ICC ODI Ranking : ಅಗ್ರಸ್ಥಾನ ಕಳೆದುಕೊಂಡ ವೇಗಿ ಮೊಹ್ಮದ್ ಸಿರಾಜ್
ಟೀಮ್ ಇಂಡಿಯಾದ ವೇಗಿ ಮೊಹ್ಮದ್ ಸಿರಾಜ್ ಐಸಿಸಿ ಏಕದಿನ ರಾಂಕಿಂಗ್ನ ಅಗ್ರಸ್ಥಾನದಿಂದ ಕೆಳಗಿಳಿದಿದ್ದಾರೆ.
ಬುಧವಾರ ಐಸಿಸಿ ಬಿಡುಗಡೆ ಮಾಡಿರುವ ಏಕದಿನ ರಾಂಕಿಂಗ್ ಪಟ್ಟಿಯಲ್ಲಿ ಭಾರತದ ವೇಗಿ ಮೊಹ್ಮದ್ ಸಿರಾಜ್ ಅಗ್ರಸ್ಥಾನದಿಂದ ಮೂರನೆ ಸ್ಥಾನಕ್ಕೆ ಕುಸಿದಿದ್ದಾರೆ.
ಆಸ್ಟ್ರೇಲಿಯಾದ ವೇಗಿ ಜೋಶ್ ಹೆಜ್ಲ್ ವುಡ್ ಅಗ್ರಸ್ಥಾನವೇರಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲಿ ಮಿಂಚಿದ ವೇಗಿ ಮಿಚೆಲ್ ಸ್ಟಾರ್ಕ್ ವೇಗಿ ಮೊಹ್ಮದ್ ಸಿರಾಜ್ ಜತೆ ಜಂಟಿಯಾಗಿ ಮೂರನೆ ಸ್ಥಾನವನ್ನು ಹಂಚುಕೊಂಡಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ಸಿರಾಜ್ 29 ರನ್ಗೆ 3 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಆದರೆ ಎರಡನೆ ಏಕದಿನ ಪಂದ್ಯದಲ್ಲಿ ವಿಕೆಟ್ ಪಡೆಯದೇ ದುಬಾರಿ ಬೌಲರ್ ಎನಿಸಿದರು.
ಕೇವಲ 3 ಓವರ್ಗಳಲ್ಲಿ 37 ರನ್ ಕೊಟ್ಟರು. ಇದರ ಪರಿಣಾಮ ಮೊಹ್ಮದ್ ಸಿರಾಜ್ ಅಗ್ರಸ್ಥಾನ ಕಳೆದುಕೊಂಡಿದ್ದಾರೆ.
ಮತ್ತೋರ್ವ ಅನುಭವಿ ವೇಗಿ ಮೊಹ್ಮದ್ ಶಮಿ ವಾಂಖೆಡೆಯಲ್ಲಿ ಅಮೋಘ ಬೌಲಿಂಗ್ ಮಾಡಿದ್ದರಿಂದ ಐದು ಸ್ಥಾನ ಜಿಗಿದಿದ್ದಾರೆ. ಪಟ್ಟಿಯಲ್ಲಿ 28ನೇ ಸ್ಥಾನ ಪಡೆದಿದ್ದಾರೆ.
ICC ODI Ranking : Mohammad Siraj lost top spot