ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವ ನೈಸರ್ಗಿಕ ಆಹಾರಗಳು Saakshatv healthtips WBC Count
ನಮ್ಮ ದೇಹದಲ್ಲಿರುವಂತಹ ಬಿಳಿ ರಕ್ತ ಕಣಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಮ್ಮನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ. ಕೆಲವು ಆಹಾರವನ್ನು ಸರಿಯಾದ ಸಮಯಕ್ಕೆ ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ಅದು ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಿ ನಮ್ಮ ದೇಹ ಅನಾರೋಗ್ಯಕ್ಕೆ ತುತ್ತಾಗದಂತೆ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳಬಹುದು. ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಬಹುದಾದ ಆಹಾರಗಳು ಯಾವುದೆಂದು ತಿಳಿಯೋಣ. Saakshatv healthtips WBC Count
ಕಿತ್ತಳೆ ಹಣ್ಣು : ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ನೆರವಾಗುತ್ತದೆ.
ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿ ಪ್ರೊಟೀನ್, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಸೇರಿದಂತೆ ಹಲವಾರು ಪೌಷ್ಟಿಕಾಂಶಗಳಿಂದ ಕೂಡಿದೆ. ಇದು ಅಸಿಡಿಟಿ, ಗ್ಯಾಸ್ಟ್ರಿಕ್ ಇತ್ಯಾದಿ ಸಮಸ್ಯೆಗಳಿಗೆ ಬೆಳ್ಳುಳ್ಳಿಯು ಪರಿಣಾಮಕಾರಿಯಾಗಿದೆ.
ಬಸಳೆ ಸೊಪ್ಪು : ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಬಸಳೆ ಸೊಪ್ಪಿನ ಸೇವನೆಯು ದೇಹದ ಆರೋಗ್ಯಕ್ಕೆ ಉತ್ತಮವಾಗಿದೆ.
ಸಿಹಿ ಗೆಣಸು : ಸಿಹಿ ಗೆಣಸಿನಲ್ಲಿ ವಿಟಮಿನ್ ಎ ಅಧಿಕವಾಗಿದ್ದು, ಇದು ಪೋಷಕಾಂಶ ಹಾಗೂ ನಾರಿನಾಂಶವನ್ನು ಒದಗಿಸುತ್ತದೆ. ಸಿಹಿ ಗೆಣಸು ಜೀರ್ಣ ಕ್ರಿಯೆ ಪ್ರಕ್ರಿಯೆಯನ್ನು ಸರಾಗವಾಗಿ ಮಾಡಲು ನೆರವಾಗುತ್ತದೆ.
ಅಣಬೆ : ಅಣಬೆ ಅತೀ ಹೆಚ್ಚು ಪ್ರೊಟೀನ್ ನಿಂದ ಕೂಡಿದ ಆಹಾರವಾಗಿದ್ದು ಇದು ವಿಟಮಿನ್ ಮಿನರಲ್, ಅಮೈನೋ ಆಸಿಡ್ ಆಂಟಿ ಬಯೋಟಿಕ್ ಇತ್ಯಾದಿಗಳಿಂದ ಕೂಡಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕೋಸು ಗಡ್ಡೆ : ಕೋಸು ಗಡ್ಡೆಯು ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಕೋಸು ಗಡ್ಡೆಯನ್ನು ಸೂಪ್ ಅಥವಾ ಸಲಾಡ್ ಮಾಡಿ ಸಹ ಸೇರಿಸಬಹುದಾಗಿದೆ. ಕೋಸು ಗಡ್ಡೆ ಸೇವನೆಯಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ.
ಕಿವಿ ಹಣ್ಣು : ಕಿವಿ ಹಣ್ಣಿನಲ್ಲಿ ಪೋಷಕಾಂಶಗಳು ತುಂಬಿದ್ದು, ಪ್ರತೀ ದಿನ ಈ ಹಣ್ಣನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ.
ಜವೇ ಗೋಧಿ : ಜವೇ ಗೋಧಿಯಲ್ಲಿ ಪೌಷ್ಟಿಕಾಂಶಗಳು ಅಧಿಕವಾಗಿದ್ದು, ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬಾದಾಮಿ : ಬಾದಾಮಿಯಲ್ಲಿ ಶೇಕಡಾ 50 ರಷ್ಟು ವಿಟಮಿನ್ ಅಂಶವಿದ್ದು, ಇದು ಖಿನ್ನತೆಯನ್ನು ನಿವಾರಿಸಲು ಪರಿಣಾಮಕಾರಿಯಾಗಿದೆ. ಬಾದಾಮಿ ಸೇವನೆಯಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ.
ಮೊಸರು : ಮೊಸರಿನಲ್ಲಿ ವಿಟಮಿನ್ ಡಿ ಇದ್ದು , ಇದರ ನಿಯಮಿತ ಸೇವನೆಯಿಂದ ಶೀತ ಕೆಮ್ಮು ಇತ್ಯಾದಿ ಕಾಯಿಲೆಗಳಿಂದ ದೂರವಿರಬಹುದು. ಮೊಸರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣ ಕ್ರಿಯೆ ಸರಾಗವಾಗಿ ಆಗಲು ನೆರವಾಗುತ್ತದೆ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ.
ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.
ಪಿಗ್ಮೆಂಟೇಶನ್ ಸಮಸ್ಯೆಗೆ ಮನೆಮದ್ದುಗಳು https://t.co/KQIOaSITSz
— Saaksha TV (@SaakshaTv) February 20, 2021
124 ತಿಂಗಳಲ್ಲಿ ನಿಮ್ಮ ಹಣ ದ್ವಿಗುಣ- ಪೋಸ್ಟ್ ಆಫೀಸ್ ನ ಅದ್ಭುತ ಯೋಜನೆ https://t.co/3C2UQsLiAu
— Saaksha TV (@SaakshaTv) February 20, 2021
ಮಂಗಳೂರು ಶೀರಾ/ಕೇಸರಿಬಾತ್ https://t.co/ZcrcZqQjO1
— Saaksha TV (@SaakshaTv) February 20, 2021