ಹುಲಿಯಾ ಸಿದ್ದರಾಮಯ್ಯ, ಶಾಸಕ ಜಮೀರ್ ಕಾಲೆಳೆದ ಸಚಿವ ವಿ.ಸೋಮಣ್ಣಸಚಿವ ವಿ.ಸೋಮಣ್ಣ ಮಾಜಿ, ಸಿ.ಎಂ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹ್ಮದ್ ಅವರನ್ನು ಕಿಚಾಯಿಸಿದ್ದಾರೆ. ಇಂದಿನ ಕಲಾಪಕ್ಕೆ ಹಾಜರಾಗಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹ್ಮದ್ ಆಗಮಿಸುತ್ತಿದ್ದರು. ಅದಕ್ಕಾಗಿ ವಿಧಾನಸೌಧದ ಕೆಂಗಲ್ ಗೇಟ್ನಲ್ಲಿ ಥರ್ಮಲ್ ಸ್ಕ್ರೀನಿಂಗ್ ಮುಗಿಸಿ ಸಿದ್ದರಾಮಯ್ಯ ಒಳ ಬರುತ್ತಿದ್ದರು. ಈ ವೇಳೆ ಸಚಿವ ವಿ. ಸೋಮಣ್ಣ ಅದೇ ಗೇಟ್ ನಿಂದ ಹೊರ ಬರುತ್ತಿದ್ದರು. ಆಗ ಇಬ್ಬರು ನಾಯಕರು ಮುಖಾಮುಖಿಯಾದರು. ಈ ಸಮಯದಲ್ಲಿ ಸಿದ್ದರಾಮಯ್ಯನವರ ಹಿಂದೆ ಶಾಸಕ ಜಮೀರ್ ಅಹ್ಮದ್ ಅವರನ್ನು ಕಂಡ ವಿ.ಸೋಮಣ್ಣನವರು ‘ಏನು ಯಾವಾಗಲೂ ಜಮೀರ್ ಹಿಂದೆಯೇ ಇರುತ್ತಾರಲ್ಲಾ..?’ ಎಂದು ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ. ಇದಕ್ಕೆ ಉತ್ತರಿಸಿದ ಜಮೀರ್ ಬೇಕಾದರೆ ನೀವು ನಮ್ಮ ಜೊತೆ ಬನ್ನಿ ಸರ್ ಎಂದಿದ್ದಾರೆ. ಆಗ ನಗುತ್ತಲೇ ಕಿಚಾಯಿಸಿದ ಸೋಮಣ್ಣ ನಾನು ಹೋದ ಮೇಲೆ ನೀನು ಬಂದಿದ್ದೀಯಾ ಎಂದರು. ಆಗ ನೀನು ಬಂದರೂ ಇರುತ್ತೀಯಾ ಬರ್ತೀಯಾ ಹೇಳು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು
ಸಿಆರ್ & ಎಲ್‍ಎಂ..! ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ ಎರಡು ಅತ್ಯದ್ಭುತವಾದ ಮಾನವ ಯಂತ್ರಗಳು. ಹೌದು, 1985 ಮಾಡೆಲ್, ಪೋರ್ಚ್‍ಗಲ್ ಬ್ರ್ಯಾಂಡ್, ಚಾಸಿಸ್ ನಂಬರ್...








