ಧರ್ಮ, ದೇಶದ ರಕ್ಷಣೆಗೆ ನಾನು ಯಾವತ್ತಿಗೂ ಬದ್ಧ : ಪ್ರತಾಪ್ ಸಿಂಹ
ಮೈಸೂರು : ದೇಶದ ರಕ್ಷಣೆಗೆ ನಾನು ಯಾವತ್ತಿಗೂ ಬದ್ಧ. ರಾಜಕೀಯಕ್ಕೆ ಬಂದ ಮೇಲೆ ಇದು ಬರಲಿಲ್ಲ, ಹುಟ್ಟುತ್ತಲೇ ಇದು ಬಂದಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ದೇವಾಲಯ ತೆರವಿನ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ರಾಜಕೀಯಕ್ಕಾಗಿ ನಾನು ಬಿಜೆಪಿಗೆ ಬಂದವನಲ್ಲ.
ನಾನು ಮೂಲತಃ ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದೇನೆ. ನನ್ನ ತಂದೆಯೂ ಆರ್‍ಎಸ್‍ಎಸ್ ಕಾರ್ಯಕರ್ತರಾಗಿದ್ದರು. ನಾನೂ ಕೂಡ ಆರ್‍ಎಸ್‍ಎಸ್ ಕಾರ್ಯಕರ್ತನಾಗಿ ದೇಶ, ಧರ್ಮಕ್ಕೆ ಸೇವೆ ಸಲ್ಲಿಸಿದ್ದೇನೆ.
ದೇಶ, ಧರ್ಮದ ವಿಚಾರ ಬಂದಾಗ ನಾನು ಸ್ವಯಂ ಪ್ರೇರಿತವಾಗಿ ಧ್ವನಿ ಎತ್ತುತ್ತೇನೆ ಎಂದರು.
ಇನ್ನು ಧರ್ಮ, ದೇಶದ ರಕ್ಷಣೆಗೆ ನಾನು ಯಾವತ್ತಿಗೂ ಬದ್ಧ ಎಂದು ತಿಳಿಸಿದ ಪ್ರತಾಪ್ ಸಿಂಹ, ಯಾರನ್ನೋ ಕೇಳಿ, ಅಥವಾ ಯಾರನ್ನೋ ನಂಬಿ ನಾನು ಈ ವಿಚಾರದಲ್ಲಿ ಧ್ವನಿ ಎತ್ತುವ ಅವಶ್ಯಕತೆ ಇಲ್ಲ.
ನನಗೆ ನನ್ನ ಬದ್ಧತೆ ಬಗ್ಗೆ ಹೆಚ್ಚು ನಂಬಿಕೆ ಇದೆ. ದೇವಸ್ಥಾನ ತೆರವಿನ ವಿರುದ್ಧದ ನನ್ನ ಕೂಗಿಗೆ ರಾಜ್ಯದ ಮುಖ್ಯಮಂತ್ರಿ ನನಗೆ ಸ್ವತಃ ಕರೆ ಮಾಡಿ ಸ್ಪಂದಿಸಿದ್ದಾರೆ.
ದೇವಾಲಯ ತೆರವು ವಿಚಾರವಾಗಿ ಉತ್ತಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.