ಮೈಸೂರು : ಹೆಚ್. ವಿಶ್ವನಾಥ್ ನನ್ನ ನಂಬಿ ಬಿಜೆಪಿಗೆ ಬಂದಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಸಂಸದ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಅವರು, ಹೆಚ್. ವಿಶ್ವನಾಥ್ ಬಿಜೆಪಿಗೆ ಬರುವ ಮುನ್ನ ಬಿ.ಎಸ್. ಯಡಿಯೂರಪ್ಪ ಅವರ ಬಳಿ ನಾನೇ ಕಳಿಸಿಕೊಟ್ಟದ್ದೆ. ಆಗ ಯಡಿಯೂರಪ್ಪ ಮಾತು ಕೊಟ್ಟಿತ್ತಿದ್ದಾರೆ. ಅದನ್ನು ವಿಶ್ವನಾಥ್ ಬಿ.ಎಸ್. ಯಡಿಯೂರಪ್ಪ ಅವರಿಗೆ ನೆನಪಿಸಬೇಕು ಎಂದು ಹೇಳಿದರು.
ಇದೆ ವೇಳೆ ಹೆಚ್.ಡಿ. ದೇವೇಗೌಡರ ರಾಜ್ಯಸಭೆ ಆಯ್ಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಅವರ ಹೆಸರು ಸಹ ಹೇಳುವುದಿಲ್ಲ. ಅವರ ಹೆಸರು ಹೇಳಿದರೆ ಸುಮ್ಮನೆ ವಿವಾದವಾಗುತ್ತದೆ ಎಂದು ಹೇಳಿದರು. ಇನ್ನೂ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸರ್ಕಾರ ಸುಭದ್ರವಾಗಿರುತ್ತೆ ಎಂದು ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಹೇಳಿದರು.








