Brendon-taylor | ಬ್ರೆಂಡನ್ ಟೇಲರ್ ಮೇಲೆ ಐಸಿಸಿ ನಿಷೇಧ
ಜಿಂಬಾಬ್ವೆ ಹಿರಿಯ ಆಟಗಾರ ಬ್ರೆಂಡನ್ ಟೇಲರ್ ಮೇಲೆ ಐಸಿಸಿ ಮೂರೂವರೆ ವರ್ಷಗಳ ನಿಷೇಧ ಹೇರಿದೆ.
ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ್ದಲ್ಲದೆ, ಮಾದಕ ದ್ರವ್ಯ ಸೇವನೆ ಮಾಡಿ ಡೋಪಿಂಗ್ ಕೋಡ್ ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.
ಇದರಿಂದಾಗ ಅವರನ್ನು ನಿಷೇಧಿಸಲು ಐಸಿಸಿ ನಿರ್ಧರಿಸಿದೆ. ಟೇಲರ್ ಜಿಂಬಾಬ್ವೆ ಪರ 2004 ರಿಂದ 2021 ರವರೆಗೆ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಒಟ್ಟು 284 ಪಂದ್ಯಗಳನ್ನು ಆಡಿದ್ದಾರೆ.
ಅವರು ಒಟ್ಟು 9,938 ರನ್ ಗಳಿಸಿದ್ದಾರೆ. ಅವುಗಳಲ್ಲಿ 17 ಶತಕಗಳಿವೆ. ಆದರೆ ಕಳೆದ ವರ್ಷ ಬ್ರೆಂಡನ್ ಟೇಲರ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.
ಬ್ರೆಂಡನ್ ಟೇಲರ್ ಇತ್ತೀಚೆಗೆ ಪತ್ರವೊಂದರಲ್ಲಿ ಸಂಚಲನಾತ್ಮಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೆ ಭಾರತೀಯ ಉದ್ಯಮಿಯೊಬ್ಬರು ಕ್ರಿಕೆಟ್ ಲೀಗ್ ಕುರಿತು ಚರ್ಚಿಸಲು ಭಾರತಕ್ಕೆ ಬರುವಂತೆ ಕೇಳಿಕೊಂಡಿದ್ದರು.
ಇಲ್ಲಿ ಬಂದ ಬಳಿಕ ಡ್ರಗ್ಸ್ ಪಾರ್ಟಿ ಕೊಟ್ಟು, ತಾನು ಡ್ರಗ್ ತೆಗೆದುಕೊಂಡಿದ್ದನ್ನ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ್ದರು.
ಅಲ್ಲದೇ ಫಿಕ್ಸಿಂಗ್ ಮಾಡುವಂತೆ 15 ಸಾವಿರ ಡಾಲರ್ ಗಳನ್ನು ನೀಡಿದ್ದರು ಎಂದು ಹೇಳಿಕೊಂಡಿದ್ದರು. ಆದರೆ, ಬ್ರೆಂಡನ್ ಟೇಲರ್ ತಕ್ಷಣ ಈ ಮಾಹಿತಿಯನ್ನು ತಮ್ಮ ಬಳಿ ಹಂಚಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಇದಲ್ಲದೆ ಟೇಲರ್ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ಹೇಳಿದೆ.