ಎಥನಾಲ್ ಮಿಶ್ರಿತ ಪೆಟ್ರೋಲ್ (E20) ಕುರಿತು ತನ್ನ ವಿರುದ್ಧ ಪೇಯ್ಡ್ ಪೊಲಿಟಿಕಲ್ ಕ್ಯಾಂಪೇನ್ ನಡೆಯುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕೆಲವರು ನನ್ನನ್ನ ಟಾರ್ಗೆಟ್ ಮಾಡಿಕೊಂಡು ತಪ್ಪುಮಾಹಿತಿ ಹಬ್ಬಿಸುತ್ತಿದ್ದಾರೆ ಎಂದು ಗಡ್ಕರಿ ಹೇಳಿದ್ದಾರೆ. ಈ ರೀತಿಯ ಪ್ರಚಾರವನ್ನು ಜನರು ನಿರ್ಲಕ್ಷಿಸಬೇಕೆಂದು ಅವರು ವಿನಂತಿಸಿದ್ದಾರೆ.
E20 ಪೆಟ್ರೋಲ್ ಸಂಪೂರ್ಣ ಸುರಕ್ಷಿತವಾಗಿದೆ. ಸರ್ಕಾರಿ ನಿಯಂತ್ರಕರು ಹಾಗೂ ಆಟೋಮೊಬೈಲ್ ಕಂಪನಿಗಳು ಇದನ್ನು ಸ್ವಾಗತಿಸಿವೆ. ಆದರೆ, ಮೈಲೇಜ್ ಕಡಿಮೆಯಾಗುತ್ತದೆ ಎಂಬ ಸುಳ್ಳು ಪ್ರಚಾರ ನಡೆಯುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ.
ಅದರ ಜೊತೆಗೆ, ಎಥೆನಾಲ್ ಬಳಕೆ ದೇಶದ ಇಂಧನ ಆಮದು ಅವಲಂಬನೆ ಕಡಿಮೆ ಮಾಡುವುದರೊಂದಿಗೆ, ಪರಿಸರ ಸಂರಕ್ಷಣೆಗೆ ಸಹಾಯಕವಾಗುತ್ತದೆ ಎಂಬುದನ್ನು ಅವರು ನೆನಪಿಸಿದ್ದಾರೆ.





