Hubli-ಆಸ್ತಿಗಾಗಿ ತಮ್ಮನನ್ನೆ ಕೊಲೆ ಮಾಡಲು ಪ್ರಯತ್ನಿಸಿದ ಅಣ್ಣ
Hubli | ಆಸ್ತಿ ವಿಚಾರಕ್ಕೆ ತಮ್ಮನಿಗೆ ಚಾಕು ಇರಿದ ಅಣ್ಣ
ಹುಬ್ಬಳ್ಳಿ : ಆಸ್ತಿ ವಿಚಾರಕ್ಕೆ ಗಲಾಟೆ ನಡೆದು ಅಣ್ಣನೊಬ್ಬ ತನ್ನ ತಮ್ಮನಿಗೆ ಚಾಕು ಇರಿದಿರುವ ಘಟನೆ ಹುಬ್ಬಳ್ಳಿ ನಗರದ ಕೇಶ್ವಾಪೂರದಲ್ಲಿ ನಡೆದಿದೆ.
ಸಾಗರ ಬಾಕಳೆ ಎಂಬುವವರಿಗೆ ಸಂಜಯ್ ಬಾಕಳೆ ಎಂಬುವವರು ಚಾಕು ಇರಿದಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ಪೂಜೆಗಾಗಿ ತಮ್ಮ ಸಾಗರ್ ಬಂಗಾರ ಕೇಳಿದ್ದಾನೆ.

ಇದರೊಂದಿಗೆ ವಾಗ್ವಾದ ನಡೆದು ಸಂಜಯ ಚಾಕುವಿನಿಂದ ಇರಿದಿದ್ದಾನೆ.
ಇದರಿಂದ ಸಾಗರ ಅವರ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಳಿಕ ಸಂಜಯ ಬಾಕಳೆ ಪರಾರಿಯಾಗಿದ್ದಾನೆ.
ಈ ಸಂಬಂಧ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.