ಭಾರತದ ವೇಗಿ ಜಸ್ಪ್ರೀತ್ ಬುಮ್ರಾ, ಐಪಿಎಲ್ ಮುಗಿದ ನಂತರ ತಮ್ಮ ಬಗ್ಗೆ ಹರಡಿರುವ ಮಾತುಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನೀಡಿದ ಟೆಸ್ಟ್ ತಂಡದ ನಾಯಕತ್ವದ ಆಫರ್ ಅನ್ನು ತಾನೇ ನಿರಾಕರಿಸಿಕೊಂಡಿರುವುದಾಗಿ ಅವರು ಹೇಳಿದ್ದಾರೆ.
ತಮ್ಮ ನಿರ್ಧಾನದ ಹಿಂದೆ ಇರುವ ಕಾರಣಗಳು:
ಬುಮ್ರಾ ಈ ನಿರ್ಧಾರದ ಹಿಂದಿರುವ ಪ್ರಮುಖ ಕಾರಣಗಳ ಬಗ್ಗೆ ಮಾತನಾಡುತ್ತಾ, ನಾನು ನನ್ನ ಶರೀರದ ಆರೋಗ್ಯವನ್ನು ಮುಖ್ಯವಾಗಿ ನೋಡಿಕೊಳ್ಳಬೇಕಾಗಿದೆ. ನಾನು ಇನ್ನೂ ದೀರ್ಘಕಾಲ ಭಾರತದ ಪರವಾಗಿ ಆಡಲು ಚುರುಕಾಗಿ ಇರುವುದು ಮುಖ್ಯ. ಆ ಕಾರಣಕ್ಕೆ ನಾಯಕತ್ವದ ಹೊರೆ ನನಗೆ ಬೇಡವೆಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಗಾಯದ ಸಮಸ್ಯೆಯಿಂದ ಹಿಂಜರಿಕೆ:
ಬುಮ್ರಾ ಕಳೆದ ಕೆಲವು ವರ್ಷಗಳಿಂದ ಬೆನ್ನು ನೋವು ಹಾಗೂ ಗಾಯದ ಸಮಸ್ಯೆಗಳಿಂದ ಬಳಲುತ್ತಿದ್ದು, ಇದರಿಂದ ಅವರು ಪ್ರಮುಖ ಸರಣಿಗಳನ್ನು ಮಿಸ್ ಮಾಡಿಕೊಳ್ಳಬೇಕಾಯಿತು. ಇತ್ತೀಚೆಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದಲ್ಲೂ ಅವರು ಮಧ್ಯದಲ್ಲಿ ಸ್ಪರ್ಧೆಯಿಂದ ಹೊರನಡೆದಿದ್ದರು.
ಗಿಲ್‌ಗೆ ನಾಯಕತ್ವ:
ಬುಮ್ರಾ ನಿರಾಕರಿಸಿದ ನಂತರ, ಟೆಸ್ಟ್ ತಂಡದ ನಾಯಕತ್ವವನ್ನು ಯುವ ತಾರೆ ಶುಭಮನ್ ಗಿಲ್‌ಗೆ ನೀಡಲಾಗಿದೆ. ಗಿಲ್ ಈಗಾಗಲೇ ಹಲವು ಮ್ಯಾಚುಗಳಲ್ಲಿ ತನ್ನ ಪರ್ಫಾರ್ಮನ್ಸ್ ಮೂಲಕ ಗುರುತಿಸಿಕೊಂಡಿದ್ದು, ನಾಯಕತ್ವದ ಹೊಣೆಯನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂಬ ವಿಶ್ವಾಸ ತಂಡದಲ್ಲಿದೆ.