ADVERTISEMENT
Tuesday, July 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

2007 ಟಿ-ಟ್ವೆಂಟಿ ವಿಶ್ವಕಪ್ – ಪಾಕ್ ವಿರುದ್ಧ ಬೌಲ್ ಔಟ್ ನಲ್ಲಿ ಧೋನಿಗೆ ಪ್ರಸಾದ್ ಹೇಳಿದ್ದೇನು ?

admin by admin
July 16, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

2007 ಟಿ-ಟ್ವೆಂಟಿ ವಿಶ್ವಕಪ್ – ಪಾಕ್ ವಿರುದ್ಧ ಬೌಲ್ ಔಟ್ ನಲ್ಲಿ ಧೋನಿಗೆ ಪ್ರಸಾದ್ ಹೇಳಿದ್ದೇನು ?

2007ರ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್… ಹೊಸ ಮಾದರಿಯ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಟೀಮ್ ಇಂಡಿಯಾದ ಸಾರಥ್ಯವನ್ನು ವಹಿಸಿದ್ದು ಮಹೇಂದ್ರ ಸಿಂಗ್ ಧೋನಿ. ಆ ಟೂರ್ನಿಗೆ ಟೀಮ್ ಇಂಡಿಯಾಗೆ ಕೋಚ್ ಇರಲಿಲ್ಲ. ತಂಡಕ್ಕೆ ಮ್ಯಾನೇಜರ್ ಆಗಿ ಲಾಲ್‍ಚಂದ್ ರಜಪೂತ್ ಮತ್ತು ಬೌಲಿಂಗ್ ಕೋಚ್ ಆಗಿ ವೆಂಕಟೇಶ್ ಪ್ರಸಾದ್ ಇದ್ರು. ಆಗ ಟೀಮ್ ಇಂಡಿಯಾ ಗೆಲ್ಲುತ್ತೆ ಅಂತ ಯಾರು ಕೂಡ ಊಹೆ ಮಾಡಿರಲಿಲ್ಲ. ಆದ್ರೆ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿ ಟೀಮ್ ಇಂಡಿಯಾ ಚಾಂಪಿಯನ್ ಆಗಿದ್ದು ಈಗ ಇತಿಹಾಸ.
ಟೂರ್ನಿಯಲ್ಲಿ ಟೀಮ್ ಇಂಡಿಯಾ ಹಲವು ರೋಚಕ ಪಂದ್ಯಗಳನ್ನು ಆಡಿ ಗೆಲುವು ಸಾಧಿಸಿತ್ತು. ಅದ್ರರಲ್ಲಿ ಒಂದು ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯ. ನಿಗದಿತ ಓವರ್‍ಗಳಲ್ಲಿ ಪಂದ್ಯ ಟೈಗೊಂಡ ಕಾರಣ ಫಲಿತಾಂಶವನ್ನು ನಿರ್ಧರಿಸಿದ್ದು ಬೌಲ್ ಔಟ್. ಈ ಬಾಲ್ ಔಟ್‍ನಲ್ಲೂ ಟೀಮ್ ಇಂಡಿಯಾ ರಿಸ್ಕ್ ತೆಗೆದುಕೊಂಡಿತ್ತು.
ತಂಡದ ಪ್ರಮುಖ ಬೌಲರ್‍ಗಳ ಬದಲು ಸೆಹ್ವಾಗ್ ಮತ್ತು ರಾಬಿನ್ ಉತ್ತಪ್ಪ ಅವರಿಗೆ ಬೌಲಿಂಗ್ ಮಾಡುವ ಅವಕಾಶ ನೀಡಲಾಗಿತ್ತು. ಈ ಬಗ್ಗೆ ವೆಂಕಟೇಶ್ ಪ್ರಸಾದ್ ಈಗ ಮಾತನಾಡಿದ್ದಾರೆ. ಸೆಹ್ವಾಗ್ ಮತ್ತು ಉತ್ತಪ್ಪ ಅವರಿಗೆ ಬೌಲಿಂಗ್ ಮಾಡುವ ಅವಕಾಶ ಹೇಗೆ ಸಿಕ್ಕಿತ್ತು ? ಧೋನಿಯನ್ನು ಯಾವ ರೀತಿ ಮನವೊಲಿಸಲಾಗಿತ್ತು ಎಂಬ ವಿಚಾರಗಳನ್ನು ವೆಂಕಟೇಶ್ ಪ್ರಸಾದ್ ಹೇಳಿಕೊಂಡಿದ್ದಾರೆ.
ವಿಶ್ವಕಪ್‍ಗೆ ಮುನ್ನವೇ ನಮಗೆ ನಿಯಮಗಳು ಗೊತ್ತಿದ್ದವು. ಆಗ ಪಂದ್ಯ ಟೈಗೊಂಡಾಗ ಸೂಪರ್ ಓವರ್ ಇರಲಿಲ್ಲ. ಬದಲಾಗಿ ಬೌಲ್ ಔಟ್ ನಿಯಮವಿತ್ತು. ಹೀಗಾಗಿ ನಾವು ಅಭ್ಯಾಸದ ವೇಳೆಯಲ್ಲಿ ಬೌಲ್ ಔಟ್ ಕೂಡ ಅಭ್ಯಾಸ ನಡೆಸುತ್ತಿದ್ದೇವು. ಅಲ್ಲದೆ ಬೌಲರ್ ಮತ್ತು ಬ್ಯಾಟ್ಸ್‍ಮೆನ್‍ಗಳ ನಡುವೆ ಸ್ಪರ್ಧೆಯನ್ನಿಟ್ಟಿದ್ದೇವು. ಹಲವು ಬ್ಯಾಟ್ಸ್ ಮೆನ್‍ಗಳು ಬೌಲ್ ಔಟ್‍ನಲ್ಲಿ ಚೆನ್ನಾಗಿಯೇ ಬೌಲಿಂಗ್ ಮಾಡುತ್ತಿದ್ದರು. ಧೋನಿ, ಸೆಹ್ವಾಗ್, ಉತ್ತಪ್ಪ ಹೀಗೆ ನೆಟ್ಸ್ ನಲ್ಲಿ ಸ್ಪರ್ಧೆ ನಡೆಯುತ್ತಿತ್ತು ಎಂದು ಆ ದಿನಗಳನ್ನು ಅಶ್ವಿನ್ ಜೊತೆಗಿನ ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಂಡಿದ್ದಾರೆ ವೆಂಕಟೇಶ್ ಪ್ರಸಾದ್.
ನಾನು ಇದನ್ನೆಲ್ಲಾ ಗಮನಿಸುತ್ತಿದ್ದೆ. ನನಗೆ ಗೊತ್ತಿತ್ತು. ಯಾರು ಸ್ಥಿರವಾಗಿ ವಿಕೆಟ್ ಮೇಲೆ ಬೌಲಿಂಗ್ ಮಾಡುತ್ತಾರೆ ಎಂಬುದು. ಸೆಹ್ವಾಗ್, ಉತ್ತಪ್ಪ ಹಾಗೂ ಹರ್ಭಜನ್ ಸ್ಥಿರವಾಗಿ ವಿಕೆಟ್ ಮೇಲೆ ಬೌಲಿಂಗ್ ಮಾಡುತ್ತಿದ್ದರು. ಆದ್ರೆ ಮೊದಲ ಪಂದ್ಯ ಟೈ ಆಗುತ್ತೆ ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಮೊದಲ ಪಂದ್ಯದ ಫಲಿತಾಂಶ ನಿರ್ಧಾರವಾಗಿದ್ದು ಕೂಡ ಬೌಲ್ ಔಟ್‍ನಲ್ಲೇ. ಆ ಸಂದರ್ಭದಲ್ಲಿ ನನಗೆ ಧೋನಿಯ ಮನವೋಲಿಸುವುದು ದೊಡ್ಡ ಕಷ್ಟವೇನೂ ಆಗಲಿಲ್ಲ. ಯಾಕಂದ್ರೆ ಇವರೆಲ್ಲಾ ನೆಟ್ಸ್ ಬೌಲ್ ಔಟ್‍ನಲ್ಲಿ ಚೆನ್ನಾಗಿಯೇ ಅಭ್ಯಾಸ ಮಾಡಿದ್ದರು ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.

Related posts

King Mohammed VI sent congratulations to Morocco’s national football team

FIFAWORLDCUP2026- ರಾಜನ ದೂರದೃಷ್ಟಿಯ ಯುಕ್ತಿ…! ಬಿಳಿ ಚಿನ್ನದ ಶಕ್ತಿ..! ಭಾರತಕ್ಕೆ ಪಾಠವಾಗಲಿದೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ..!

July 6, 2026
ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

July 6, 2026
Tags: bowl out rulsDHONIharbhajan singhpakisthanRobin Uthappat-20 worldcup 2007team indiaveerendra Sehwagvenkatesh prasad
ShareTweetSendShare
Join us on:

Related Posts

King Mohammed VI sent congratulations to Morocco’s national football team

FIFAWORLDCUP2026- ರಾಜನ ದೂರದೃಷ್ಟಿಯ ಯುಕ್ತಿ…! ಬಿಳಿ ಚಿನ್ನದ ಶಕ್ತಿ..! ಭಾರತಕ್ಕೆ ಪಾಠವಾಗಲಿದೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ..!

by admin
July 6, 2026
0

ಹಾಗಂತ... ಇದು ಖಂಡಿತವಾಗಿಯೂ ಫುಟ್‍ಬಾಲ್ ಜಗತ್ತಿನ ಕಾಲ್ಪನಿಕ ಕಥೆಯಂತೂ ಅಲ್ಲವೇ ಅಲ್ಲ. ಬದಲಾಗಿ ಮತ್ತೊಂದು ಸಣ್ಣ ದೇಶದ ಫುಟ್‍ಬಾಲ್ ಆಟದ ಮಹೋನ್ನತ ಪರ್ವದ ನೈಜ ಚಿತ್ರಣ. ಒಬ್ಬ...

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

by Shwetha
July 6, 2026
0

ಮನೆಯಲ್ಲಿರುವ ಹಳೆಯ ಚಿನ್ನವನ್ನು ಲಾಕರ್ ನಲ್ಲಿಟ್ಟು ಸುಮ್ಮನೆ ಕೂರುವ ಬದಲು ಅದರಿಂದಲೇ ಲಾಭ ಗಳಿಸುವ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ದೇಶದ ಚಿನ್ನದ ಆಮದು ಪ್ರಮಾಣವನ್ನು ತಗ್ಗಿಸುವ...

ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

by Shwetha
July 6, 2026
0

ಗರ್ಭಿಣಿಯಾಗಿದ್ದಾಗ ಪತಿ ತನಗೆ ಫಿಂಗರ್ ಚಿಪ್ಸ್ ಮತ್ತು ಮಾಂಸದೂಟ ತಿನ್ನಲು ಬಿಡಲಿಲ್ಲ ಎಂಬ ವಿಚಿತ್ರ ಕಾರಣ ನೀಡಿ ಪತ್ನಿಯೊಬ್ಬಳು ತನ್ನ ಎನ್ಆರ್ಐ ಪತಿಯ ಮೇಲೆ ದಾಖಲಿಸಿದ್ದ ಕ್ರಿಮಿನಲ್...

ಇರಾನ್ ನಾಯಕರನ್ನು ಒಂದೇ ಹೊಡೆತಕ್ಕೆ ಹೊಸಕಿ ಹಾಕಬಹುದು- ಖಮೇನಿ ಅಂತ್ಯಕ್ರಿಯೆಯಲ್ಲಿ ಹರಿದ ಜನಸಾಗರ ಕಂಡು ಟ್ರಂಪ್ ಆಶ್ಚರ್ಯ: ಜನರ ಕಣ್ಣೀರು ನಕಲಿ ಎಂದ ಅಮೆರಿಕ ಅಧ್ಯಕ್ಷ

ಇರಾನ್ ನಾಯಕರನ್ನು ಒಂದೇ ಹೊಡೆತಕ್ಕೆ ಹೊಸಕಿ ಹಾಕಬಹುದು- ಖಮೇನಿ ಅಂತ್ಯಕ್ರಿಯೆಯಲ್ಲಿ ಹರಿದ ಜನಸಾಗರ ಕಂಡು ಟ್ರಂಪ್ ಆಶ್ಚರ್ಯ: ಜನರ ಕಣ್ಣೀರು ನಕಲಿ ಎಂದ ಅಮೆರಿಕ ಅಧ್ಯಕ್ಷ

by Shwetha
July 6, 2026
0

ವಾಷಿಂಗ್ಟನ್: ಇರಾನ್ ದೇಶದ ಉನ್ನತ ನಾಯಕತ್ವವನ್ನು ಕೇವಲ ಒಂದೇ ಒಂದು ದಾಳಿಯ ಮೂಲಕ ಸಂಪೂರ್ಣವಾಗಿ ನಾಶಪಡಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಘಾತಕಾರಿ...

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

by Shwetha
July 6, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಅಧಿಕೃತವಾಗಿ ನೋಂದಣಿಯಾದರೆ ಮಾತ್ರ ಇಂತಹ ಅಕ್ರಮಗಳಿಗೆ ಮುಕ್ತಿ ಸಿಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದ್ದಾರೆ. ಅಯೋಧ್ಯಾ ರಾಮಮಂದಿರದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram