ಜಯವರ್ಧನೆ, ಶಾನ್ ಪೊಲಾಕ್ ಜನೆಟ್ ಬ್ರಿಟಿನ್ ಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ

1 min read
icc hall of fame icc saakshatv

ಜಯವರ್ಧನೆ, ಶಾನ್ ಪೊಲಾಕ್ ಜನೆಟ್ ಬ್ರಿಟಿನ್ ಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ

icc hall of fame icc saakshatvಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ, ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಲ್ ರೌಂಡರ್ ಶಾನ್ ಪೊಲಾಕ್ ಹಾಗೂ ಇಂಗ್ಲೆಂಡ್ ತಂಡದ ಮಾಜಿ ಬ್ಯಾಟ್ಸ್ ವುಮೆನ್ ಜನೆಟ್ ಬ್ರಿಟಿನ್ ಅವರಿಗೆ 2021ನೇ ಸಾಲಿನ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ.
2021ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಮುನ್ನ ಐಸಿಸಿ ಈ ಮೂವರು ಆಟಗಾರರ ಸಾಧನೆಯನ್ನು ಗುರುತಿಸಿ ಈ ಗೌರವವನ್ನು ನೀಡಲಿದೆ.
2009ರಿಂದ ಐಸಿಸಿಯು ಪ್ರತಿ ವರ್ಷ ಐಸಿಸಿ ಹಾಲ್ ಆಫ್ ಫೇಮ್ ಗೌರವನ್ನು ನೀಡುತ್ತಿದೆ. ಇಲ್ಲಿಯವರೆಗೆ ಒಟ್ಟು 106 ಕ್ರಿಕೆಟಿಗರಿಗೆ ಈ ಗೌರವನ್ನು ನೀಡಲಾಗಿದೆ.
ಇಂಗ್ಲೆಂಡ್ ನ ಜನೆಟ್ ಬ್ರಿಟಿನ್ ಅವರು 1979ರಿಂದ 1998ರವರೆಗೆ ಇಂಗ್ಲೆಂಡ್ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದರು. 2017ರಲ್ಲಿ ಬ್ರಿಟಿನ್ ಅವರು ನಿಧನರಾಗಿದ್ದಾರೆ. 19 ವರ್ಷಗಳ ಕಾಲ ಇಂಗ್ಲೆಂಡ್ ತಂಡದ ಪರ ಆಡಿದ್ದರು.
ಇನ್ನು ಮಹೇಲಾ ಜಯವರ್ಧನೆ ಅವರು ಶ್ರೀಲಂಕಾ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ಆಗಿದ್ದರು. ಅಲ್ಲದೆ ವಿಶ್ವ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. 2014ರ ಟಿ-ಟ್ವೆಂಟಿ ವಿಶ್ವಕಪ್ ಗೆದ್ದ ತಂಡದ ಸದಸ್ಯ. ಜೊತೆಗೆ ಪ್ರತಿಷ್ಠಿತ ಐಸಿಸಿ ಟೂರ್ನಿಯಲ್ಲಿ ನಾಲ್ಕು ಬಾರಿ ಫೈನಲ್ ಪಂದ್ಯವನ್ನಾಡಿದ್ದ ಹಿರಿಮೆ ಕೂಡ ಜಯವರ್ಧನ ಅವರದ್ದಾಗಿದೆ.
ಹಾಗೇ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆಲ್ ರೌಂಡರ್ ಆಗಿದ್ದ ಶಾನ್ ಪೊಲಾಕ್ ಕೂಡ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ 3000 ಸಾವಿರ ರನ್ ಹಾಗೂ 300 ವಿಕೆಟ್ ಪಡೆದ ಆಲ್ ರೌಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಐಸಿಸಿ ತಮ್ಮ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಿರುವುದು ತುಂಬಾನೇ ಖುಷಿಯಾಗಿದೆ ಎಂದು ಜಯವರ್ಧನೆ ಮತ್ತು ಪೊಲಾಕ್ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd