ADVERTISEMENT
Saturday, July 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Politics

ಅಸೆಂಬ್ಲಿ ನಲ್ಲಿ ಹಾಸ್ಯಭರಿತ ಕೊರೋನಾ ಮತ್ತು ಬ್ರಾಂದಿಯ ಚರ್ಚೆ

admin by admin
March 14, 2020
in Politics, Samagra karnataka
Share on FacebookShare on TwitterShare on WhatsappShare on Telegram

ಜಗತ್ತಿನಾದ್ಯಂತ ಕೊರೋನಾ ತಾಂಡವ ವಾಡುತ್ತಿದೆ. ಈಗಾಗಲೇ ವಿಶ್ವದಾದ್ಯಂತ 4983ಕ್ಕೂ ಹೆಚ್ಚು ಜನ ಕೊರೋನಾಗೆ ಬಲಿಯಾಗಿದ್ದರೆ, ಸುಮಾರು 1,34,769 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕರ್ನಾಟಕದಲ್ಲೂ 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಂದು ಸಾವು ಸಂಭವಿಸಿದೆ. ಈಗ ಎಲ್ಲಿ ನೋಡಿದರೂ ಕೊರೋನಾ ವೈರಸ್ ನದ್ದೇ ಸುದ್ದಿ.

ಕೊರೊನಾ ಮತ್ತು ಮದ್ಯದ ವಿಚಾರ ಕರ್ನಾಟಕದ ಅಸೆಂಬ್ಲಿಯಲ್ಲೂ ಪ್ರಸ್ತಾಪ ವಾಗಿದ್ದು, ಬ್ರಾಂದಿಯ ಮಹತ್ವವನ್ನು ಕೆಲವು ಸದಸ್ಯರು ನಗೆ ಚಟಾಕಿ‌ ಹಾರಿಸಿ ವಿವರಿಸಿದರು. ಮೇಲ್ಮನೆ ವಿಧಾನ ಪರಿಷತ್ ನಲ್ಲೂ ಕೊರೋನಾದ ಬಗ್ಗೆ ಹಾಸ್ಯಭರಿತ ಚರ್ಚೆ ನಡೆದಿದ್ದು, ಕೊರೋನಾಗೆ ಬ್ರಾಂದಿ ಮದ್ದು ಎನ್ನುವ ಮಾತು ಕೇಳಿ ಬಂತು.
ಜೆಡಿಎಸ್‍ನ ಮರಿತಿಬ್ಬೇಗೌಡರು ಸಂವಿಧಾನದ ಬಗ್ಗೆ ಮಾತನಾಡುತ್ತಾ, ಕೊರೋನಾ ವೈರಸ್ ಬಗ್ಗೆ ಪ್ರಸ್ತಾಪಿಸಿದರು. ಜಗತ್ತಿನಾದ್ಯಂತ ಜನ ಕೊರೋನಾ ವೈರಸ್ ನಿಂದ ಸಾವನಪ್ಪುತ್ತಿದ್ದಾರೆ. ಮುಕ್ಕೋಟಿ ದೇವರುಗಳು ಎಲ್ಲಿ ಹೋದರು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಪ್ರಶ್ನೆ ಮಾಡಿದರು. ಆ ದೇವರಿಗೂ ಕೊರೊನಾ ಸೋಂಕು ಗುಣಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಬೆಳಗ್ಗೆ ಆದ್ರೆ ಸಾಕು ವಿಭೂತಿ ಹಚ್ಚಿ ಕೊಂಡು ಜ್ಯೋತಿಷಿಗಳು ಟಿವಿನಲ್ಲಿ ಬರುತ್ತಾರೆ. ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಹೇಳುತ್ತಾರೆ. ಈಗ ಇಡೀ ವಿಶ್ವವೇ ಕೊರೊನಾದ ಭಯದಲ್ಲಿ ನಡುಗುತ್ತಿದೆ. ಎಲ್ಲದರ ಬಗ್ಗೆ ಮಾತನಾಡುವ ಮಠಗಳು ಎಲ್ಲಿ ಹೋದವು. ಈಗ ಆ ಜ್ಯೋತಿಷಿಗಳು ಎಲ್ಲಿದ್ದಾರೆ. ಕೊರೊನಾ ತಡೆಯಲು ಆಗುವುದಿಲ್ಲವೇ ಎಂದು ಟಿವಿಯಲ್ಲಿ ಬರುವ ಜ್ಯೋತಿಷಿ
ಗಳ ಮೇಲೆ ತಮ್ಮ ಆಕ್ರೋಶವನ್ನು ತೋರಿಸಿದರು.

Related posts

ವಿಜಯ್ ಸರ್ಕಾರ ಅಸ್ಥಿರಗೊಳಿಸುವ ಸಂಚು ಆರೋಪ; 6 ಮಂದಿ ಬಂಧನ

ವಿಜಯ್ ಸರ್ಕಾರ ಅಸ್ಥಿರಗೊಳಿಸುವ ಸಂಚು ಆರೋಪ; 6 ಮಂದಿ ಬಂಧನ

July 3, 2026
30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

July 3, 2026

ತಮ್ಮ ಮಾತನ್ನು ಮುಂದುವರಿಸಿದ ಮರಿತಿಬ್ಬೇಗೌಡರು ಆ ಸಣ್ಣ ವೈರಸ್ ನನ್ನು ನಾಶ ಮಾಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ‌ಕೊರೋನಾ ಸಾಯಿಸಲು ಬ್ರಾಂದಿ‌‌‌ ರಾಮಬಾಣವೆಂದೂ, ಬ್ರಾಂದಿ ಬಳಸುವುದರಿಂದ ಕೊರೊನಾ ದೂರ ಓಡಿಸಬಹುದೆಂದು ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಅಬಕಾರಿ ಇಲಾಖೆಗೆ ಕೊರೋನಾದಿಂದ ಭರ್ಜರಿ ವ್ಯಾಪಾರ ‌ಆಗಬಹುದು. ಅಬಕಾರಿ ಸಚಿವರು ಇನ್ನಷ್ಟು ಸ್ವಲ್ಪ ದಿನ ಕೊರೋನಾ ವೈರಸ್ ಇರಲಿ‌‌ ಎಂದು ಬಯಸ ಬಹುದು. ಆಗ ಅಬಕಾರಿ ಇಲಾಖೆಗೆ ಒಳ್ಳೆಯ ಆದಾಯ ಹರಿದು ಬರುತ್ತದೆ ಎಂದು ಹಾಸ್ಯ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ಪಿ. ಆರ್ ರಮೇಶ್, ಈ ಹಿಂದೆ ‌ಪ್ಲೇಗ್ ಎಂಬ ಮಹಾ ಮಾರಿ ಬಂದಿತ್ತು. ‌ಆಗ ಪ್ಲೇಗಮ್ಮ ಎಂದು ದೇವಾಲಯ ನಿರ್ಮಿಸಲು ‌ಪ್ರಾರಂಭಿಸಿದರು. ಈಗ ಕೊರೋನಾ ಬಂದಿದೆ. ಕೊರೊನಮ್ಮ ಎಂದು ದೇವಾಲಯ ಪ್ರಾರಂಭಿಸಿ ಅಲ್ಲಿ ಬ್ರಾಂದಿಯನ್ನು ತೀರ್ಥ ವೆಂದು ಕೊಡ ಬೇಕು ‌ಎಂದು ತಮಾಷೆ ಮಾಡಿದರು.

ದೇವಾಲಯಗಳು, ಮಸೀದಿಗಳು, ಚರ್ಚ್ ಗಳು ಕೊರೊನಾಗೆ ಏನೂ ಮಾಡಲು ಸಾಧ್ಯವಿಲ್ಲ. ಅಷ್ಟು ದೇವರು ಇರುವುದಾದರೆ ಕೊರೊನಾ ಓಡಿಸಲಿ ಎಂದು ದೇವರುಗಳಿಗೆ ಸವಾಲು ಹಾಕಿದರು.
ಯಾರೂ ಮಾಡದ ಕೆಲಸವನ್ನು ಬ್ರಾಂದಿ ಮಾಡಬಹುದು. ಬ್ರಾಂದಿಯನ್ನು ಹೊಟ್ಟೆಗೆ ಮತ್ತು ಕೈಗೆ ಹಾಕಿಕೊಂಡರೆ, ಕೊರೊನಾ ವೈರಾಣು ಸತ್ತು ಹೋಗುತ್ತದೆ. ಹಾಗಾಗಿ, ಏನು ಬೇಕಾದರೂ ಬಂದ್ ಮಾಡಿ ಆದರೆ, ಬಾರ್ ಮಾತ್ರ ಬಂದ್ ಮಾಡಬೇಡಿ” ಎಂದು ಜೆಡಿಎಸ್‍ನ ಮರಿತಿಬ್ಬೇಗೌಡರು ಹಾಸ್ಯ ಚಟಾಕಿ‌ ಹಾರಿಸಿದರು.

Tags: BJPCongressJDSKarnataka Assembly Session
ShareTweetSendShare
Join us on:

Related Posts

ವಿಜಯ್ ಸರ್ಕಾರ ಅಸ್ಥಿರಗೊಳಿಸುವ ಸಂಚು ಆರೋಪ; 6 ಮಂದಿ ಬಂಧನ

ವಿಜಯ್ ಸರ್ಕಾರ ಅಸ್ಥಿರಗೊಳಿಸುವ ಸಂಚು ಆರೋಪ; 6 ಮಂದಿ ಬಂಧನ

by Shwetha
July 3, 2026
0

ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪದಡಿ ಮಹತ್ವದ ಬೆಳವಣಿಗೆ ನಡೆದಿದೆ. ವರದಿಗಳ ಪ್ರಕಾರ, ವಿಧಾನಸಭೆಯ ಸ್ಪೀಕರ್ ವಿರುದ್ಧದ ಅವಿಶ್ವಾಸ...

30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

by Shwetha
July 3, 2026
0

ನವದೆಹಲಿ: ಭ್ರಷ್ಟಾಚಾರ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾಗುವ ಉನ್ನತ ಹುದ್ದೆಯಲ್ಲಿರುವವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಯಾವುದೇ ಸಚಿವರು, ಮುಖ್ಯಮಂತ್ರಿ ಅಥವಾ...

2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ: ರಾಜೇಂದ್ರ ಪಾಲ್ ಗೌತಮ್

2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ: ರಾಜೇಂದ್ರ ಪಾಲ್ ಗೌತಮ್

by Shwetha
July 3, 2026
0

ಉತ್ತರ ಪ್ರದೇಶ ಕಾಂಗ್ರೆಸ್‌ನ ನೂತನ ಉಸ್ತುವಾರಿಯಾಗಿ ನೇಮಕಗೊಂಡಿರುವ ರಾಜೇಂದ್ರ ಪಾಲ್ ಗೌತಮ್ ಅವರು, 2029ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು...

ಬಿಡದಿ ಟೌನ್‌ಶಿಪ್ ದಂಗಲ್:ನಿಮ್ಮಿಂದ ರಿಪ್ಲೈ ಬಂದಿಲ್ಲ- ಬಿಡದಿ ರೈತರ ಕಣ್ಣೀರು ಒರೆಸಲು ಬನ್ನಿ: ಡಿಕೆಶಿಗೆ ಎಚ್‌ಡಿಕೆ ಖಡಕ್ ಪತ್ರ, ಜೂನ್ 27ಕ್ಕೆ ಮಹಾ ಮುಖಾಮುಖಿ?

ಕಾಲಚಕ್ರ ಉರುಳುತ್ತಲೇ ಇರುತ್ತದೆ, ಮೇಲೆ ಹೋದವನು ಕೆಳಗೆ ಬರಲೇಬೇಕು: ಅಧಿಕಾರದ ಮದದಲ್ಲಿ ಮೆರೆಯಬೇಡಿ, ಪ್ರತಿ ಅಂತ್ಯಕ್ಕೂ ಒಂದು ಆರಂಭವಿದೆ – ಡಿಕೆಶಿಗೆ ಎಚ್‌ಡಿ ಕುಮಾರಸ್ವಾಮಿ ಖಡಕ್ ತಿರುಗೇಟು

by Shwetha
July 3, 2026
0

ಬೆಂಗಳೂರು: ರಾಜಕೀಯದಲ್ಲಿ ಯಾರೂ ಶಾಶ್ವತವಲ್ಲ, ಅಧಿಕಾರದ ಮದದಲ್ಲಿ ಮೆರೆಯುವವರಿಗೆ ಕಾಲವೇ ಉತ್ತರ ನೀಡಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ...

ವೈರಲ್ ಆಡಿಯೋದಿಂದ ರಾಜ್ಯ ಬಿಜೆಪಿಯಲ್ಲಿ ಸಂಚಲನ; ಡಿವಿಎಸ್ ಸ್ಪಷ್ಟನೆ

ಕಿಕ್ ಔಟ್ ಮಾಡಲು ನಾನೇನು ತಪ್ಪು ಮಾಡಿದ್ದೆ ಬಿಜೆಪಿಯಲ್ಲಿ ಆಡಿಯೋ ಬಾಂಬ್ ಸ್ಫೋಟ ಸದಾನಂದ ಗೌಡರ ನಡೆಯಿಂದ ಬೇಸತ್ತ ರಾಜ್ಯಾಧ್ಯಕ್ಷ

by Shwetha
July 2, 2026
0

ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವದ ಸಂಘರ್ಷ ಮತ್ತು ಆಂತರಿಕ ಭಿನ್ನಮತ ಈಗ ಹೊಸ ರೂಪ ಪಡೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram