ನನ್ನ ಬಳಿ ಪದಗಳೇ ಇಲ್ಲ : ರಿಷಬ್ ಪಂತ್ ಭಾವುಕ

1 min read
Rishabh Pant saaksha tv

ನನ್ನ ಬಳಿ ಪದಗಳೇ ಇಲ್ಲ : ರಿಷಬ್ ಪಂತ್ ಭಾವುಕ Rishabh Pant saaksha tv

ಶಾರ್ಜಾ : ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಲಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಭಾವುಕರಾಗಿದ್ದಾರೆ.

ಬುಧವಾರ ನಡೆದ ಕೆಕೆಆರ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೇನು ಗೆಲುವು ಸಾಧಿಸಿಯೇ ಬಿಡ್ತು ಅನ್ನುಷ್ಟರಲ್ಲಿ ಲೆಕ್ಕಾಚಾರವೆಲ್ಲಾ ಉಲ್ಟಾ ಪಲ್ಟಾವಾಯಿತು.

ಪಂದ್ಯದ 19.5 ನೇ ಎಸತದಲ್ಲಿ ಬ್ಯಾಟರ್ ರಾಹುಲ್ ತ್ರಿಪಾಠಿ ಸಿಕ್ಸರ್ ಸಿಡಿಸಿ ಡೆಲ್ಲಿ ಪರವಿದ್ದ ಅದೃಷ್ಠ ಲಕ್ಷ್ಮಿಯನ್ನು ತಮ್ಮ ಕಡೆ ಎಳೆದುಕೊಂಡರು.

ಆ ಮೂಲಕ ಕೆಕೆಆರ್ ತಂಡವನ್ನು ಫೈನಲ್ ಗೆ ಕೊಂಡೊಯ್ದರು.

Rishabh Pant saaksha tv

ಪಂದ್ಯದ ಬಳಿಕ ಮಾತನಾಡಿದ ಪಂತ್, ಸೋಲಿನ ಬಗ್ಗೆ ಮಾತನಾಡಲು ನನ್ನ ಬಳಿ ಪದಗಳೇ ಇಲ್ಲ, ಏನನ್ನೂ ಹೇಳಲು ಸಾಧ್ಯವಿಲ್ಲ.

ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾದಷ್ಟು ಪ್ರಯತ್ನಿಸಿದೆವು.

ಬೌಲರ್ ಗಳು ಬಹುತೇಕ ಗೆಲುವಿನತ್ತ ಕೊಂಡೊಯ್ದರೂ ಕೂಡ ಕೊನೆಯಲ್ಲಿ ಯಶ ಕಾಣದಿರುವುದು ದುರದೃಷ್ಟಕರ ಎಂದು ಭಾವುಕರಾದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd