ಪತ್ನಿಯ ಗುಪ್ತಾಂಗಕ್ಕೆ ಬಾಟಲಿ ತುರುಕಿ ವಿಕೃತಿ ಮೆರೆದ ಪಾಪಿ..!
ಒಡಿಶಾ : ಪತಿಯೊಬ್ಬ ತನ್ನ ಪತ್ನಿಯ ಗುಪ್ತಾಂಗಕ್ಕೆ ಬಾಟಲಿ ತುರುಕಿ ವಿಕೃತಿ ಮೆರೆದಿರುವ ಘಟನೆ ಒಡಿಶಾದ ಚಂದ್ರಶೇಖರ ಪುರದಲ್ಲಿ ನಡೆದಿದೆ.
ಪತ್ನಿ ವೇಶ್ಯಾವಾಟಿಕೆಗೆ ಒಪ್ಪದಕ್ಕೆ ಇಂತಹ ಹೇಯ ಕೃತ್ಯವೆಸಗಿರೋದು ಗೊತ್ತಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ, ಪತಿ ಚಂದನ್ ಆಚಾರ್ಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಆರೋಪಿಯು ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಹಣದಾಸೆಯಿಂದಾಗಿ ಈತ ಪತ್ನಿಯನನ್ನ ವೇಶ್ಯಾವಾಟಿಕೆಗೆ ದೂಡಲು ಪ್ರಯತ್ನಿಸಿದ. ಆದ್ರೆ ಪತ್ನಿ ಇದಕ್ಕೆ ಒಪ್ಪದ ಕಾರಣಕ್ಕೆ ದೈಹಿಕ ಹಾಗೂ ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾನೆ. ಹೀಗೆ ಒಂದು ದಿನ ಕಂಠ ಪೂರ್ತಿಯಾಗಿ ಕುಡಿದು ಬಂದಿರುವ ಆರೋಪಿ ರಾಡ್ ನಿಂದ ಹಲ್ಲೆ ನಡೆಸಿ ಮದ್ಯ ಬಾಟಲಿಯನ್ನ ಗುಪ್ತಾಂಗಕ್ಕೆ ತುರುಕಿ ವಿಕೃತಿ ಮೆರೆದಿದ್ದಾನೆ. ಈತನ ಟಾರ್ಚರ್ ಸಹಿಸಲಾಗದೇ ಸಂತ್ರಸ್ತೆ ತನ್ನ ಮಗುವಿನೊಂದಿಗೆ ರೂಮ್ ನಲ್ಲಿ ಲಾಕ್ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಗು ಹಾಗೂ ಆಕೆಯನ್ನ ರಕ್ಷಣೆ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ.
ಇನಿಯನ ಜೊತೆ ಸೇರಿ ತಾಳಿಕಟ್ಟಿದವನ ಕಥೆಯನ್ನೇ ಮುಗಿಸಿದ ರಾಕ್ಷಸಿ..!