಮ ಪ್ರವಚನ ಮೂಲಕ ಜನರ ಮೇಲೆ ಪ್ರಭಾವ ಬೀರಲು ಶುರುಮಾಡಿದ್ದರು. ಹೋದಲೆಲ್ಲಾ ಚಂದ್ರಗುಪ್ತನ ಶೌರ್ಯ ಹಾಗೂ ಒಳ್ಳೆಯ ಗುಣಗಳ ಬಗ್ಗೆ ಜನರ ಬಳಿ ಪ್ರಚಾರ ಮಾಡುತ್ತಾ ಜನರ ಮನಸ್ಸಲ್ಲಿ ಚಂದ್ರಗುಪ್ತನ ಬಗ್ಗೆ ಒಳ್ಳೆಯ ಭಾವನೆ ಬರುವಂತೆ ಮಾಡಿದ್ದರು. ಹೀಗೆಯೇ ಜನರು ತಮ್ಮ ಸೇನೆ ಸೇರುವಂತೆ ಪ್ರೇರೇಪಿಸುತ್ತಿದ್ದರು ಚಾಣಕ್ಯ. ಈ ನೀತಿಯಲ್ಲಿ ಸಫಲರೂ ಆಗಿದ್ದರು.

5ನೇ ನೀತಿ – ಯೋಗ್ಯತೆಯ ಆಧಾರದಲ್ಲಿ ಅಧಿಕಾರ ನೀಡುವುದು. ಅಂದ್ರೆ ಚಾಣಕ್ಯ ಯಾವುದೇ ಜಾತಿ, ಧರ್ಮ ಆಧರಿತವಾಗಿ ಯಾರಿಗೂ ಯಾವುದೇ ಸ್ಥಾನವನ್ನ ನಿಗಿಪಡಿಸುತ್ತಿರಲಿಲ್ಲ. ಬದಲಾಗಿ ಅರ್ಹತೆಯ ಆಧಾರದ ಮೇಲೆ ಅಧಿಕಾರ ನೀಡ್ತಿದ್ದರು.

6ನೇ ನೀತಿ – ಮೊದಲಿಗೆ ಚಿಕ್ಕ ಚಿಕ್ಕ ಯುದ್ಧಗಳನ್ನ ಮಗದ್ ನ ಮೇಲೆ ಮಾಡುವುದು ಈ ನೀತಿಯ ಉದ್ದೇಶವಾಗಿತ್ತು. ಇದರಿಂದ ಚಾಣಕ್ಯರ ಪಾಲಿಗೆ 2 ಪ್ರಯೋಜನಗಳು ಆಗಿದ್ದವು. 1 ಇಂತಹ ಚಿಕ್ಕ ಚಿಕ್ಕ ಯುದ್ಧಗಳಲ್ಲಿ ಹೋರಾಡುತ್ತಾ ಮಗದ್ ನ ಸೇನೆಯ ತಾಕತ್ತು ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿತ್ತು. ಮತ್ತೊಂದು ಚಾಣಕ್ಯನಿಗೆ ತಮ್ಮ ಸೇನೆಯ ತಾಕತ್ತು ಏನು, ಎಲ್ಲಿ ತಮ್ಮ ಸೇನೆಯಲ್ಲಿ ಕುಂದು ಕೊರೆತೆ ಇದೆ ಎನ್ನುವುದು ಗೊತ್ತಾಗಿತ್ತು. ಇದರ ನಂತರ ಆ ತಪ್ಪುಗಳನ್ನ ಸರಿ ಮಾಡಿಕೊಳ್ಳುವುದು ಸುಲಭವಾಗಿತ್ತು.

7ನೇ ನೀತಿ – ವಿದೇಶ ರಾಜರ ಜೊತೆಗೆ ಘಟನಬಂಧನ. ಅಂತರಾಷ್ಟ್ರೀಯ ಕೂಟ ನೀತಿಯಲ್ಲಿ ಪರಿಣಿತರಾಗಿದ್ದ ಚಾಣಕ್ಯ ಅನೇಕ ರಾಷ್ಟ್ರಗಳ ರಾಜರ ಜೊತೆಗೆ ಸಂವಹನ ನಡೆಸಿ ಅವರೆಲ್ಲರ ಸೇನೆಯನ್ನೂ ತಮ್ಮ ಸೇನೆ ಜೊತೆಗೆ ಸೇರಿಸಿಕೊಂಡರು. ಈ ಸೇನೆಯಲ್ಲಿ ಕಾಶ್ಮೀರದ ರಾಜ , ಪೋರಸ್, ಸಮುದ್ರದ ಲೂಟಿಕಾರರು ಅರ್ಥಾತ್ ಪೈರೇಟ್ಸ್ ಗಳನ್ನೂ ಸಹ ತಮ್ಮ ಸೇನೆಯಲ್ಲಿ ಸೇರಿಸಿಕೊಂಡಿದ್ದರು. ಇದಾದ ಬಳಿಕ ಅತ್ಯಂತ ಶಕ್ತಿಶಾಲಿ ಸೇನೆ ತಯಾರು ಮಾಡಿದ ಚಾಣಕ್ಯ ಮಗದ್ ಮೇಲೆ 2ನೇ ಬಾರಿಗೆ ದಂಡೆತ್ತಿ ಹೋಗಿದ್ದರು. ಈ ಬಾರಿ ಜಯ ಚಂದ್ರಗುಪ್ತ ಮೌರ್ಯನಿಗೆ ಒಲಿದಿತ್ತು. ಧನಾನಂದ ಸೋಲನುಭವಿಸಬೇಕಾಯ್ತು. ರಾಜ್ಯದಲ್ಲಿ ನಂದವಂಶ ನಿರ್ಣಾಮವಾಗಿ ಮೌರ್ಯ ಸಾಮ್ರಾಜ್ಯ ಸ್ಥಾಪನೆಯಾಯ್ತು.

ಹೀಗೆ ಚಾಣಕ್ಯ 7 ನೀತಿಗಳನ್ನ ಒಟ್ಟಾಗಿ ಸೇರಿಸಿ ಅಂತಿಮವಾಗಿ ಯುದ್ಧದಲ್ಲಿ ನಂದವಂಶವನ್ನ ಸೋಲಿಸಿ ಅಪಮನಾನಕ್ಕೆ ಸೇಡು ತೀರಿಸಿಕೊಂಡಿದ್ದರು.

ಆದ್ರೆ ಮೊದಲೇ ಯುದ್ಧ ಮಾಡಿ ಒಂದು ಬಾರಿ ಚಾಣಕ್ಯ ಸೋಲನುಭವಿಸಿದ್ದರು.

ಹೌದು ಮೊದಲಿಗೆ ಸಿಕಂದರ್ ಸೇನೆ ಭಾರತವನ್ನ ವಶಕ್ಕೆ ಪಡೆದುಕೊಳ್ಳಲು ದಂಡೆತ್ತಿ ಬರುತ್ತಿತ್ತು. ಆದ್ರೆ ಇಂತಹ ವಿಶಾಲ ಸೇನೆಯನ್ನ ಸೋಲಿಸುವುದಕ್ಕೆ ಶಕ್ತಿಯಿಂದ ಸಾಧ್ಯವಿಲ್ಲ ಎಂಬ ವಿಚಾರವೂ ಚಾಣಕ್ಯನಿಗೆ ತಿಳಿದಿತ್ತು. ಇದೇ ಕಾರಣಕ್ಕೆ ಚಾಣಕ್ಯ ತಮ್ಮ ಬುದ್ದಿವಂತಿಕೆಯನ್ನ ಉಪಯೋಗಿಸಿ ಚಂದ್ರಗುಪ್ತ ಮೌರ್ಯನನ್ನೇ ಸಿಕಂದರ್ ನ ಸೇನೆಯಲ್ಲಿ ಶಾಮೀಲು ಮಾಡಿದರು.

ಇಲ್ಲಿಂದಲೇ ಚಾಣಕ್ಯನ ಅಸಲಿ ಬುದ್ದಿವಂತಿಯ ಆಟ ಶುರುವಾಗಿತ್ತು. ಚಾಣಕ್ಯ ಹೇಳಿದಂತೆಲ್ಲಾ ಚಂದ್ರಗುಪ್ತ ಪಾಲಿಸುತ್ತ ಹೋದ. ಚಾಣಕ್ಯನ ಮಾತಿನಂತೆಯೇ ಸಿಕಂದರ್ ಸೇನೆಯೊಳಗೇ ಇದ್ದು, ಅವರ ನಡುವೆಯೇ ಇಲ್ಲ ಸಲ್ಲದ ಊಹಾಪೋಹಗಳನ್ನ ಹಬ್ಬಿಸಲಿಕ್ಕೆ ಶುರುಮಾಡಿದ್ದ. ಇನ್ನೂ ಸಿಕಂದರ್ ನ ಸೇನೆಯಲ್ಲಿ ಬಲವಾದ ವದಂತಿ ಹಬ್ಬಿಸಿದ ಚಂದ್ರಗುಪ್ತ ಭಾರತದ ದೇವಾನು ದೇವತೆಗಳು ಸಿಕಂದರ್ ನ ಸೇನೆಯ ಮೇಲೆ ಕ್ರೋಧಿತರಾಗಿದ್ದಾರೆ ಎಂದು ಅವರೆಲ್ಲರನ್ನೂ ನಂಬಿಸಲು ಶುರುಮಾಡಿದ್ದ. ಈ ವದಂತಿಗೆ ಬಲ ತುಂಬಲು ಚಂದ್ರಗುಪ್ತ ಕೆಲವೊಮ್ಮೆ ಕೆಲವರ ಊಟದಲ್ಲಿ ವಿಷ ಬೆರೆಸಿದ್ರೆ, ಮತ್ತು ಕೆಲವು ಬಾರಿ ಅವರ ಧ್ವಜಕ್ಕೆ ಬೆಂಕಿ ಇಟ್ಟು ತಾನು ಎಬ್ಬಿಸಿರುವ ವದಂತಿಯನ್ನ ಸೇನೆ ನಂಬುವಂತೆ ಮಾಡಿದ್ದರು.

ಅಷ್ಟೇ ಇವೆಲ್ಲಾ ಘಟನೆಗಳಿಂದ ಸುಳ್ಳು ವದಂತಿ ನೈಜ ರೂಪ ಪಡೆದುಕೊಂಡಿತ್ತು. ಸೇನೆ ಇದನ್ನೆಲ್ಲಾ ನಿಜವೆಂದೇ ನಂಬುವ ಹಂತಕ್ಕೆ ತಲುಪಿತ್ತು. ಹೀಗೆ ಒಬ್ಬಬ್ಬರೇ ಸೇನೆಯಿಂದ ಸೈನಿಕರು ಹೊರನಡೆದರು. ಇದೇ ರೀತಿ ಸಿಕಂದರ್ ಸೇನೆ ಭಾರತದಲ್ಲಿ ಯುದ್ಧ ಮಾಡುವುದಕ್ಕೂ ಮುನ್ನ ಭಾರತಕ್ಕೆ ನುಸುಳುವ ಮುನ್ನವೇ ಸೋಲನ್ನೊಪ್ಪಿ ವಾಪಸ್ ತೆರಳುವಂತಾಗಿತ್ತು. ಹೀಗೆ ಈ ಯುದ್ಧದಲ್ಲಿ ಚಂದ್ರಗುಪ್ತನಿಗೆ ಗೆಲುವು ಪ್ರಾಪ್ತಿಯಾಗಿತ್ತು. ಅಸಲಿಗೆ ಇದು ಚಂದ್ರಗುಪ್ತನ ಗೆಲುವಲ್ಲ ಆಚಾರ್ಯ ಚಾಣಕ್ಯನ ಗೆಲುವು. ಬುದ್ದಿವಂತಿಯಿಂದ ಯಾವುದೇ ಬಲಪ್ರಯೋಗವೂ ಇಲ್ಲ, ನೆತ್ತರನ್ನೂ ಹರಿಸದೇ ಯುದ್ಧ ನಡೆಯುವಕ್ಕೂ ಮುನ್ನವೇ ಸಿಕಂದರ್ ಸೇನೆ ಸೋಲೊಪ್ಪಿಕೊಂಡಿದ್ದಕ್ಕೆ ಕಾರಣ ಚಾಣಕ್ಯನ ಚಾಣಕ್ಷ್ಯತನ.

ಆದ್ರೆ ಆ ಸಮಯದ ವಿಶ್ವದ ಪ್ರಬಲ ಸಿಕಂದರ್ ಸೇನೆಯನ್ನೇ ಸೋಲಿಸಿದ ಚಾಣಕ್ಷ್ಯರ ಆತ್ಮವಿಶ್ವಾಸ ಹೆಚ್ಚಾಗಿತ್ತು. ಆದ್ರೆ ಅತಿಯಾದ ಆತ್ಮವಿಶ್ವಾಸದಿಂದ ಚಾಣಕ್ಯ ಹಾಗೂ ಚಂದ್ರಗುಪ್ತ ಸೋಲನುಭವಿಸುವಂತಾಗಿತ್ತು. ಹೌದು. ಸಿಕಂದರ್ ಸೇನೆ ವಾಪಸ್ ಆದ ತಕ್ಷಣವೇ  ತನ್ನ ಸೇನೆಯೊಂದಿಗೆ ಚಾಣಕ್ಯ ಮಗದ್ ನ ಮೇಲೆ ಸಮರಸಾರಿದ್ದರು. ಆದ್ರೆ ಈ ಯುದ್ಧದಲ್ಲಿ ಚಂದ್ರಗುಪ್ತ ಪರಾಭವಗೊಂಡಿದ್ದರು. ಹೇಗೋ ಮಾಡಿ ಚಾಣಕ್ಯ ಹಾಗೂ ಚಂದ್ರಗುಪ್ತ ತಮ್ಮ ಜೀವವನ್ನ ಉಳಿಸಿಕೊಂಡಿದ್ದರು.

ಈ ಯುದ್ಧದಲ್ಲಿ ಸೋತ ಕಾರಣ ಹಾಗೂ ಯಾವೆಲ್ಲಾ ತಪ್ಪುಗಳನ್ನ ಮಾಡಿದ್ದರೋ ಅದನೆಲ್ಲಾ ಅರಿತ ಚಾಣಕ್ಯ ಅಂತಹ ತಪ್ಪುಗಳು ಮತ್ತೊಮ್ಮೆ ಆಗದಂತೆ ಈ ರೀತಿಯಾದ ನೀತಿಗಳಿಂದ ಯುದ್ಧದಲ್ಲಿ ಗೆಲುವು ಸಾಧಿಸಿದ್ರು.

124 ತಿಂಗಳಲ್ಲಿ ನಿಮ್ಮ ಹಣ ದ್ವಿಗುಣ- ಪೋಸ್ಟ್ ಆಫೀಸ್ ನ ಅದ್ಭುತ ಯೋಜನೆ

ಜಗತ್ತಿನ 10 ಅತ್ಯಂತ ದುರ್ಬಲ WEAKEST ಕರೆನ್ಸಿಗಳು – ಇವುಗಳ ಮುಂದೆ ಭಾರತವೇ ಶ್ರೀಮಂತ..!

ಭಾರತದ ಬದ್ಧ ವೈರಿ ರಾಷ್ಟ್ರ ಪಾಕ್ ನ ಇಂಟ್ರೆಸ್ಟಿಂಗ್ ವಿಚಾರಗಳು ನಿಮಗೆ ಗೊತ್ತಾ..!

ನಂದವಂಶ ನಿರ್ಣಾಮ ಮಾಡಿದ ಮಹಾನ್ ಜ್ಞಾನಿ ಚಾಣಕ್ಯನ ಜೀವನಕಥೆ..!

ವಿಶ್ವದ ಶಕ್ತಿಶಾಲಿ ಕರೆನ್ಸಿ ಯಾವುದು : ಅಮೆರಿಕನ್ ಡಾಲರ್ ಅಲ್ವೇ ಅಲ್ಲ – ವಿಶ್ವದ ದುಬಾರಿ ಕರೆನ್ಸಿಗಳು..!

‘ಪ್ರೀಸ್ಟ್ ‘ ಆಗುವ ಕನಸುಕಂಡಿದ್ದ ಹಿಟ್ಲರ್ ಮಹಾನ್ ಕ್ರೂರಿ ಸರ್ವಾಧಿಕಾರಿಯಾಗಿದ್ದು ಹೇಗೆ : LIFE STORY

ಗಲ್ಲಿಗೇರಿಸುವುದಕ್ಕು ಮುನ್ನ ಜಲ್ಲಾದ್ ಖೈದಿಯ ಕಿವಿಯಲ್ಲಿ ಹೇಳೋ ಆ ಮಾತು ಏನು ಗೊತ್ತಾ..!

ಪ್ರಪಂಚದಲ್ಲಿ ಅತಿ ಹೆಚ್ಚು ಸ್ಯಾಲರಿ ಕೊಡೋ ದೇಶಗಳಿವು…! INTERESTING FACTS

ಜಪಾನ್ ನಲ್ಲಿ ಯಾರೂ ಸಹ ಓವರ್ ವೇಯಿಟ್ ಇಲ್ಲ – ಇದರ ಹಿಂದಿನ ಸೀಕ್ರೇಟ್ ಏನು…! Intresting facts

ಸ್ವತಂತ್ರ ದಿನವನ್ನೇ ಆಚರಿಸದ ವಿಶ್ವದ ಏಕಮಾತ್ರ ಹಿಂದೂ ದೇಶ ನೇಪಾಳ INTERSTING FACTS ..!

INTERSTING FACTS – ವೈದ್ಯರ ಬಿಳಿ ಕೋಟ್ ರಹಸ್ಯ, ಜಡ್ಜ್ ಪೆನ್ನಿನ ನಿಬ್ ಮುರಿಯುವುದ್ಯಾಕೆ, ಥಂಬ್ಸ್ ಅಪ್ ನ ಹಿಸ್ಟರಿ ಏನ್ ಗೊತ್ತಾ …!

ನಂದವಂಶ ನಿರ್ಣಾಮ ಮಾಡಿದ ಮಹಾನ್ ಜ್ಞಾನಿ ಚಾಣಕ್ಯನ ಜೀವನಕಥೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd