T20 ವಿಶ್ವಕಪ್ ನ ಲ್ಲೊಂದು ಅಚ್ಚರಿ, ಟಾಪ್ ಸ್ಕೋರರ್ ಗಳ ತಂಡಕ್ಕೆ ಸಿಕ್ಕಿಲ್ಲ ಚಾಂಪಿಯನ್ ಪಟ್ಟ..!
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದೆ. ವಿರಾಟ್ ಕೊಹ್ಲಿ ಟಿ20 ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳುವ ಮೊದಲು ವಿಶ್ವಕಪ್ ಅನ್ನು ಎತ್ತಿ ಕುಣಿದಾಡುವ ಕನಸಿನಲ್ಲಿದ್ದಾರೆ.2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ನಡೆದರೂ, ಇಲ್ಲಿ ತನಕ 6 ಆವೃತ್ತಿಗಳನ್ನು ಕಂಡಿದೆ. ಸದ್ಯ ನಡೆಯುತ್ತಿರುವುದು 7ನೇ ಆವೃತ್ತಿ. ಚುಟುಕು ಕ್ರಿಕೆಟ್ ನ ಮಹಾ ಸಮರದಲ್ಲಿ ಬೌಂಡರಿಗಳು ಸಿಕ್ಸರ್ಗಳು ಸಿಡಿದಿವೆ. ಅಬ್ಬರದ ಬ್ಯಾಟಿಂಗ್ ಗೆ ಬೌಲರ್ಗಳು ನಡುಗಿದ್ದಾರೆ. ಈ ಬಾರಿಯೂ ಬ್ಯಾಟ್ಸ್ ಮನ್ಗಳು ಬೌಲರ್ ಗಳ ತಾಕತ್ತಿಗೆ ಸವಾಲೊಡ್ಡುವುದು ಖಚಿತ. ಅಚ್ಚರಿಯೆಂದರೆ ಟಿ20 ವಿಶ್ವಕಪ್ನಲ್ಲಿ ಅತೀ ಹೆಚ್ಚು ರನ್ಗಳಿಸಿದ ಆಟಗಾರನ ತಂಡ ಚಾಂಪಿಯನ್ ಆಗಿಲ್ಲ ಅನ್ನುವುದು ಹುಬ್ಬೇರಿಸುವ ಸತ್ಯ.
2007 ರ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. ಮೊದಲ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ತಂಡವು ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಆದರೆ ಸ್ಟಾರ್ ಓಪನರ್ ಮ್ಯಾಥ್ಯೂ ಹೇಡನ್ ಟೂರ್ನಿಯಲ್ಲಿ ಅಬ್ಬರಿಸಿದರು. 6 ಇನ್ನಿಂಗ್ಸ್ಗಳಲ್ಲಿ ಅತ್ಯಧಿಕ 265 ರನ್ ಗಳಿಸಿದ್ದರು.
2009 ರ ವಿಶ್ವಕಪ್ನಲ್ಲಿ, ಶ್ರೀಲಂಕಾ ತಂಡವು ಫೈನಲ್ಗೆ ಪ್ರವೇಶಿಸಿತು, ಅಲ್ಲಿ ಅದು ಪಾಕಿಸ್ತಾನದ ವಿರುದ್ಧ ಸೋತಿತು. ತಂಡದ ಆರಂಭಿಕ ತಿಲಕರತ್ನೆ ದಿಲ್ಶಾನ್ ಪಂದ್ಯಾವಳಿಯ 7 ಇನ್ನಿಂಗ್ಸ್ಗಳಲ್ಲಿ 52.83 ಸರಾಸರಿಯೊಂದಿಗೆ ಅತ್ಯಧಿಕ 317 ರನ್ ಗಳಿಸಿದ್ದರು. ಲಂಕಾ ಚಾಂಪಿಯನ್ ಆಗಲಿಲ್ಲ.
2010 ರಲ್ಲಿ ನಡೆದ 3ನೇ ವಿಶ್ವಕಪ್ನಲ್ಲಿ ಮತ್ತೊಮ್ಮೆ ಶ್ರೀಲಂಕಾ ಆಟಗಾರ ಅತಿ ಹೆಚ್ಚು ರನ್ ಗಳಿಸಿದರು. ಈ ಬಾರಿ ಮಹೇಲ ಜಯವರ್ಧನೆ ಈ ಓಟದ ಮುಂಚೂಣಿಯಲ್ಲಿದ್ದರು. ಅವರು 6 ಇನ್ನಿಂಗ್ಸ್ಗಳಲ್ಲಿ 60 ರ ಸರಾಸರಿಯಲ್ಲಿ ಅತ್ಯಧಿಕ 302 ರನ್ ಗಳಿಸಿದ್ದರು. ಆದರೆ ಚಾಂಪಿಯನ್ ಆಗಿದ್ದು ಇಂಗ್ಲೆಂಡ್
2012 ರ ಚುಟುಕು ವಿಶ್ವಕಪ್ನಲ್ಲಿಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ 6 ಇನ್ನಿಂಗ್ಸ್ ಗಳಲ್ಲಿ 249 ರನ್ ಗಳಿಸಿದರು. ಆದರೆ ಚಾಂಪಿಯನ್ ಆಗಿದ್ದು ವೆಸ್ಟ್ಇಂಡೀಸ್.
2014 ರಲ್ಲಿ ಬಾಂಗ್ಲಾದೇಶದಲ್ಲಿ ಆಡಿದ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದರು. 6 ಇನ್ನಿಂಗ್ಸ್ಗಳಲ್ಲಿ 106 ರ ಸರಾಸರಿಯಲ್ಲಿ 319 ರನ್ ಕೊಹ್ಲಿಗಳಿಸಿದರೂ ಚಾಂಪಿಯನ್ ಆಗಿದ್ದು ಶ್ರೀಲಂಕಾ…!
2016 ರಲ್ಲಿ ಭಾರತ ಚುಟುಕು ಮಹಾಸಮರಕ್ಕೆ ಆತಿಥ್ಯ ನೀಡಿತ್ತು. ಬಾಂಗ್ಲಾದೇಶದ ತಮೀಮ್ ಇಕ್ಬಾಲ್ 6 ಇನ್ನಿಂಗ್ಸ್ ಗಳಿಂದ 295 ರನ್ ಗಳಿಸಿದರು ಚಾಂಪಿಯನ್ ಆಗಿದ್ದು ಮಾತ್ರ ವೆಸ್ಟ್ ಇಂಡೀಸ್.
ಒಟ್ಟಿನಲ್ಲಿ ಟಿ20 ವಿಶ್ವಕಪ್ ನಲ್ಲಿ ಟಾಪ್ ರನ್ಗಳಿಸುವ ಆಟಗಾರ ಬದಲಾಗಿದ್ದರೂ, ಆ ತಂಡ ಚಾಂಪಿಯನ್ ಆಗಿಲ್ಲ ಅನ್ನುವುದು ವಿಶೇಷ.
ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ವಿಮಾನ ಪಲ್ಟಿ
ಫೆಬ್ರವರಿ 17 2025 ರಂದು, ಟೊರೊಂಟೊ ಪಿಯರ್ಸನ್ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್ ಲೈನ್ಸ್ನ ಒಂದು ವಿಮಾನ ಲ್ಯಾಂಡಿಂಗ್ ವೇಳೆ ಮಗುಚಿ ಬಿದ್ದ ಘಟನೆ ಸಂಭವಿಸಿತು. Minneapolis,...