ಕೊರೋನಾ ಲಸಿಕೆಯ ಎರಡನೇ ಡೋಸ್ ಪಡೆದ ನಂತರವೂ ಕೊರೋನಾ ಸೋಂಕಿಗೆ ತುತ್ತಾದವರೆಷ್ಟು – ಇಲ್ಲಿದೆ ಅಂಕಿಅಂಶ

1 min read
testing corona positive

ಕೊರೋನಾ ಲಸಿಕೆಯ ಎರಡನೇ ಡೋಸ್ ಪಡೆದ ನಂತರವೂ ಕೊರೋನಾ ಸೋಂಕಿಗೆ ತುತ್ತಾದವರೆಷ್ಟು – ಇಲ್ಲಿದೆ ಅಂಕಿಅಂಶ

ಕೊರೋನಾ ಲಸಿಕೆಯ ಎರಡನೇ ಡೋಸ್ ನಂತರವೂ, ಭಾರತದಲ್ಲಿ ಅನೇಕ ಜನರಿಗೆ ಕೊರೋನಾ ಸೋಂಕು ತಗುಲಿದೆ. ಆರೋಗ್ಯ ಸಚಿವಾಲಯವು ಇದಕ್ಕೆ ಸಂಬಂಧಿಸಿದಂತೆ ಬುಧವಾರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಮೊದಲ ಡೋಸ್ ಪಡೆದ ನಂತರ ಇದುವರೆಗೆ 21,353 ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದರೆ ಎರಡನೇ ಡೋಸ್ ನಂತರವೂ 5,709 ಜನರಿಗೆ ಕೊರೋನಾ ಸೋಂಕು ಧೃಡಪಟ್ಟಿದೆ.
testing corona positive
ಇಲ್ಲಿಯವರೆಗೆ ಕೊವಾಕ್ಸಿನ್ ಮೊದಲ ಡೋಸ್ ಅನ್ನು 93, 56,436 ಮಂದಿ‌ ಪಡೆದಿದ್ದು, 4208 ಜನರಿಗೆ ಸೋಂಕು ಕಾಣಿಸಿಕೊಂಡಿದೆ.
17, 37, 178 ಮಂದಿ‌ ಎರಡನೇ ಡೋಸ್ ಪಡೆದಿದ್ದು, 695 ಮಂದಿಯಲ್ಲಿ ಕೊರೋನಾ ಸೋಂಕು ‌ಕಾಣಿಸಿಕೊಂಡಿದೆ.

ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಅನ್ನು 10,03, 02, 745 ಮಂದಿ ಪಡೆದಿದ್ದು, 17145 ಮಂದಿಯಲ್ಲಿ ಕೊರೋನಾ ಸೋಂಕು ಧೃಡಪಟ್ಟಿದೆ.
15732754 ಮಂದಿ ಎರಡನೇ ಡೋಸ್ ಪಡೆದಿದ್ದರೆ, ಅವರಲ್ಲಿ 5014 ಮಂದಿಯಲ್ಲಿ ಕೊರೋನಾ ಸೋಂಕು ‌ಕಾಣಿಸಿದೆ.
testing corona positive

ಪ್ರಸ್ತುತ, ಕೊರೋನಾ ಲಸಿಕೆಯ ತುರ್ತು ಬಳಕೆಗಾಗಿ ಭಾರತದ ಮೂರು ಕಂಪನಿಗಳಿಗೆ ಅನುಮೋದನೆ ನೀಡಲಾಗಿದೆ.

ಇವುಗಳಲ್ಲಿ ಮೊದಲನೆಯದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಎರಡನೆಯ ಭಾರತ್ ಬಯೋಟೆಕ್ ಮತ್ತು ಮೂರನೆಯದು ಸ್ಪುಟ್ನಿಕ್ ಕಂಪನಿಯ ಲಸಿಕೆ. ಇದು ಪ್ರಸ್ತುತ ವಿದೇಶದಲ್ಲಿ ತಯಾರಾಗುತ್ತಿದ್ದು ಮುಂಬರುವ ಸಮಯದಲ್ಲಿ ಭಾರತದಲ್ಲಿ ತಯಾರಾಗಲಿದೆ.

#coronapositive #2nddose #coronavaccine

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd