ದುಬೈ : ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ ಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.
ಬ್ಯಾಟಿಂಗ್ ವಿಭಾಗದಲ್ಲಿ ಕ್ರಿಕೆಟ್ ರಾಕ್ಷಸ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ 871 ಪಾಯಿಂಟ್ಗಳನ್ನು ಹೊಂದಿದ್ದು ರೋಹಿತ್ ಶರ್ಮಾ ಬಳಿ 855 ಪಾಯಿಂಟ್ಗಳಿವೆ.
829 ಪಾಯಿಂಟ್ ಗಳೊಂದಿ ಪಾಕಿಸ್ತಾನ ಬಾಬರ್ ಅಝಾಮ್ ಮೂರನೇ ಸ್ಥಾನದಲ್ಲಿದ್ದರೇ, ನ್ಯೂಜಿಲೆಂಡ್ ನ ರಾಸ್ ಟೈಲರ್ 818 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ, 790 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾದ ಫ್ರಾಂಕೋಯಿಸ್ ಡು ಪ್ಲೆಸಿಸ್ ಐದನೇ ಸ್ಥಾನದಲ್ಲಿದ್ದಾರೆ.
ಬೌಲರ್ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ನ ಟ್ರೆಂಟ್ ಬೌಲ್ಟ್ (722) ಮತ್ತು ಭಾರತದ ಜಸ್ಪ್ರೀತ್ ಬೂಮ್ರಾ(717) ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಆಫ್ಘಾನಿಸ್ತಾನದ ಮುಜೀಬ್ ಉರ್ ರಹಮಾನ್ (701) ಮೂರನೇ ಸ್ಥಾನ, ಇಂಗ್ಲೆಂಡ್ನ ವೇಗದ ಬೌಲರ್ ಕ್ರಿಸ್ ವೋಕ್ಸ್(675) ನಾಲ್ಕನೇ ಸ್ಥಾನ, ದಕ್ಷಿಣ ಆಫ್ರಿಕಾ ಕಗಿಸೋ ರಬಾಡ (665) ಐದನೇ ಸ್ಥಾನದಲ್ಲಿದ್ದಾರೆ.
ಆಲ್ರೌಂಡರ್ಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಮೊಮಹದ್ ನಬಿ (301) ಮೊದಲ ಸ್ಥಾನದಲ್ಲಿದ್ದರೇ ಕ್ರಿಸ್ ವೋಕ್ಸ್ ಎರಡನೇ ಸ್ಥಾನದಲ್ಲಿದ್ದಾರೆ.
ಮೂರನೇ ಸ್ಥಾನದಲ್ಲಿ ಇಮದ್ ವಾಸಿಮ್, ನಾಲ್ಕನೇ ಸ್ಥಾನದಲ್ಲಿ ಬೆನ್ ಸ್ಟೋಕ್ಸ್, ಐದನೇ ಸ್ಥಾನದಲ್ಲಿ ಕಾಲಿನ್ ಡಿ ಗ್ರ್ಯಾಂಡ್ಹೋಮ್ ಇದ್ದಾರೆ.