ಐ ಲವ್ ಯು…. ಎಬಿಡಿ ವಿದಾಯಕ್ಕೆ ವಿರಾಟ್ ಭಾವನಾತ್ಮಕ ಸಂದೇಶ
ಹೈದರಾಬಾದ್ : ವಿಶ್ವ ಕ್ರಿಕೆಟ್ ನ ಸ್ಪೈಡರ್ ಮ್ಯಾನ್.. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಏಲಿಯನ್.. ಮಿಸ್ಟರ್ 300 ಡಿಗ್ರಿ ಬ್ಯಾಟ್ಸ್ ಮೆನ್ ಇಂದು ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
ಆ ಮೂಲಕ ಸುದೀರ್ಘ ಕ್ರಿಕೆಟ್ ಜರ್ನಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಎಬಿಡಿ ಅವರ ಈ ನಿರ್ಧಾರ ಅವರ ಅಭಿಮಾನಿಗಳಿಗೆ ತೀವ್ರ ಬೇಸರವನ್ನುಂಟು ಮಾಡಿದೆ.
ಇತ್ತ ಎಬಿಡಿ ವಿದಾಯ ಘೋಷಿಸುತ್ತಿದ್ದಂತೆ ಟೀಂ ಇಂಡಿಯಾ ಏಕದಿನ ಹಾಗೂ ಟೆಸ್ಟ್ ಕ್ಯಾಪ್ಟನ್, ಆರ್ ಸಿಬಿ ತಂಡದ ಮಾಜಿ ನಾಯಕ ಕಿಂಗ್ ಕೊಹ್ಲಿ, ಟ್ವಿಟ್ಟರ್ ನಲ್ಲಿ ಭಾವನಾತ್ಮಕ ಸಂದೇಶ ಹರಿಬಿಟ್ಟಿದ್ದಾರೆ.
ನಿಮ್ಮ ನಿರ್ಧಾರ ನನಗೆ ತುಂಬಾ ನೋವುಂಟು ಮಾಡಿದೆ. ಅದರೆ ನೀವೂ ತೆಗೆದುಕೊಂಡಿರುವ ನಿರ್ಧಾರ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕಾಗಿ ಉತ್ತಮವಾಗಿದೆ ಎಂದು ನನಗೆ ತಿಳಿದಿದೆ. ‘ಐ ಲವ್ ಯು’ ಎಂದು ವಿರಾಟ್ ಬರೆದುಕೊಂಡಿದ್ದಾರೆ.
ಅಲ್ಲದೇ ನಮ್ಮ ಕಾಲದ ಅತ್ಯುತ್ತಮ ಆಟಗಾರ ಹಾಗೂ ನಾನು ಭೇಟಿಯಾದ ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿ ನೀವು. ನೀವು ಏನು ಸಾಧನೆ ಮಾಡಿದ್ದೀರಿ, ಆರ್ ಸಿಬಿ ತಂಡಕ್ಕೆ ಯಾವ ರೀತಿಯಾಗಿ ಕೊಡುಗೆ ನೀಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿ ನಮಗೆ ತುಂಬಾ ಹೆಮ್ಮೆಯಿದೆ. ನಮ್ಮ ಬಂಧ ಆಟಕ್ಕಿಂತಲೂ ಮೀರಿದ್ದು, ಯಾವಾಗಲೂ ಇದೇ ರೀತಿಯಲ್ಲಿರುತ್ತದೆ ಎಂದು ಟ್ವಿಟ್ ಮಾಡಿದ್ದಾರೆ.
ಇನ್ನು ಎಬಿಡಿ ಆರ್ ಸಿಬಿ ಪರ 145 ಇನ್ನಿಂಗ್ಸ್ ಗಳಲ್ಲಿ 4,522 ರನ್ ಗಳಿಕೆ ಮಾಡಿದ್ದಾರೆ. ಒಂಟಿ ಸಲಗದಂತೆ ಸಾಕಷ್ಟು ಮ್ಯಾಚ್ ಗಳನ್ನ ಸಿಂಗಲ್ ಆಗಿ ಗೆಲ್ಲಿಸಿಕೊಟ್ಟಿದ್ದಾರೆ.