ನಾನು ಪಕ್ಕ ಹಿಂದೂವಾದಿ, ಹಿಂದುತ್ವ ಬೆಳೆಸುವ ಕೆಲಸ ಮಾಡುತ್ತೇನೆ : ಯತ್ನಾಳ್
ವಿಜಯಪುರ : ನಾನು ಪಕ್ಕ ಹಿಂದೂವಾದಿ, ಹಿಂದುತ್ವ ಬೆಳೆಸುವ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕುಮಾರಸ್ವಾಮಿ ಜೊತೆ ಮಾತುಕತೆ ಬಗ್ಗೆ ಪ್ರತಿಕ್ರಿಯೆ ನೀಡಿ, ನಿನ್ನೆ ಸಿಂದಗಿಯಲ್ಲಿ ಶಾಸಕ ಎಂಸಿ ಮನಗೂಳಿ ಅವರ ಅಂತ್ಯಕ್ರಿಯೆ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ಮಹತ್ವದ ಚರ್ಚೆ ನಡೆದಿದೆ.
ಈ ವೇಳೆ ಕುಮಾರಸ್ವಾಮಿ, ರಾಜ್ಯದಲ್ಲಿ ವಿರೋಧ ಪಕ್ಷಗಳೇ ಇಲ್ಲದಂತಾಗಿದೆ. ನಿಜವಾದ ವಿರೋಧ ಪಕ್ಷ ಎಂದರೆ ಯತ್ನಾಳ್ ಎಂದು ಬೆನ್ನು ತಟ್ಟಿದ್ದಾರೆ. ನಮ್ಮ ಪಕ್ಷದಿಂದ ನಿಮ್ಮನ್ನು ಬಿಟ್ಟಿದ್ದು ಬಹಳ ತಪ್ಪಾಗಿದೆ. ನೀವು ಇನ್ನೂ ನಮ್ಮಲ್ಲಿ ಇರಬೇಕಾಗಿತ್ತು ಎಂದರು ಎಂದು ಯತ್ನಾಳ್ ಹೇಳಿದ್ರು.
ಮತ್ತೆ ಜೆಡಿಎಸ್ ಗೆ ಹೋಗುತ್ತೀರಾ ಎಂಬ ಪ್ರಶ್ನಗೆ ಉತ್ತರಿಸಿ, ಖಂಡಿತ ಇಲ್ಲ. ನಾನು ಬಿಜೆಪಿ ಬಿಡುವ ಮಾತೇ ಇಲ್ಲ. ಬಿಜೆಪಿಯಿಂದ ಉಚ್ಛಾಟಿಸಿದ್ದಾಗ ಅನಿವಾರ್ಯವಾಗಿ ಜೆಡಿಎಸ್ ಗೆ ಹೋಗಿದ್ದೆ ಅಷ್ಟೆ. ನಾನು ಪಕ್ಕ ಹಿಂದೂವಾದಿ, ಹಿಂದುತ್ವ ಬೆಳೆಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಪರಿಷತ್ ನಲ್ಲಿ ಅಶ್ಲೀಲ ಫೋಟೋ ನೋಡಿದ ಆರೋಪದ ಕುರಿತು ಮಾತನಾಡಿದ ಅವರು, ವಿಧಾನಸಭೆ ಮತ್ತು ಪರಿಷತ್ ನಲ್ಲಿ ಮೊಬೈಲ್ ತೆಗೆದುಕೊಂಡು ಹೋಗಬಾರದು ಎಂದು ನಿಯಮವಿದೆ.
ಇದೇ ಕಾರಣಕ್ಕೆ ಎಲ್ಲ ಶಾಸಕರಿಗೆ ಮೊಬೈಲ್ ಇಡಲು ಸ್ಥಳಾವಕಾಶ ನೀಡಿದ್ದಾರೆ. ಆದರೂ ಕೆಲವರು ಮೊಬೈಲ್ ತೆಗೆದುಕೊಂಡು ಹೋಗಿ ರಾಜ್ಯದ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel