ನಾನು ಶತಕಕ್ಕಾಗಿ ಯೋಚನೆ ಮಾಡಿರಲಿಲ್ಲ. ತಂಡದ ಗೆಲುವು ಮಹತ್ವದ್ದಾಗಿತ್ತು – ಪಡಿಕ್ಕಲ್

1 min read
devdutt padikkal rcb ipl 2021 saakshatv

ನಾನು ಶತಕಕ್ಕಾಗಿ ಯೋಚನೆ ಮಾಡಿರಲಿಲ್ಲ. ತಂಡದ ಗೆಲುವು ಮಹತ್ವದ್ದಾಗಿತ್ತು – ಪಡಿಕ್ಕಲ್

devdutt padikkal rcb ipl 2021 virat kohli saakshatvನಾನು ಶತಕಕ್ಕಾಗಿ ಯೋಚನೆ ಮಾಡಿರಲಿಲ್ಲ. ನನಗೆ ತಂಡದ ಗೆಲುವು ಮುಖ್ಯವಾಗಿತ್ತು ಎಂದು ಆರ್ ಸಿಬಿ ತಂಡದ ಸ್ಟಾರ್ ಆಟಗಾರ ದೇವ್ ದತ್ ಪಡಿಕ್ಕಲ್ ಹೇಳಿದ್ದಾರೆ.
ಮುಂಬೈ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಜೇಯ 101 ರನ್ ದಾಖಲಿಸಿ ತಂಡದ ಭರ್ಜರಿ ಗೆಲುವಿನಲ್ಲಿ ಭಾಗಿಯಾಗಿದ್ದ ದೇವ್ ದತ್ ಪಡಿಕ್ಕಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಈ ಮಾತನ್ನು ಹೇಳಿದ್ದಾರೆ.

ಕೇವಲ 52 ಎಸೆತಗಳಲ್ಲಿ ದೇವ್ ದತ್ ಪಡಿಕ್ಕಲ್ ಅವರು 11 ಬೌಂಡರಿ ಮತ್ತು ಆರು ಸಿಕ್ಸರ್ ಗಳ ನೆರವಿನಿಂದ ಐಪಿಎಲ್ ನಲ್ಲಿ ಚೊಚ್ಚಲ ಶತಕ ದಾಖಲಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.

I was never thinking about my hundred. it was important that win the game – devdutt padikkal

ನಿಜವಾಗಿ ಹೇಳಬೇಕು ಅಂದ್ರೆ ನಾನು ನನ್ನ ಶತಕದ ಬಗ್ಗೆ ಚಿಂತೆ ಮಾಡಿರಲಿಲ್ಲ. ಆದಷ್ಟು ಬೇಗ ಪಂದ್ಯವನ್ನು ಮುಗಿಸಬೇಕು. ಬೇಗನೇ ಗೆಲುವು ದಾಖಲಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡೇ ಬ್ಯಾಟಿಂಗ್ ಮಾಡಿದ್ದೆ. ಒಂದು ವೇಳೆ ನಾನು ಔಟ್ ಆಗುತ್ತಿದ್ರೂ ನನ್ನ ಶತಕದ ಬಗ್ಗೆ ಚಿಂತೆ ಇರಲಿಲ್ಲ. ನನಗೆ ತಂಡದ ಗೆಲುವು ಮುಖ್ಯವಾಗಿತ್ತು ಎಂದು ಪಡಿಕ್ಕಲ್ ಸ್ಪಷ್ಟಪಡಿಸಿದ್ದಾರೆ.
ಚೆನ್ನೈ ಮತ್ತು ಮುಂಬೈ ಪಿಚ್ ಸಂಪೂರ್ಣವಾಗಿ ಭಿನ್ನವಾಗಿತ್ತು. ಇಲ್ಲಿ ಬ್ಯಾಟಿಂಗ್ ಗೆ ಪೂರಕವಾಗಿತ್ತು. ನಾನು ಏನು ಸಾಧಿಸಿದ್ದೇನೋ ಅದರ ಬಗ್ಗೆ ನನಗೆ ಸಂತಸವಿದೆ ಎಂದು ಪಡಿಕ್ಕಲ್ ತಿಳಿಸಿದ್ದಾರೆ.
devdutt padikkal rcb ipl 2021 saakshatv14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಮುನ್ನ ದೇವ್ ದತ್ ಪಡಿಕ್ಕಲ್ ಅವರಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಕ್ವಾರಂಟೈನ್ ನಲ್ಲಿದ್ದುಕೊಂಡು ಚಿಕಿತ್ಸೆ ಪಡೆದ ಬಳಿಕ ಪಡಿಕ್ಕಲ್ ತಂಡವನ್ನು ಸೇರಿಕೊಂಡಿದ್ದರು. ಕೋವಿಡ್ ಸೋಂಕಿನ ನಂತರ ನನಗೆ ದೊಡ್ಡ ಸವಾಲಾಗಿತ್ತು. ಇದೀಗ ತಂಡದ ಗೆಲುವಿಗೆ ಸಹಕರಿಸಿರುವ ಬಗ್ಗೆ ಖುಷಿ ಇದೆ ಅಂತ ಹೇಳ್ತಾರೆ ಪಡಿಕ್ಕಲ್
ಒಟ್ಟಿನಲ್ಲಿ ಆರ್ ಸಿಬಿ ತಂಡ ಈ ಬಾರಿ ಗೆಲುವಿನ ಅಭಿಯಾನದಲ್ಲಿದೆ. ಸತತ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡು ಅಂಕ ಪಟ್ಟಿಯಲ್ಲೂ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಪ್ರತಿ ಬಾರಿನೂ ಕಪ್ ನಮ್ದೆ ಅಂತ ಹೇಳಿಕೊಂಡು ನಿರಾಸೆ ಅನುಭವಿಸುತ್ತಿದ್ದ ಆರ್ ಸಿಬಿ ಅಭಿಮಾನಿಗಳಿಗೆ ಈ ಬಾರಿ ವಿರಾಟ್ ಪಡೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd