ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಟೀಮ್ ಇಂಡಿಯಾದ ಉಪನಾಯಕ ಶ್ರೇಯಸ್ ಅಯ್ಯರ್ ಮಿಸ್ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಅಯ್ಯರ್ ಈ ತಿಂಗಳಿನಲ್ಲಿ ಪೂರ್ತಿಯಾಗಿ ಫಿಟ್ ಆಗೋದು ಕೂಡ ಅನುಮಾನವಾಗಿದೆ.
ಆಸ್ಟ್ರೇಲಿಯಾದ ವಿರುದ್ಧದ ಏಕದಿನ ಸರಣಿಯ ವೇಳೆ ಶ್ರೇಯಸ್ ಅಯ್ಯರ್ ಗಂಭೀರವಾಗಿ ಗಾಯಗೊಂಡಿದ್ದರು. ಅಕ್ಟೋಬರ್ 25ರಂದು ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಅಯ್ಯರ್ ಗಾಯಗೊಂಡಿದ್ದರು. ಅಲೆಕ್ಸ್ ಕಾರ್ವೆ ಅವರ ಅದ್ಭುತ ಕ್ಯಾಚ್ ಹಿಡಿಯುವಾಗ ಅಯ್ಯರ್ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದಿದ್ದು, ಬಳಿಕ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಕೂಡ ನೀಡಲಾಗಿತ್ತು.
ಕಳೆದ ವಾರವಷ್ಟೇ ಸಿಡ್ನಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಅಯ್ಯರ್ಗೆ ಪೂರ್ತಿ ಚೇತರಿಸಿಕೊಳ್ಳಲು ಕನಿಷ್ಠ ಒಂದು ತಿಂಗಳ ಅವಶ್ಯಕತೆ ಇದೆ ಎಂದು ವೈದ್ಯಕಿಯ ವರದಿಗಳಿಂದ ತಿಳಿದು ಬಂದಿದೆ.
ಪಂದ್ಯವನ್ನು ಆಡಲು ಅಯ್ಯರ್ಗೆ ಒಂದು ತಿಂಗಳ ವಿಶ್ರಾಂತಿಯ ಅಗತ್ಯವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಆಯ್ಕೆ ಸಮಿತಿಯು ಅಯ್ಯರ್ ಅವರನ್ನು ಪರಿಗಣಿಸುವ ಸಾಧ್ಯತೆಗಳಿಲ್ಲ ಎಂದು ಬಿಸಿಸಿಐ ಮೂಲಗಳಿಂದಲೂ ತಿಳಿದುಬಂದಿದೆ.
ನಾನು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದೇನೆ. ಅಭಿಮಾನಿಗಳು ಹಾಗೂ ಹಿತೈಶಿಗಳ ಹಾರೈಕೆಗೆ ನಾನು ಚಿರಋಣಿಯಾಗಿದ್ದೇನೆ ಎಂದು ಶ್ರೇಯಸ್ ಅಯ್ಯರ್ ಸಾಮಾಜಿಕ ಜಾಲ ತಾಣದಲ್ಲಿ ಹೇಳಿಕೊಂಡಿದ್ದಾರೆ.
ನವೆಂಬರ್ 14ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ. ಬಳಿಕ ನವೆಂಬರ್ 30ರಿಂದ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಬಳಿಕ ಡಿಸೆಂಬರ್ 9ರಿಂದ ಐದು ಪಂದ್ಯಗಳ ಟಿ-20 ಸರಣಿ ನಡೆಯಲಿದೆ.
ಇಂದರ್ಜಿತ್ ಸಿಂಗ್ ಬಿಂದ್ರಾ : ಭಾರತೀಯ ಕ್ರಿಕೆಟ್ನ ಚಿತ್ರಣ ಬದಲಾಯಿಸಿದ ದಿಟ್ಟ ಆಡಳಿತಗಾರ..!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅರ್ಥಾತ್ ಬಿಸಿಸಿಐ.. ಇವತ್ತು ವಿಶ್ವ ಕ್ರಿಕೆಟ್ನ ಕುಬೇರ. ಕೈ ಬೆರಳಿನಲ್ಲಿ ವಿಶ್ವ ಕ್ರಿಕೆಟ್ ಅನ್ನು ಆಳುತ್ತಿರುವ ಬಿಸಿಸಿಐ ಇಷ್ಟೊಂದು ಶ್ರೀಮಂತಗೊಳ್ಳಲು ಪ್ರಮುಖ...







