ಮಂಗಳೂರು, ಮೇ 18 : ಅಂಫಾನ್’ ಚಂಡಮಾರುತದ ಕಾರಣದಿಂದ ಕರಾವಳಿಯಲ್ಲಿ ಗುಡುಗು, ಮಿಂಚು ಸಹಿತ ಗಾಳಿ ಮಳೆ ಮುಂದುವರಿದಿದೆ. ಮೇ 18ರಂದು ಅಂಫಾನ್ ಚಂಡಮಾರುತ ತೀವ್ರ ಸ್ವರೂಪ ಪಡೆಯಲಿದ್ದು ರಾಜ್ಯದ ಕರಾವಳಿಯಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಅಲ್ಲದೆ ಕರಾವಳಿಯಲ್ಲಿ “ಯಲ್ಲೋ ಅಲರ್ಟ್” ಘೋಷಿಸಿ ಮುಂದಿನ ಮೂರು ದಿನಗಳ ಕಾಲ 64.5 ಮೀಮೀ ನಿಂದ 115.5 ಮಿ.ಮೀ ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು ಸಿಡಿಲಿನೊಂದಿಗೆ ಗಾಳಿ ಕೂಡಾ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಭಾನುವಾರ ಸಂಜೆಯಿಂದಲೇ ಸುರಿಯಲಾರಂಭಿಸಿದ ಗುಡುಗು ಸಹಿತ ಮಳೆ ಸೋಮವಾರವೂ ಮುಂದುವರಿದಿದೆ.
ಎಲ್ಐಸಿ ಹೌಸಿಂಗ್ ಫೈನಾನ್ಸ್ ನೇಮಕಾತಿ ಅಬ್ಬರ: ನವೆಂಬರ್ 1ರೊಳಗೆ ಅರ್ಜಿ ಸಲ್ಲಿಸಲು ಮರೆಯದಿರಿ
ಬೆಂಗಳೂರು: ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನತೆಗೆ ಭಾರತೀಯ ಜೀವ ವಿಮಾ ನಿಗಮದ ಪ್ರಮುಖ ಅಂಗಸಂಸ್ಥೆಯಾದ ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) ಅತ್ಯಂತ ಆಕರ್ಷಕ ಉದ್ಯೋಗಾವಕಾಶದ ಬಾಗಿಲು...








