ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ 5 ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಹೀಗಾಗಿ ಹಲವೆಡೆ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ನಡೆದಿವೆ. ಕಳೆದ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ಮಳೆಯಿಂದಾಗಿ ಸಾಕಷ್ಟು ತೊಂದರೆಗಳು ಉದ್ಭವಿಸಿವೆ.
ಬೆಂಗಳೂರಿನಲ್ಲಿ ಕಳೆದ ಐದು ದಿನಗಳಲ್ಲಿ ಮಳೆಯಿಂದಾಗಿ 271 ಮರಗಳು (Bengaluru Trees) ನೆಲಕ್ಕೆ ಉರುಳಿವೆ. ಬೆಂಗಳೂರು ದಕ್ಷಿಣ ವಲಯ, ಆರ್.ಆರ್. ನಗರ ಮತ್ತು ಪೂರ್ವ ವಲಯದಲ್ಲಿ ಹೆಚ್ಚು ಮರಗಳು ನೆಲಕ್ಕೆ ಉರುಳಿವೆ. ಅಲ್ಲದೇ, ಮರದ ರೆಂಬೆ, ಕೊಂಬೆ ಮುರಿದಿವೆ ಎಂದು 400ಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಬಿಬಿಎಂಪಿಗೆ ಮರ ಬಿದ್ದಿರುವ ಕುರಿತು ಸಾಲು ಸಾಲು ದೂರು ಕೇಳಿ ಬಂದಿವೆ. ಬಿಬಿಎಂಪಿ ಮರ ತೆರವು ಮಾಡಲು ಎಲ್ಲಾ 8 ವಲಯಗಳಲ್ಲಿ 26 ತಂಡ ರಚಿಸಲಾಗಿದೆ. ಮೇ 6ರಂದು 126 ಮರಗಳು, 8ರಂದು 70 ಮರ, 9 ರಂದು 44, 10 ರಂದು 32 ಮರ ಧರೆಗೆ ಬಿದ್ದಿವೆ ಎನ್ನಲಾಗಿದೆ.