Hubballi voilence : ಬೂದಿ ಮುಚ್ಚಿದಂತಾದ ಹುಬ್ಬಳ್ಳಿಯಲ್ಲಿ ಸೆಕ್ಷನ್ 144 ಜಾರಿ

1 min read

Hubballi voilence : ಬೂದಿ ಮುಚ್ಚಿದಂತಾದ ಹುಬ್ಬಳ್ಳಿಯಲ್ಲಿ ಸೆಕ್ಷನ್ 144 ಜಾರಿ

ಪ್ರಚೋದನಾಕಾರಿ ವಾಟ್ಸಾಪ್ ಸ್ಟೇಟಸ್ ವಿರೋಧಿಸಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಿಂದಾಗಿ ಹುಬ್ಬಳಿಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.. ಕಲ್ಲುತೂರಾಟದಂತಹ ಕೆಲ ಅಹಿತಕರ ಘಟನೆಗಳು ನಡೆದ ಬೆನ್ನಲ್ಲೇ ಸೆಕ್ಷನ್ 144 ಜಾರಿಯಾಗಿದೆ.. ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿರುವ ಉಧ್ವಿಗ್ನ ಪರಿಸ್ಥಿತಿಯ ಬಗ್ಗೆ ಮಾಜಿ ಸಿಎಂ ಹೆಚ್ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ..

ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಿಂದೂ ಯುವಕನೊಬ್ಬ ಪೋಸ್ಟ್ ಮಾಡಿದ್ದ ಹಿನ್ನೆಲೆ ಹಳೆ ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕರು ದಾಂಧಲೆ ನಡೆಸಿದ್ದರು.. ಇದಾದ ನಂತರದಿಂದ ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದು  , ಹುಬ್ಬಳ್ಳಿ ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತಾಗಿದೆ..

ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ, ಫೋಟೋ ಎಡಿಟ್ ಮಾಡಿ ಹಿಂದೂ ಯುವಕನೋರ್ವ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದನು. ಈ ವಿವಾದಿತ ಪೋಸ್ಟ್ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಮುಸ್ಲಿಂ ಪುಂಡರ ಗುಂಪು ದೇವಸ್ಥಾನ, ಆಸ್ಪತ್ರೆ, ಬಸ್, ಪೊಲೀಸರ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ್ದರು.

ದುಷ್ಕರ್ಮಿಗಳು ಹುಬ್ಬಳ್ಳಿಯ ದಿಡ್ಡಿ ಓಣಿಯ ಗುರು ಆಸ್ಪತ್ರೆ ಧ್ವಂಸಗೊಳಿಸಿದ್ದಾರೆ. ಅಲ್ಲದೇ ಹನುಮ ಜಯಂತಿ ದಿನದಂದೇ ದಿಡ್ಡಿ ಹನುಮಂತ ದೇವಸ್ಥಾನದ ಕಿಟಕಿ ಗ್ಲಾಸ್ ಒಡೆದು ಪುಡಿ, ಪುಡಿಗೊಳಿಸಿದ್ದಾರೆ ಮತ್ತು ಬಸ್‍ಗಳ ಮೇಲೆ ಕೂಡ ಕಲ್ಲು ತೂರಾಟ ನಡೆಸಿದ್ದಾರೆ. ಉಪ ನಗರ ಠಾಣೆ ಇನ್ಸ್‍ಪೆಕ್ಟರ್ ವಾಹನ ಜಖಂಗೊಳಿಸಿದ್ದಾರೆ. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು..

ಘಟನೆಯಲ್ಲಿ ಪೂರ್ವ ಸಂಚಾರಿ ಠಾಣೆ ಇನ್ಸ್‍ಪೆಕ್ಟರ್ ಕಾಡದೇವರ ಮಠ ತಲೆಗೆ ಗಾಯಗೊಂಡಿದ್ದು, ವಿವಾದಿ ಫೋಟೋ ಪೋಸ್ಟ್ ಮಾಡಿದ್ದ ಹಿಂದೂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

KSRTC : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd