ಜು.1ರಿಂದ ಹುಬ್ಬಳ್ಳಿಯಿಂದ – ಬೆಂಗಳೂರು, ಮುಂಬೈ, ಚೆನ್ನೈ, ಕೊಚ್ಚಿಗೆ ನೇರ ವಿಮಾನ ಸಂಚಾರ ಪುನರಾರಂಭ
ಹುಬ್ಬಳ್ಳಿ : ಕೋವಿಡ್ ಹಾವಳಿ ಹೆಚ್ಚಾದ ಬೆನ್ನಲ್ಲೇ ದೇಶಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗಿತ್ತು.. ಜೊತೆಗೆ ವಿಮಾನ ಸಂಚಾರದ ಮೇಲೂ ನಿರ್ಬಂಧನೆಗಳನ್ನ ಹೇರಲಾಗಿತ್ತು.. ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗ್ತಿರುವ ಹಿನ್ನೆಲೆ ಹುಬ್ಬಳ್ಳಿಯಿಂದ ಬೆಂಗಳೂರು, ಮುಂಬೈ, ಚೆನ್ನೈ, ಮತ್ತು ಕೊಚ್ಚಿಗೆ ರದ್ದಾಗಿದ್ದ ನೇರ ವಿಮಾನ ಸೌಲಭ್ಯ ಜು.1ರಿಂದ ಪುನರಾರಂಭವಾಗಲಿವೆ.
ಅಲಯನ್ಸ್ ಏರ್ ಸಂಸ್ಥೆ ಜು. 9ರಿಂದ ಹುಬ್ಬಳ್ಳಿ-ಹೈದರಾಬಾದ್ ನಡುವೆ ಮತ್ತು ಇಂಡಿಗೊ ಸಂಸ್ಥೆ ಆ.2ರಿಂದ ಅಹಮದಾಬಾದ್ಗೆ ನೇರ ವಿಮಾನ ಆರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂಡಿಗೊ ಸಂಸ್ಥೆಯ ವಿಮಾನ ಅಂದಿನಿಂದ ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 2.45ಕ್ಕೆ ಮುಂಬೈ ತಲುಪಲಿದೆ. ಮುಂಬೈನಿಂದ ಮ. 3.15ಕ್ಕೆ ಹೊರಟು 4.40ಕ್ಕೆ ಇಲ್ಲಿಗೆ ಬರಲಿದೆ. ಚೆನ್ನೈನಿಂದ ಬೆಳಿಗ್ಗೆ 6 ಗಂಟೆಗೆ ಹೊರಟು 8.10ಕ್ಕೆ ಇಲ್ಲಿಗೆ ಬರಲಿದೆ. ಸಂಜೆ 5.20ಕ್ಕೆ ಇಲ್ಲಿಂದ ಹೊರಟು 7.10ಕ್ಕೆ ಚೆನ್ನೈ ಮುಟ್ಟಲಿದೆ. ಬೆಳಿಗ್ಗೆ 11.40ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ತಲುಪಲಿದೆ.
ಇನ್ನೊಂದು ವಿಮಾನ ರಾತ್ರಿ 8.30ಕ್ಕೆ ಹೊರಟು ರಾ. 9.55ಕ್ಕೆ ರಾಜಧಾನಿ ಮುಟ್ಟಲಿದೆ. ಬೆಂಗಳೂರಿನಿಂದ ಬೆಳಿಗ್ಗೆ 7.15 ಹಾಗೂ ಮಧ್ಯಾಹ್ನ 3.30ಕ್ಕೆ ಹೊರಡುವ ವಿಮಾನಗಳು ಒಂದು ಗಂಟೆ 20 ನಿಮಿಷದಲ್ಲಿ ಇಲ್ಲಿಗೆ ಬರಲಿವೆ. ಕೊಚ್ಚಿಗೆ, ಹುಬ್ಬಳ್ಳಿಯಿಂದ ಬೆಳಿಗ್ಗೆ 8.35ಕ್ಕೆ ಹೊರಟು 10.20ಕ್ಕೆ ಅಲ್ಲಿಗೆ ಮುಟ್ಟಲಿದೆ. ಅಲ್ಲಿಂದ ಬೆ. 10.50ಕ್ಕೆ ಹೊರಟು ಮಧ್ಯಾಹ್ನ 12.40ಕ್ಕೆ ವಾಣಿಜ್ಯ ನಗರಿಗೆ ಬರಲಿದೆ. ಬೆಳಗ್ಗೆ 9 ಗಂಟೆಗೆ ಇಲ್ಲಿಂದ ಹೊರಟು 9.50ಕ್ಕೆ ಗೋವಾ ತಲುಪುವ ವಿಮಾನ, ಬೆ. 10.20ಕ್ಕೆ ಗೋವಾದಿಂದ ಹೊರಟು 11.10ಕ್ಕೆ ಹುಬ್ಬಳ್ಳಿಗೆ ಬರಲಿದೆ.