ಮದುವೆ ಮನೆಗಳಲ್ಲಿ ವಿಶೇಷವಾಗಿ ತಯಾರಿಸುವ ನುಗ್ಗೆ ಕಾಯಿ ಸಾರು, ಎಲ್ಲರಿಗೂ ಇಷ್ಟ ಅಲ್ವಾ.. ಹಾಗದ್ರೆ ಈ ಸಾರು ತಯಾರಿಸುವ ವಿಧಾನವನ್ನು ಹಂತ ಹಂತವಾಗಿ ತಿಳಿಯೋಣ.
ಬೇಕಾಗುವ ಸಾಮಗ್ರಿಗಳು:
– ನುಗ್ಗೆಕಾಯಿ: 3-4
– ತೊಗರಿಬೇಳೆ: 200 ಗ್ರಾಂ
– ಟೊಮೆಟೊ: 2
– ಹಸಿಮೆಣಸು: 2-3
– ಅರಿಶಿನ: 1/4 ಚಮಚ
– ಹುಣಸೆಹಣ್ಣು ರಸ: 2 ಚಮಚ
– ಬೆಲ್ಲ: 1 ಚಮಚ
– ಉಪ್ಪು: ರುಚಿಗೆ ತಕ್ಕಷ್ಟು
– ಒಗ್ಗರಣೆಗಾಗಿ: ಎಣ್ಣೆ, ಸಾಸಿವೆ, ಕರಿಬೇವು, ಜೀರಿಗೆ, ಒಣಮೆಣಸು
ಮಾಡುವ ವಿಧಾನ:
ತೊಗರಿಬೇಳೆ ಬೇಯಿಸುವುದು
ಮೊದಲು ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು, ಕುಕ್ಕರ್‌ನಲ್ಲಿ 3-4 ಶೀಟುಗಳು ಬರುವವರೆಗೆ ಬೇಯಿಸಿ. ಇದಕ್ಕೆ ಅರಿಶಿನ ಮತ್ತು ಸ್ವಲ್ಪ ಎಣ್ಣೆ ಸೇರಿಸಿ ಬೇಯಿಸಬೇಕು.
ನುಗ್ಗೆಕಾಯಿ ತಯಾರಿ
ನುಗ್ಗೆಕಾಯಿಯನ್ನು 2-3 ಇಂಚು ಉದ್ದದ ತುಂಡುಗಳಾಗಿ ಕತ್ತರಿಸಿ, ಬೇರೆ ಪಾತ್ರೆಯಲ್ಲಿ ನೀರು ಹಾಕಿ ಬೇಯಿಸಬೇಕು. ನುಗ್ಗೆಕಾಯಿ ಅರ್ಧ ಬೇಯಿದ ನಂತರ, ಟೊಮೆಟೊ ಮತ್ತು ಹಸಿಮೆಣಸು ಸೇರಿಸಿ, ಚೆನ್ನಾಗಿ ಕುದಿಯಲು ಬಿಡಿ.
ಸಾರು ತಯಾರಿ
ಬೇಯಿಸಿದ ತೊಗರಿಬೇಳೆಯನ್ನು ನುಗ್ಗೆಕಾಯಿ ಮಿಶ್ರಣಕ್ಕೆ ಸೇರಿಸಿ, ಇದಕ್ಕೆ ಹುಣಸೆಹಣ್ಣು ರಸ, ಬೆಲ್ಲ, ಉಪ್ಪು ಸೇರಿಸಿ, ಚೆನ್ನಾಗಿ ಕುದಿಯಲು ಬಿಡಿ. ಸಾರು ಚೆನ್ನಾಗಿ ಕುದಿದ ನಂತರ, ಒಗ್ಗರಣೆ ಹಾಕಿ.
ಒಗ್ಗರಣೆ
ಒಗ್ಗರಣೆಗಾಗಿ, ಒಂದು ಚಮಚ ಎಣ್ಣೆ ಕಾದ ನಂತರ, ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸು ಹಾಕಿ, ಈ ಮಿಶ್ರಣವನ್ನು ಸಾರಿನ ಮೇಲೆ ಹಾಕಿ.
ಮದುವೆ ಮನೆ ಶೈಲಿಯ ನುಗ್ಗೆಕಾಯಿ ಸಾರು ಸವಿಯಲು ಸಿದ್ಧವಾಗಿದೆ. ಈ ಸಾರು ಬಿಸಿ ಬಿಸಿ ಅನ್ನದೊಂದಿಗೆ ಸೇವಿಸಿದರೆ ಉತ್ತಮ








