ನನ್ನ ಜೀವನದಲ್ಲಿ ಇಷ್ಟೊಂದು ಬೇಜವಾಬ್ದಾರಿ ಸರ್ಕಾರ ನೋಡಿಲ್ಲ : ಸಿದ್ದರಾಮಯ್ಯ

1 min read
SIddaramaiah

ನನ್ನ ಜೀವನದಲ್ಲಿ ಇಷ್ಟೊಂದು ಬೇಜವಾಬ್ದಾರಿ ಸರ್ಕಾರ ನೋಡಿಲ್ಲ : ಸಿದ್ದರಾಮಯ್ಯ

ಬೆಂಗಳೂರು : ನನ್ನ ರಾಜಕೀಯದ ಜೀವನದಲ್ಲಿ ಇಷ್ಟೊಂದು ಬೇಜವಾಬ್ದಾರಿ ಸರ್ಕಾರ ನಾನು ನೋಡಿರಲಿಲ್ಲ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವ್ಯಾಕ್ಸಿನ್ ನೀಡುವ ವಿಚಾರದಲ್ಲಿ ಕೇಂದ್ರ ,ರಾಜ್ಯ ಸರ್ಕಾರ ವಿಫಲವಾಗಿದೆ. ವ್ಯಾಕ್ಸಿನೇಷನ್ ನೀಡದ ಬಗ್ಗೆ ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ನನ್ನ ರಾಜಕೀಯದ ಜೀವನದಲ್ಲಿ ಇಷ್ಟೊಂದು ಬೇಜವಾಬ್ದಾರಿ ಸರ್ಕಾರ ನಾನು ನೋಡಿರಿಲಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನು ಎರಡನೇ ಅಲೆ ಬರುತ್ತೆ ಎಂದು ಮಾಹಿತಿ ಇತ್ತು, ಆದರೂ ಸರ್ಕಾರ ಮುನ್ನೆಚ್ಚರಿಕೆ ಕ್ರಮ ತೆಗದುಕೊಂಡಿಲ್ಲ. ವ್ಯಾಕ್ಸಿನ್ ನೀಡುವ ವಿಚಾರದಲ್ಲಿ ಸಿದ್ಧತೆ ಮಾಡಿಕೊಂಡಿಲ್ಲ. ತಜ್ಞರು ನೆವೆಂಬರ್ ನಲ್ಲಿ ವರದಿ ಕೊಟ್ಟಿದ್ರೂ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಯುದ್ಧ ಕಾಲದಲ್ಲಿ ಶಸ್ತ್ರಭಾಸ್ಯ ಮಾಡುತ್ತಿದ್ದಾರೆ.

ಎರಡನೇ ಡೋಸ್ ವ್ಯಾಕ್ಸಿನ್ ತೆಗದುಕೊಳ್ಳುವ ವಿಚಾರದಲ್ಲಿ ಮತ್ತೆ ಮತ್ತೆ ಕಾಲಾವಕಾಶ ಮುಂದೂಡುತ್ತಿದ್ದಾರೆ. ಕೊರೊನಾ ಯಾವ್ ಜಾತಿ ಯಾವ್ ಧರ್ಮ ಅಂತ ನೋಡಲ್ಲ.

Siddaramaiah

ಮುನ್ನೆಚೆರಿಕೆ ಇಲ್ಲಾದಿದ್ರೆ ಪ್ರತಿಯೊಬ್ಬರಿಗೂ ಕೊರೊನಾ ಬರಲಿದೆ. ವ್ಯಾಕ್ಸಿನ್ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ತಗೆದುಕೊಳ್ಳಬೇಕು.

ಮಕ್ಕಳಿಗೆ, ಗರ್ಭೀಣಿಯರಿಗೆ ಎಲ್ಲರಿಗೂ ವ್ಯಾಕ್ಸಿನ್ ಕೊಡಬಹುದು ಎಂದು ತಜ್ಞರು ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಉಚಿತವಾಗಿ ವ್ಯಾಕ್ಸಿನ್ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

18 ವರ್ಷ ಮೇಲ್ಪಟ್ಟ 44 ವರ್ಷ ಒಳಗಡೆ ಇರೋರು 3 ಕೋಟಿ 20 ಲಕ್ಷ ಜನ ಇದ್ದಾರೆ. ಒಟ್ಟು 7 ಕೋಟಿ ಜನಸಂಖ್ಯೆ ನಮ್ಮ ರಾಜ್ಯದಲ್ಲಿದ್ದಾರೆ. ಒಂದು ಕೋಟಿ ಲಸಿಕೆ ಖರೀದಿ ಮಾಡಲು ಮೂನ್ನೂರು ಕೋಟಿ ಕೊಡಬೇಕು. ಸರಕಾರಕ್ಕೆ ಕಾಂಗ್ರೆಸ್ ಶಾಸಕರು 100 ಕೋಟಿ ನೀಡಲು ತೀರ್ಮಾನ ಮಾಡಲಾಗಿದೆ.

ಪ್ರತಿ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಎರಡು ಕೋಟಿ ಹಣ ನೀಡುತ್ತಾರೆ. ರಾಜ್ಯಸಭಾ ಸದಸ್ಯರು ಸೇರಿ ಒಟ್ಟು 100 ಜನ ಇದ್ದೇವೆ. ಶಾಸಕರು,ಸಂಸದರು ಪ್ರದೇಶಾಭಿವೃದ್ಧಿ ನಿಧಿಯಿಂದ ಪ್ರತಿಯೊಬ್ಬರು ಒಂದು ಕೋಟಿ ನೀಡಲು ತೀರ್ಮಾನ ಮಾಡಲಾಗಿದೆ. ಈ ನಿಧಿ ಯಲ್ಲಿ ಪ್ರತಿಯೊಬ್ಬರು ಒಂದು ಕೋಟಿ ಹಣ ನೀಡಲು ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.

corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd