T20 world Cup ಇಂದೇ ನಿರ್ಧಾರವಾಗಲಿದೆ ಟೀಂ ಇಂಡಿಯಾ ಭವಿಷ್ಯ

1 min read
Team India saakshatv

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಟೀಮ್ ಇಂಡಿಯಾ ಹೀನಾಯವಾಗಿ ಸೋತ ಬಳಿಕ ಸೆಮಿಫೈನಲ್ ಆಸೆ ಬಹುತೇಕ ಕಮರಿದೆ. ಆದರೆ ಲೆಕ್ಕಾಚಾರದಲ್ಲಿ ಮಾತ್ರ ವಿರಾಟ್ ಬಳಗದ ಆಸೆ ಇನ್ನೂ ಕೂಡ ಹಸಿರಾಗಿದೆ. ಆದರೆ ಅಫ್ಘಾನಿಸ್ತಾ ವಿರುದ್ಧದ ಪಂದ್ಯದಲ್ಲಿ ಬಹುತೇಕ ಎಲ್ಲವೂ ನಿರ್ಣಯವಾಗಲಿದೆ. ಟೀಮ್ ಇಂಡಿಯಾದ ಭವಿಷ್ಯದ ಜೊತೆಗೆ ಅಫ್ಘಾನಿಸ್ತಾನದ ಭವಿಷ್ಯವೂ ಈ ಪಂದ್ಯದಲ್ಲಿದೆ.
ಅಬುಧಾಬಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲ ಟೀಮ್ ಇಂಡಿಯಾ ಗೆಲ್ಲುವುದು ಮಾತ್ರವಲ್ಲ ದೊಡ್ಡ ಗೆಲುವು ದಾಖಲಿಸಬೇಕಿದೆ. ಮತ್ತೊಂದು ಕಡೆ ಅಫ್ಘಾನ್ ಇನ್ನೊಂದು ಪಂದ್ಯ ಗೆದ್ದರೆ ಆಲ್ಮೊಸ್ಟ್ ಸೆಮಿಫೈನಲ್ ಗೆ ಏರಿದ ಹಾಗೇಯೇ. ಹೀಗಾಗಿ ಅಫ್ಘಾನಿಸ್ತಾನ ಕೂಡ ಗೆಲುವಿನ ಕನಸಿನಲ್ಲಿದೆ.

T20 World Cup saaksha tv
ಆಡಿರುವ ಎರಡೂ ಪಂದ್ಯಗಳಲ್ಲೂ ಟೀಮ್ ಇಂಡಿಯಾದ ಬ್ಯಾಟಿಂಗ್ ಮತ್ತು ಬೌಲಿಂಗ್ ವೈಫಲ್ಯ ಕಂಡಿದೆ. ಆದರೆ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಅದಕ್ಕೆ ಅವಕಾಶವೇ ಇಲ್ಲ. ಹೀಗಾಗಿ ಟೀಮ್ ಇಂಡಿಯಾದ ಬ್ಯಾಟಿಂಗ್ ಮೇಲೆ ಹೆಚ್ಚು ಒತ್ತಡವಿದೆ. ರಾಹುಲ್, ರೋಹಿತ್ ಮತ್ತು ಇಶನ್ ಕಿಶನ್ ಆರಂಭದಲ್ಲೇ ಮಿಂಚಬೇಕಿದೆ. ಆಡಲು ಅವಕಾಶ ಸಿಕ್ಕರೆ ಸೂರ್ಯ ಕುಮಾರ್ ಯಾದವ್, ಕ್ಯಾಪ್ಟನ್ ಕೊಹ್ಲಿಯ ಜೊತೆ ಸೇರಿಕೊಂಡು ಎದುರಾಳಿಗಳ ಲೆಕ್ಕಾಚಾರ ಬದಲಿಸಬೇಕು. ಜಡೇಜಾ ಮತ್ತು ಹಾರ್ದಿಕ್ ಬ್ಯಾಟ್ನಿಂದ ಸಿಕ್ಸರ್, ಬೌಂಡರಿಗಳು ಸಿಡಿಯಬೇಕು. ಬೌಲಿಂಗ್ ನಲ್ಲಿ ಬುಮ್ರಾ, ಶಮಿ ಮತ್ತು ಶಾರ್ದೂಲ್ ವಿಕೆಟ್ ಗಳನ್ನು ಬೆನ್ನು ಬೆನ್ನಿಗೆ ಉರುಳಿಸಬೇಕಿದೆ. ವರುಣ್ ಚಕ್ರವರ್ತಿ ಜಾಗದಲ್ಲಿ ಅಶ್ವಿನ್ ಆಡಿದರೆ ಉತ್ತಮ ಅನ್ನುವ ಚರ್ಚೆ ಸುಳ್ಳಲ್ಲ.
ಅಪ್ಘಾನಿಸ್ತಾ ತಂಡ ಬ್ಯಾಟಿಂಗ್ ನಲ್ಲಿ ಸೂಪರ್ ಆಗಿದೆ. ಸಿಕ್ಸರ್ ಹಿಟ್ಟರ್ಗಳ ಲೈನ್ ಅಪ್ ತಂಡದ ಪ್ಲಸ್ ಪಾಯಿಂಟ್. ಬೌಲಿಂಗ್ನಲ್ಲಿ ಕೆಲವು ಆಯ್ಕೆಗಳಿವೆ. ಆದರೆ ಟೀಮ್ ಇಂಡಿಯಾ ಒತ್ತಡದಲ್ಲಿದ್ದಾಗ ಅಪಾಯಕಾರಿ ತಂಡ ಅನ್ನುವುದನ್ನು ಮರೆಯುವ ಹಾಗಿಲ್ಲ.

ಸಂಭಾವ್ಯ XI

ಟೀಮ್ ಇಂಡಿಯಾ

1. ಕೆ.ಎಲ್.ರಾಹುಲ್, 2. ರೋಹಿತ್ ಶರ್ಮಾ, 3. ಇಶನ್ ಕಿಶನ್, 4. ವಿರಾಟ್ ಕೊಹ್ಲಿ, 5. ಸೂರ್ಯಕುಮಾರ್ ಯಾದವ್/ ಹಾರ್ದಿಕ್ ಪಾಂಡ್ಯ, 6. ರಿಷಭ್ ಪಂತ್ 7. ರವೀಂದ್ರ ಜಡೇಜಾ, 8.ಶಾರ್ದೂಲ್ ಥಾಕೂರ್, 9. ಮೊಹಮ್ಮದ್ ಶಮಿ, 10. ಜಸ್ ಪ್ರಿತ್ ಬುಮ್ರಾ, 11. ಆರ್. ಅಶ್ವಿನ್/ ವರುಣ್ ಚಕ್ರವರ್ತಿ

ಅಫ್ಘಾನಿಸ್ತಾನ

1. ಮೊಹಮ್ಮದ್ ಶೆಹಜಾದ್, 2. ಹಜರುತುಲ್ಲಾ ಜಜಾಯಿ, 3. ರೆಹಮತುಲ್ಲಾ ಗುರ್ಬಾಜ್, 4. ಹಶ್ಮತುಲ್ಲಾ ಶಾಹಿದಿ, 5. ಮೊಹಮ್ಮದ್ ನವಿ, 6. ನಜಿಬುಲ್ಲಾ ಜದ್ರಾನ್, 7. ಗುಲ್ಬದಿನ್ ನಯಿಬ್, 8. ರಶೀದ್ ಖಾನ್, 9. ಕರೀಮ್ ಜನತ್/ ಮುಜೀಬ್ ಉರ್ ರೆಹಮಾನ್. 10. ನವೀನ್ ಉಲ್ ಹಕ್, 11. ಹಮಿದ್ ಹಸನ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd