ಮಾನವ ಗಾತ್ರದ ಬಾವಲಿಯ ಭಯಾನಕ ಚಿತ್ರ ಸೆರೆ… ನಿಜವೇ ???
ಕೆಲವೊಂದು ಕಾಲ್ಪನಿಕ ಕಥೆಗಳಲ್ಲಿ ಕೇಳಿ ಬರುವ ಪ್ರಾಣಿಗಳು ಕಥೆಯಲ್ಲಿ ಮಾತ್ರ ಇದ್ದರೆ ಚೆಂದ ಎನಿಸುತ್ತದೆ. ನಿಜ ಜೀವನದಲ್ಲಿಯೂ ಅವು ಅಸ್ಥಿತ್ವದಲ್ಲಿವೆ ಎನ್ನವುದು ಭಯಾನಕ ವಾತಾವರಣವನ್ನ ಸೃಷ್ಟಿಸುತ್ತದೆ. ಅಂಥಹದ್ದೇ ಒಂದು ಮಾನವ ಗಾತ್ರದ ಬಾವಲಿಗಳು …
ಗಾತ್ರದಲ್ಲಿ ಮಾನವನ ದೇಹವನ್ನ ಹೋಲುವಷ್ಟು ಕಾಯವನ್ನ ಹೊಂದಿರುವ ಬಾವಲಿಗಳು ಅಸ್ತಿತ್ವದಲ್ಲಿವೆ ಎನ್ನುವಂತಹ ಪೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಫಿಲಿಫೈನ್ಸ್ ನಲ್ಲಿ ಮಾನವನ ಗಾತ್ರದ ಬಾವಲಿಗಳಿವೆ ಎಂದು ನಾನು ಹೇಳಿದ್ದು ನಿಮಗೆ ನೆನಪಿದೆಯಾ? ಹೌದು ನಾನು ಇದರ ಬಗ್ಗೆಯೇ ಮಾತನಾಡುತ್ತಿದ್ದದ್ದು ಎಂದು ವ್ಯಕ್ತಿಯೊಬ್ಬರು ಪೋಟೋ ಪೋಸ್ಟ್ ಮಾಡಿದ್ದು, ಅದರಲ್ಲಿ ಮನೆಯೊಂದರ ಮುಂದೆ ದೊಡ್ಡ ಗಾತ್ರದ ಬಾವಲಿಯೊಂದು ನೇತಾಡುತ್ತಿರುವುದನ್ನ ನೋಡಬಹುದು. ಈ ಟ್ವೀಟ್ ಇದೀಗ 2.6 ಲಕ್ಷ ಲೈಕ್ ಗಳನ್ನ ಪಡೆದುಕೊಂಡಿದೆ.
ಒಂದು ಸಣ್ಣ ನಾಯಿಯ ಗಾತ್ರದ ಎತ್ತರ ಇರುವ ಈ ಬಾವಲಿಯ ರೆಕ್ಕೆ ಗಳು 5.58 ಅಡಿ ಉದ್ದವನ್ನ ಹೊಂದಿದೆ. ಇವು ಸಸ್ಯಾಹಾರಿ ಜೀವಿಯಾಗಿದ್ದು, ಹಣ್ಣುಗಳನ್ನ ತಿಂದು ಬದುಕುತ್ತವೆ. 2020 ರಲ್ಲಿ ಹಂಚಿಕೊಳ್ಳಲಾಗಿದ್ದ ಈ ಪೋಸ್ಟ್ ಇದೀಗ ಮತ್ತೊಮ್ಮೆ ವೈರಲ್ ಆಗಿದೆ.
ಬಾವಲಿ ಇಷ್ಟು ದೊಡ್ಡಾಗಿರಲು ಸಾಧ್ಯವಿಲ್ಲ ಇದರಲ್ಲಿ ಪೋಟೋಗ್ರಾಫಿಕ್ ಟ್ರಿಕ್ ಬಳಸಲಾಗಿದೆ ಎಂದು ಕೆಲವು ಟ್ವೀಟಿಗರು ಕಮೆಂಟ್ ಮಾಡಿದ್ದಾರೆ.
human-sized bat : A horrifying picture of a human-sized bat was captured… is it true???