ದ್ರಾವಿಡ್ ಸರ್ ಬಳಿ ಸಾಕಷ್ಟು ಕಲಿತ್ತಿದ್ದೇನೆ.. ಅವರೇ ನನ್ನ ಗುರು priyak panchal Saaksha tv
ದಕ್ಷಿಣಾ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಔಟ್ ಆಗಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ಟೆಸ್ಟ್ ಸಿರೀಸ್ ನಿಂದ ಹೊರಗುಳಿದಿದ್ದಾರೆ. ಅವರ ಬದಲಾಗಿ ಪ್ರಿಯಾಂಕ್ ಪಾಂಚಲ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಪ್ರಿಯಾಂಕ್ ಪಾಂಚಲ್ ಪ್ರಸ್ತುತ ಭಾರತ-ಏ ತಂಡಕ್ಕೆ ನಾಯಕತ್ವ ವಹಿಸುತ್ತಿದ್ದಾರೆ.
ಟೀಂ ಇಂಡಿಯಾಗೆ ಆಯ್ಕೆ ಆಗಿರುವ ಬಗ್ಗೆ ಪಾಂಚಲ್ ಮಾತನಾಡುತ್ತಾ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರನ್ನ ಹಾಡಿ ಹೊಗಳಿದ್ದಾರೆ. ನಾನು ದ್ರಾವಿಡ್ ಅವರಿಂದ ಬಹಳಷ್ಟು ವಿಷಯಗಳನ್ನು ಕಲಿತ್ತಿದ್ದೇನೆ. ಅವರೇ ನನ್ನ ಗುರು ಎಂದು ಪಾಂಚಲ್ ಹೇಳಿಕೊಂಡಿದ್ದಾರೆ.
2019 ರಲ್ಲಿ ಭಾರತ-ಏ ತಂಡಕ್ಕೆ ನಾಯಕರಾಗಿ ನೇಮಕಗೊಂಡಾಗ ಸಾಕಷ್ಟು ಖುಷಿ ಪಟ್ಟಿದ್ದೆ. ಹಾಗೇ ಭಯವೂ ಆಗಿತ್ತು. ಆಗ ರಾಹುಲ್ ಸರ್ ನನ್ನಲ್ಲಿ ಧೈರ್ಯ ತುಂಬಿದರು ಎಂದು ಪಾಂಚಲ್ ತಿಳಿಸಿದ್ದಾರೆ.
ನಾನು ನಾಯಕನಾಗಿ ನೇಮಕಗೊಂಡಾಗ ಸಂತೋಷದ ಜೊತೆಗೆ ಭಯದಲ್ಲಿದ್ದೆ. ಆಗ ದ್ರಾವಿಡ್ ಸರ್ ನನ್ನ ಬಳಿ ಬಂದು ನೀನು ಏನು ಹೆದರಬೇಡ. ನಿನ್ನ ಆಟ ನೀನು ಆಡು. ನಿನ್ನಲ್ಲಿ ಸ್ವಾಭಾವಿಕವಾಗಿ ನಾಯಕತ್ವದ ಲಕ್ಷಣಗಳಿವೆ. ಹೀಗಾಗಿ ನಾಯಕತ್ವದ ಜವಾಬ್ದಾರಿಯನ್ನ ನಿನಗೆ ಕೊಟ್ಟಿದ್ದಾರೆ. ನೀನು ನಿನ್ನ ಆಲೋಚನೆಗಳಲ್ಲಿ ಬದಲಾವಣೆ ಮಾಡಬೇಕಾಗಿಲ್ಲ.
ದೇಶಿ ಕ್ರಿಕೆಟ್ ನಲ್ಲಿ ನಾಯಕನಾಗಿ ಮಿಂಚಲು ಯಾವ ಮಾರ್ಗವನ್ನು ಅನುಸರಿಸಿದ್ದಿಯೋ ಅದನ್ನೇ ಇಲ್ಲೂ ಮಾಡು ಎಂದು ದ್ರಾವಿಡ್ ಸರ್ ನನಗೆ ಸಲಹೆ ನೀಡಿದರು.
ಅಂಡರ್-15 ಕ್ರಿಕೆಟ್ ಆಡುತ್ತಿರುವಾಗ ಮೊದಲ ಬಾರಿ ರಾಹುಲ್ ಸರ್ ಅವರನ್ನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನೋಡಿದ್ದೆ. ನಾನು ಆರಂಭದಿಂದಲೂ ಅವರನ್ನ ಅನುಸರಿಸುತ್ತಿದ್ದೇನೆ. ಭಾರತ ಎ ತಂಡದಲ್ಲಿ ಅವರ ಜೊತೆ ಕೆಲಸ ಮಾಡಿದ್ದು, ನನ್ನ ಅದೃಷ್ಠ. ಅವರು ನೀಡಿದ ಪ್ರತಿ ಸಲಹೆಯನ್ನು ನಾನು ಅಳವಡಿಸಿಕೊಂಡಿದ್ದೇನೆ. ಇದೀಗ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಆಗಿದ್ದು, ನಂಬಲಾಗುತ್ತಿಲ್ಲ ಎಂದು ಪಾಂಚಲ್ ಸಂತಸ ವ್ಯಕ್ತಪಡಿಸಿದ್ದಾರೆ.