ಕುಡಿದಿದ್ದೇಕೆ ಎಂದ `ಪತ್ನಿಯ ನಾಲಿಗೆ ಕಚ್ಚಿದ ಪತಿ’
ಲಕ್ನೋ : ಕುಡಿದು ಬಂದಿದ್ದನ್ನು ಪ್ರಶ್ನಿಸಿದ ಪತ್ನಿಯ ನಾಲಿಗೆಯನ್ನು ಪತಿ ಕಚ್ಚಿರುವ ಘಟನೆ ಲಕ್ನೋದ ತಹಸಿಲ್ ನ ಭಟ್ಟ ಗ್ರಾಮದಲ್ಲಿ ನಡೆದಿದೆ.
ಪತ್ನಿಯ ನಾಲಿಗೆ ಕಚ್ಚಿದ ರಚಿತ್ ರಾವತ್ ನನ್ನು ಸದ್ಯ ಪೊಲೀಸರು ಬಂದಿಸಿದ್ದಾರೆ.
ಪತ್ನಿಯನ್ನು ಕತ್ತರಿಯಿಂದ ಇರಿದು ಹತ್ಯೆ ಮಾಡಿ ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ ಪತಿ
ಎಂದಿನಂತೆ ಮೊನ್ನೆ ರಚಿತ್ ರಾವತ್ ಕುಡಿದು ಮನೆಗೆ ಬಂದಿದ್ದಾನೆ. ಇದನ್ನು ಕಂಡ ಪತ್ನಿ ಸುಮನ್ ಕೋಪಗೊಂಡು ಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಗ ದಂಪತಿ ಮಧ್ಯೆ ಜಗಳ ಪ್ರಾರಂಭವಾಗಿದೆ. ನಂತರ ಗಂಡ-ಹೆಂಡತಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ಜಗಳ ವಿರೋಪಕ್ಕೆ ಹೋಗಿ ರಾವತ್ ತನ್ನ ಹೆಂಡತಿ ಸುಮನ್ ಕತ್ತು ಹಿಸುಕಿದ್ದಾನೆ.
ಈ ವೇಳೆ ನಾಲಿಗೆ ಅವಳ ಬಾಯಿಂದ ಹೊರಬಂದಿದ್ದು, ತಕ್ಷಣ ಗಂಡ ಅವಳ ನಾಲಿಗೆಯನ್ನು ತನ್ನ ಹಲ್ಲುಗಳಿಂದ ಕಚ್ಚಿ ಕತ್ತರಿಸಿದ್ದಾನೆ.
ಇದನ್ನು ಕಂಡ ಮನೆಯ ಅಕ್ಕಪಕ್ಕದವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡ ಸುಮನ್ ನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡಿರುವ ಸುಮನ್ ಸ್ಥಿತಿ ಗಂಭೀರವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








