ಸಿಹಿ ಕುಂಬಳ ಬೋಂಡ ಮಾಡೋದು ಹೇಗೆ..? (Sweet Pumpkin Bonda) ತಿಳಿಯೋಣ ಬನ್ನಿ…
ಬೇಕಾಗುವ ಸಾಮಗ್ರಿಗಳು:
1 ಬೌಲ್ ಕಡ್ಲೆಬೇಳೆ ಹಿಟ್ಟು
10 ಪೀಸ್ ಸಿಹಿ ಕುಂಬಳಕಾಯಿ (ತೆಳ್ಳಗೆ ಸ್ಲೈಸ್ ಮಾಡಿದ್ದು)
1 ಟೇಬಲ್ ಸ್ಪೂನ್ ಜೀರಿಗೆ
1 ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು
1/4 ಟೀ ಸ್ಪೂನ್ ಅರಿಶಿನದ ಪುಡಿ
1 ಟೀ ಸ್ಪೂನ್ ಅಚ್ಚಕಾರದ ಪುಡಿ
ಎಣ್ಣೆ ಕರಿಯಲು
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
1. ಒಂದು ಬೌಲಿಗೆ ಕಡ್ಲೆಬೇಳೆ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಉಪ್ಪು, ಅರಿಶಿನ, ಅಚ್ಚಕಾರದ ಪುಡಿ ಹಾಕಿ.
2. ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ, ಹಿಟ್ಟು ಬೋಂಡ ಹಿಟ್ಟಿನ ಹದಕ್ಕೆ ಬರುವವರೆಗೂ ಕಲಸಿ.
3. ಕುಂಬಳಕಾಯಿ ಸ್ಲೈಸ್‌ಗಳನ್ನು ತೆಗೆದುಕೊಂಡು, ಹಿಟ್ಟಿನಲ್ಲಿ ಅದ್ದಿ.
4. ಕಾದ ಎಣ್ಣೆಯಲ್ಲಿ ಎರಡು ಕಡೆ ಕರಿಯಿರಿ, ನಂತರ ತೆಗೆಯಿರಿ.
ಸಿಹಿ ಕುಂಬಳ ಬೋಂಡ ಈಗ ಸರ್ವ್ ಮಾಡಲು ತಯಾರಾಗಿದೆ!
ಚಳಿಗಾಲಕ್ಕೆ ಬಿಸಿ ಬಿಸಿ ಸಿಹಿ ಕುಂಬಳ ಬೋಂಡ Try it Once.








