ದೆಹಲಿ: ನನ್ನ ಹೃದಯದಲ್ಲಿ ಅಯೋಧ್ಯೆ ಇರಿಸಿಕೊಂಡು ಮರಳಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ಪತ್ರದಲ್ಲಿ ಈ ಕುರಿತು ಬರೆದುಕೊಂಡಿರುವ ಪ್ರಧಾನಿ ಮೋದಿ, ಅದು ಎಂದಿಗೂ ದೂರವಾಗುವುದಿಲ್ಲ. ಯಾತ್ರಿಕನಾಗಿ ಅಯೋಧ್ಯಾ ಧಾಮದ ಯಾತ್ರೆ ಕೈಗೊಂಡಿದ್ದೇನೆ. ಅಂತಹ ಭಕ್ತಿ ಮತ್ತು ಇತಿಹಾಸದ ಸಂಗಮವನ್ನು ಹೊಂದಿರುವ ಪವಿತ್ರ ಭೂಮಿ ತಲುಪಿದ ನಂತರ ನಾನು ಪರವಶನಾಗಿದ್ದೆ ಎಂದು ಅವರು ಮನತುಂಬಿ ಹೇಳಿದ್ದಾರೆ.
ರಾಷ್ಟ್ರಪತಿಗಳಿಂದ ಇತ್ತೀಚೆಗೆ ನನಗೆ ಪತ್ರವೊಂದು ಬಂದಿತ್ತು. ಪತ್ರದ ಮೂಲಕ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸಿದೆ ಎಂದು ಹೇಳಿದ್ದಾರೆ. ರಾಮನ ಆದರ್ಶಗಳು ಭಾರತದ ಭವ್ಯ ಭವಿಷ್ಯದ ಆಧಾರವಾಗಿದೆ. ಶಕ್ತಿಯು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.