ಈ ದ್ವಿದಳ ಧಾನ್ಯ ಎಣ್ಣೆಕಾಳು ಬೆಳೆಯುತ್ತಿದ್ದರೆ ಈ ಮಾಹಿತಿ ನಿಮಗಾಗಿ..
ಎಲ್ಲಾ ರೀತಿಯ ಹವಾಗುಣಕ್ಕೂ ಹೊಂದಿಕೊಳ್ಳುವ ಗುಣ ಹೊಂದಿರುವ ಈ ಬೆಳೆಯನ್ನು ನೀರಾವರಿ ಹಾಗೂ ಖುಷ್ಠಿಯಲ್ಲಿ ಬೆಳೆಯಬಹುದಾಗಿದೆ.
ನೀರಾವರಿ ಬೆಳೆಯಿಂದ ಹೆಚ್ಚು ಇಳುವರಿ ಪಡೆಯಬಹುದಾಗಿದೆ. ಉತ್ತಮ ತಳಿಗಳನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.
ಹೆಚ್ಚು ಇಳುವರಿ ಕೊಡುವ ಶೇಂಗಾ ತಳಿಗಳು
ಜಿಕೆವಿಕೆ-5 ತಳಿಯ ವಿಶೇಷತೆ:
ಈ ತಳಿಯನ್ನು ಮುಂಗಾರು ಮತ್ತು ಬೇಸಿಗೆಯಲ್ಲಿ ಬೆಳೆಯಬಹುದಾಗಿದೆ.
ಈ ಬೆಳೆ 110-120 ದಿನಗಳಲ್ಲಿ ಕಟಾವಿಗೆ ಬರುತ್ತದೆ.
ನೀರಾವರಿಯಲ್ಲಿ ಪ್ರತಿ ಎಕರೆಗೆ 11 ರಿಂದ 12 ಕ್ವಿಂಟಲ್ ಬೆಳೆಯಬಹುದು.
ಕುಷ್ಕಿಯಲ್ಲಿ(ಒಣಬೇಸಾಯ) ಪ್ರತಿ ಎಕರೆಗೆ 8 ರಿಂದ 10 ಕ್ವಿಂಟಾಲ್ ಬೆಳೆಯಬಹುದು.
ಬೆಳೆ ಕಟಾವಿನವರೆಗೂ ಎಲೆಗಳು ಹಸಿರಾಗಿರುತ್ತವೆ.
ತಡವಾದ ಎಲೆಚುಕ್ಕೆ ರೋಗಕ್ಕೆ ಮಧ್ಯಮವಾಗಿ ನಿರೋಧಕತೆ ಹೊಂದಿದೆ.
ಹಸಿರು ಬಣ್ಣದ ಎಲೆಗಳನ್ನು ಹೊಂದಿರುತ್ತದೆ.
ಐಸಿಜಿವಿ-91114
ಈ ಬೆಳೆಯು ಮುಂಗಾರು ಮತ್ತು ಬೇಸಿಗೆಯಲ್ಲಿ ಕಾಯಿ ಬಿಡಬಹುದಾಗಿದೆ.
95 ರಿಂದ 100 ದಿನಗಳಲ್ಲಿ ಕಟಾವಿಗೆ ಬರುತ್ತದೆ.
ಇದು ಅಲ್ಪಾವಧಿಯ ತಳಿಯಾಗಿದೆ.
8 ರಿಂದ 10 ಕ್ವಿಂಟಾಲ್ ಪ್ರತಿ ಎಕರೆಗೆ ಬೆಳೆ ಪಡೆಯಬಹುದು.
ಕೆಸಿಜಿ-6
ಈ ತಳಿಯನ್ನು ಮುಂಗಾರು ಮತ್ತು ಬೇಸಿಗೆಯಲ್ಲಿ ಬೆಳೆಯಬಹುದು.
ಇದು 110-115 ದಿನಗಳ ಕಾಲಾವಧಿಯಲ್ಲಿ ಕಟಾವಿಗೆ ಬರುತ್ತದೆ.
ಪ್ರತಿ ಎಕರೆಗೆ 10 ರಿಂದ 12 ಕ್ವಿಂಟಲ್ ಇಳುವರಿ ಪಡೆಯಬಹುದು.
ಅಲ್ಪಾವಧಿ ತಳಿ, ಅಧಿಕ ಎಣ್ಣೆ ಅಂಶ ವಸ್ತುವನ್ನು ಹೊಂದಿರತ್ತದೆ.
ಜಿಪಿಬಿಡಿ-4
ಈ ತಳಿಯು ಸಹ ಮುಂಗಾರು ಮತ್ತು ಬೇಸಿಗೆಯಲ್ಲಿ ಬಿಡುತ್ತದೆ.
ಇದು 105-110 ದಿನದಲ್ಲಿ ಕಟಾವಿಗೆ ಬರುತ್ತದೆ.
ಇದು ಪ್ರತಿ ಎಕರೆಗೆ 6 ರಿಂದ 8 ಕ್ವಿಂಟಾಲ್ ಇಳುವರಿ ಪಡೆಯಬಹುದು.
ತುಕ್ಕುರೋಗ ಮತ್ತು ಎಲೆ ಚುಕ್ಕೆ ರೋಗಕ್ಕೆ ನಿರೋಧಕ ತಳಿಯಾಗಿದೆ.
ಟಿಎಂವಿ-2
ಈ ಬೆಳೆಯನ್ನು ಸಹ ಮುಂಗಾರು ಮತ್ತು ಬೇಸಿಗೆಯಲ್ಲಿ ಬೆಳೆಯ ಬಹುದಾಗಿದೆ.
ಈ ಬೆಳೆಯನ್ನು ಎಲ್ಲಾ ವಲಯಗಳಲ್ಲಿ ಬೆಳೆಯಬಹುದು.
ಇದು 100 ರಿಂದ 120 ದಿನಗಳಲ್ಲಿ ಕಟಾವಿಗೆ ಬರುತ್ತದೆ.
8 ರಿಂದ 10 ಕ್ವಿಂಟಾಲ್ ಪ್ರತಿ ಎಕರೆಗೆ ಬೆಳೆ ಪಡೆಯಬಹುದು.
ಜಿಎಲ್-24
ಈ ೧ತಳಿಯು 95 ರಿಂದ 100 ದಿನಗಳಲ್ಲಿ ಕಟಾವಿಗೆ ಬರುತ್ತದೆ.
ಕಾಯಿ ಮತ್ತು ಬೀಜ ದಪ್ಪ ಮತ್ತು ಆಕರ್ಷಕವಾಗಿರುತ್ತದೆ.
ಯಾವ ನೆಲಗಡಲೆ ಬೀಜಗಳು:
ನೆಲಗಡಲೆ ತಳಿ ಐಸಿಜಿವಿ 03043 ಭಾರತದಲ್ಲಿ ಬೆಳೆಯುವ ತಳಿಗಳಲ್ಲಿ 53% ರಷ್ಟು ಹೆಚ್ಚಿನ ತೈಲ ಅಂಶವನ್ನು ಹೊಂದಿದೆ. ಸಾಮಾನ್ಯ ತಳಿಗಳು ಸುಮಾರು 48% ಮತ್ತು ಕೃಷಿ ಉತ್ಪನ್ನಗಳಲ್ಲಿ ಪ್ರತಿ ಹೆಚ್ಚುವರಿ 1% ತೈಲದೊಂದಿಗೆ ಹೆಚ್ಚಿನ ಬೆಲೆಯನ್ನು ಪಡೆಯಲಾಗುತ್ತದೆ.
ಬೀಜೋಪಚಾರ :
ಬಿತ್ತನೆಗೆ ಮುಂಚೆಯೇ ನೆಲದಲ್ಲಿ (ಶೇಂಗಾ) ಬೀಜವನ್ನು 2.5 ಗ್ರಾಂ ಥೈರಾಮ್ ಪುಡಿಯನ್ನು ೧ ಕಿ.ಗ್ರಾಂ ಬೀಜಕ್ಕೆ ಬೆರಸಿ, ನೆರಳಿನಲ್ಲಿ ಒಣಗಿಸಬೇಕು.
ತದನಂತರ ಒಂದು ಧಾನ್ಯ ಬಿತ್ತನೆ ಬೀಜಕ್ಕೆ 150 ಗ್ರಾಂ ರೈಜೋಬಿಯಂ ಮತ್ತು 400 ಗ್ರಾಂ ರಂಜಕ ಕರಗಿಸುವ (ಪಿಎಸ್.ಬಿ) ಜೀವಾಣು ಜೈವಿಕ ಗೊಬ್ಬರಗಳಿಂದ ಉಪಚರಿಸಿ ಬಿತ್ತನೆ ಮಾಡಬಹುದು.
ಗೊಣ್ಣೆ ಹುಳು, ಅಥವಾ ಗೆದ್ದಲು ಹುಳುಗಳ ಬಾಧೆಯಲ್ಲಿ, ಅವುಗಳ ಹತೋಟಿಗೆ ಪ್ರತಿ ಕಿಲೋ.ಗ್ರಾಂ ಬಿತ್ತನೆ ಬೀಜಕ್ಕೆ 15 ಮಿ.ಲೀ ಕ್ಲೋರಾಫೈರಿಫಾಸ್ ಲೇಪಿಸಿ ಬಿತ್ತನೆ ಮಾಡಬೇಕು.
ಈ ರೀತಿ ಬೆಳೆದಲ್ಲಿ ಶೇಂಗಾ ತಳಿಗಳಿಂದ ಹೆಚ್ಚು ಇಳುವರಿ ಪಡೆಯುವುದು ಖಚಿತವಾಗಿದೆ.








