ಸಿಡಿ ಬಗ್ಗೆ ಮಾತಾಡಲು ನನಗೆ ವಾಕರಿಕೆ ಬರುತ್ತದೆ : ಈಶ್ವರಪ್ಪ ( Ishwarappa )
ಶಿವಮೊಗ್ಗ : ಸಿಡಿ ವಿಚಾರವಾಗಿ ಮಾತನಾಡಲು ನನಗೆ ವಾಕರಿಕೆ ಬರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿಡಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಯವಿಟ್ಟು ಸಿಡಿ ಬಗ್ಗೆ ನನಗೆ ಕೇಳಬೇಡಿ.
ಅದು ಅವರು ಅವರಿಗೆ ಬಿಟ್ಟದ್ದು. ಸಿಡಿ ಬಗ್ಗೆ ಮಾತಾಡಲು ನನಗೆ ವಾಕರಿಕೆ ಬರುತ್ತದೆ ಎಂದು ಹೇಳಿದರು.
ಇನ್ನ ಉಪಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಯಾವುದೇ ಚುನಾವಣೆ ಬಂದರೂ ಬಿಜೆಪಿಯ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ಉಪಚುನಾವಣೆ ನಡೆದ 17 ರಲ್ಲಿ 14 ರಲ್ಲಿ ನಾವು ಗೆದ್ದಿದ್ದೇವೆ. ಇದೀಗ ಬಸವಕಲ್ಯಾಣ, ಮಸ್ಕಿ ಮತ್ತು ಬೆಳಗಾವಿಗೆ ಉಪಚುನಾವಣೆ ಘೋಷಣೆಯಾಗಿದೆ.
ಮಾರ್ಚ್ 30 ರಂದು ನಮ್ಮ ಅಭ್ಯರ್ಥಿ ಬೆಳಗಾವಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಸಿಎಂ, ರಾಜ್ಯಾಧ್ಯಕ್ಷರು, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ನಾನು ಸೇರಿದಂತೆ ಎಲ್ಲರೂ ಹೋಗುತ್ತೇವೆ ಎಂದು ತಿಳಿಸಿದರು.
