T20 World Cup 2021 | ಬದ್ಧವೈರಿಗಳ ಸೆಣಸಾಟ.. ಒಂದೇ ಗುಂಪಿನಲ್ಲಿ ಇಂಡೋ – ಪಾಕ್
ದುಬೈ : ವಿಶ್ವ ಚುಟುಕು ಕ್ರಿಕೆಟ್ ನ ಮಹಾಸಂಗ್ರಾಮಕ್ಕೆ ವೇದಿಕೆ ಸಜ್ಜಾಗಿದ್ದು, ಆರಂಭದಲ್ಲೇ ವಿಶ್ವ ಕ್ರಿಕೆಟ್ ನ ಬದ್ಧ ವೈರಿಗಳು ಸೆಣಸಾಡಳಿವೆ. ಒಂದೇ ಗುಂಪಿನಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ತಂಡಗಳಿವೆ.
ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಒಮಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಟಿ 20 ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿವೆ. 2021 ರ ಮಾರ್ಚ್ 20 ರ ವೇಳೆಗೆ ತಂಡದ ಶ್ರೇಯಾಂಕದ ಆಧಾರದ ಮೇಲೆ ರಚನೆಯಾದ ಗುಂಪಿನಲ್ಲಿ ಭಾರತ-ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಅಂದಹಾಗೆ 2007 ರಲ್ಲಿ ನಡೆದ ಮೊದಲ ಟಿ 20 ವಿಶ್ವಕಪ್ ನಂತರ ಉಭಯ ತಂಡಗಳು ಐದು ಬಾರಿ ಪರಸ್ಪರ ಸೆಣಸಾಡಿವೆ. ಗುಂಪು ಹಂತದಲ್ಲಿ ನಾಲ್ಕು ಬಾರಿ ಮತ್ತು ಫೈನಲ್‍ನಲ್ಲಿ ಒಂದು ಬಾರಿ ಗುದ್ದಾಡಿದ್ದು, ಪ್ರತಿ ಬಾರಿಯೂ ಭಾರತ ತಂಡ ಗೆಲುವಿನ ಕೇಕೆ ಹಾಕಿದೆ. ಆದ್ದಿರಿಂದ ಈ ಬಾರಿ ಗೆಲುವು ಯಾರಿಗೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಎಂಟು ತಂಡಗಳು ಐಸಿಸಿ ಪುರುಷರ ಟಿ 20 ವಿಶ್ವಕಪ್ ಅರ್ಹತಾ 2019ರ ಮೂಲಕ ತಮ್ಮ ಸ್ಥಾನವನ್ನು ಕಾಯ್ದಿರಿಸಿದ ಉಳಿದ ಆರು ತಂಡಗಳೊಂದಿಗೆ ಮೊದಲ ಸುತ್ತಿನಲ್ಲಿ ಸ್ಪರ್ಧಿಸಲಿವೆ. ಗ್ರೂಪ್ ಎ ಯಲ್ಲಿ ಶ್ರೀಲಂಕಾವನ್ನು ಐಲೆರ್ಂಡ್, ನೆದಲ್ಯಾರ್ಂಡ್ಸ್ ಮತ್ತು ನಮೀಬಿಯಾ ಸೇರಿಕೊಳ್ಳಲಿದ್ದು, ಮತ್ತೊಂದೆಡೆ ಬಾಂಗ್ಲಾದೇಶವನ್ನು ಓಮನ್, ಪಪುವಾ ನ್ಯೂಗಿನಿಯಾ ಮತ್ತು ಸ್ಕಾಟ್ಲೆಂಡ್ ತಂಡಗಳು ಬಿ ಗುಂಪಿನಲ್ಲಿ ಸೇರಿಕೊಳ್ಳಲಿವೆ.
ಗುಂಪುಗಳು:
ಮೊದಲ ಸುತ್ತಿನಲ್ಲಿ
ಗುಂಪು ಎ: ಶ್ರೀಲಂಕಾ, ಐಲೆರ್ಂಡ್, ನೆದಲ್ಯಾರ್ಂಡ್ಸ್ ಮತ್ತು ನಮೀಬಿಯಾ
ಗುಂಪು ಬಿ: ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಓಮನ್
ಸೂಪರ್ 12
ಗುಂಪು 1: ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಎ 1 ಮತ್ತು ಬಿ 2.
ಗುಂಪು 2: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಎ 2 ಮತ್ತು ಬಿ 1.