Jasprit Bumrah : ಬುಮ್ರಾಗೆ ನಾಯಕತ್ವ ನೀಡಿದ್ದಕ್ಕೆ ಕಾರಣವೇನು..?
ಭಾರತ ಟೆಸ್ಟ್ ತಂಡದ ಹಂಗಾಮಿ ನಾಯಕರಾಗಿ ಜಸ್ಪ್ರೀತ್ ಬುಮ್ರಾ ಅವರನ್ನು ನೇಮಕ ಮಾಡಿರುವುದು ದಿಟ್ಟ ನಿರ್ಧಾರ ಎಂದು ಆಸ್ಟ್ರೇಲಿಯಾದ ದಿಗ್ಗಜ ಇಯಾನ್ ಚಾಪೆಲ್ ಬಣ್ಣಿಸಿದ್ದಾರೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಟೆಸ್ಟ್ ತಂಡಗಳ ನಾಯಕರ ನೇಮಕವನ್ನು ನೋಡಿದ ನಂತರ ಬಹುಶಃ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬುಮ್ರಾ ಕ್ಯಾಪ್ಟನ್ಸಿ ಬಗ್ಗೆ ಮಾತನಾಡಿದ ಇಯಾನ್ ಚಾಪೆಲ್, ಟೆಸ್ಟ್ ತಂಡದ ನಾಯಕರಾಗಿ ಪ್ಯಾಟ್ ಕಮಿನ್ಸ್, ಬೆನ್ ಸ್ಟೋಕ್ಸ್ ಸಕ್ಸಸ್ ನೋಡಿದ ಇಂಡಿಯಾ, ಫಾಸ್ಟ್ ಬೌಲರ್ ಜಸ್ ಪ್ರಿತ್ ಬುಮ್ರಾಗೆ ನಾಯಕತ್ವ ನೀಡಿರಬೇಕು ಎಂದು ಹೇಳಿದ್ದಾರೆ.

ನಿಜ ಹೇಳಬೇಕಾದ್ರೆ ಇದು ಸಾಹಸಮಯ ನಿರ್ಧಾರವಾಗಿದೆ.
ಬುಮ್ರಾ ಸಾಮರ್ಥ್ಯ ಏನು ಎಂಬೋದು ಇದರಿಂದ ಅರ್ಥ ಮಾಡಿಕೊಳ್ಳಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನಾ ನಾಯಕ ರೋಹಿತ್ ಶರ್ಮಾ, ಕೊರೊನಾ ಸೋಂಕಿಗೆ ತುತ್ತಾಗಿದ್ದರು.
ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಬಿಸಿಸಿಐ ಜಸ್ ಪ್ರೀತ್ ಬುಮ್ರಾಗೆ ನಾಯಕತ್ವ ವಹಿಸಿದೆ.