Smartphone – ಮೊಬೈಲ್ ನೀರಿನಲ್ಲಿ ಬಿದ್ದ ತಕ್ಷಣ ಹೀಗೆ ಮಾಡಿದರೆ ಸರ್ವಿಸ್ ಸೆಂಟರ್ ಗೆ ಹೋಗುವ ಅವಶ್ಯಕತೆಯಿಲ್ಲ.
ಮಳೆಗಾಲ ಶುರುವಾಗಿದೆ. ದೇಶಾದ್ಯಂತ ಭಾರೀ ಮಳೆಯೂ ಕಂಡುಬರುತ್ತಿದೆ. ಮಳೆಗಾಲದಲ್ಲಿ ನೀರಿನಿಂದ ಸ್ಮಾರ್ಟ್ ಫೋನ್ ಅನ್ನ ರಕ್ಷಿಸುವುದು ಬಹಳ ಮುಖ್ಯ. ಪೋನ್ ಒಳಗೆ ಹೋಗುವ ಸ್ವಲ್ಪ ಪ್ರಮಾಣದ ನೀರು ಸಹ ನಿಮ್ಮ ಮೊಬೈಲ್ ಅನ್ನ ಹಾನಿಗೊಳಿಸಬಹುದು.
ನಿಮ್ಮ ಫೋನ್ ಕೂಡ ಮಳೆಯಲ್ಲಿ ಒದ್ದೆಯಾಗಿದ್ದರೆ, ಅಥವಾ ನೀರಿನಲ್ಲಿ ಬಿದ್ದಿದ್ದರೆ ತಕ್ಷಣವೇ ಚಿಂತಿಸಬೇಕಿಲ್ಲ. ಈ ವರದಿಯಲ್ಲಿ ಮನೆಯಲ್ಲಿಯೇ ಸುಲಭವಾಗಿ ಸ್ಮಾರ್ಟ್ ಫೋನ್ ಅನ್ನ ಹೇಗೆ ಸರಿಪಡಿಸಬಹುದು ಎಂಬುದನ್ನ ನಾವು ತಿಳಿಸುತ್ತೇವೆ.
ಮೊಬೈಲ್ ನೀರಿನಿಂದ ಒದ್ದೆಯಾದರೆ ಈ ಹಂತಗಳನ್ನು ಅನುಸರಿಸಿ
ಮಳೆಯಲ್ಲಿ ಫೋನ್ ನೆನೆದಾಗ, ಮೊದಲು ಫೋನ್ ಅನ್ನು ಸ್ವಿಚ್ ಆಫ್ ಮಾಡಿ, ಇದರಿಂದ ನೀವು ಫೋನ್ ಅನ್ನು ಶಾರ್ಟ್ ಸರ್ಕ್ಯೂಟ್ ಆಗದಂತೆ ತಡೆಯಬಹುದು. ಎಷ್ಟೋ ಸಲ ಫೋನ್ ಒದ್ದೆಯಾದಾಗ ನೀರು ಫೋನಿನೊಳಗೆ ಹೋಗಿರುವುದಿಲ್ಲ. ಆದರೆ ಮೊಬೈಲ್ ಪವರ್ ಆನ್ ನಲ್ಲಿದ್ದರೆ ಸ್ವಲ್ಪ ಪ್ರಮಾಣದ ನೀರಿನಿಂದಲೂ ಶಾರ್ಟ್ ಸರ್ಕ್ಯೂಟ್ ಆಗಬಹುದು. ಆದ್ದರಿಂದ, ಫೋನ್ ಅನ್ನು ತಕ್ಷಣವೇ ಆಫ್ ಮಾಡುವುದು ಉತ್ತಮ.
ಇದರ ನಂತರ, ಫೋನ್‌ನ ಬ್ಯಾಟರಿ, ಸಿಮ್ ಕಾರ್ಡ್, ಮೆಮೊರಿ ಕಾರ್ಡ್ ಇತ್ಯಾದಿಗಳೊಂದಿಗೆ ಫೋನ್‌ನ ಹಿಂದಿನ ಕವರ್ ಅನ್ನು ಹೊರತೆಗೆಯಿರಿ. ಮೊಬೈಲ್ ನೊಂದಿಗೆ ಇವುಗಳೂ ಹಾಳಾಗುವುದನ್ನ ತಡೆಗಟ್ಟಬಹುದು. ನಂತರ ಟಿಶ್ಯೂ ಪೇಪರ್ ಅಥವಾ ಹತ್ತಿ ಬಟ್ಟೆಯಿಂದ ನೀಎಉ ತೇವಾಂಶ ಇರದಂತೆ ಒರೆಸಿಬಿಡಿ. ಅದೇ ರೀತಿಯಲ್ಲಿ ಫೋನ್ ಅನ್ನು ಸ್ವಚ್ಛಗೊಳಿಸಿ.
ನೀರು ಮತ್ತು ತೇವಾಂಶವನ್ನು ಹೀರಿಕೊಳ್ಳಲು ಮನೆಯಲ್ಲಿ ಇರುವ ಅಕ್ಕಿ ಅತ್ಯುತ್ತಮ ಆಯ್ಕೆ. ಫೋನ್ ಅನ್ನು ಸಂಪೂರ್ಣವಾಗಿ ಒರೆಸಿದ ನಂತರ, ನೀವು ಅದನ್ನು ಕನಿಷ್ಠ 24 ಗಂಟೆಗಳ ಕಾಲ ಅಕ್ಕಿಯ ಪೆಟ್ಟಿಗೆಯಲ್ಲಿ ಮುಚ್ಚಿಡಬೇಕು. ನೀವು ಅಕ್ಕಿಯ ಬದಲಿಗೆ ಸಿಲಿಕಾ ಜೆಲ್ ಪ್ಯಾಕ್‌ಗಳನ್ನು ಸಹ ಬಳಸಬಹುದು. ಫೋನ್ ಅನ್ನು ಮತ್ತೆ ಮತ್ತೆ ಆನ್ ಮಾಡಲು ಪ್ರಯತ್ನಿಸಬೇಡಿ, ಇದು ಫೋನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಅನ್ನು ಉಂಟುಮಾಡಬಹುದು. ನೆನಪಿಡಿ 1 ರಿಂದ 2 ದಿನಗಳವರೆಗೆ ಫೋನ್ ಅನ್ನು ಅಕ್ಕಿ ಪೆಟ್ಟಿಗೆಯಲ್ಲಿ ಇರಿಸಲು ಪ್ರಯತ್ನಿಸಿದ ನಂತರವೇ ಮೊಬೈಲ್ ಅನ್ನ ಬಳಸಬೇಕು..