ICC Test Ranking | ಜಿಗಿದ ಕೆ.ಎಲ್. ರಾಹುಲ್.. ಕುಸಿದ ವಿರಾಟ್ ಕೊಹ್ಲಿ icc-test-rankings-kl-rahul saaksha tv
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅಮೋಘ ಶತಕ (123) ಗಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆಎಲ್ ರಾಹುಲ್ ಐಸಿಸಿ ಇತ್ತೀಚಿನ ಟೆಸ್ಟ್ ಶ್ರೇಯಾಂಕದಲ್ಲಿ ಮೇಲಕ್ಕೆ ಜಿಗಿದಿದ್ದಾರೆ.
ಅವರು ಈ ವಾರದ ಶ್ರೇಯಾಂಕದಲ್ಲಿ 18 ಸ್ಥಾನಗಳನ್ನು ಜಿಗಿದು 31 ನೇ ಸ್ಥಾನಕ್ಕೆ ಏರಿಕ್ಕೇರಿದ್ದಾರೆ.
ಇದೇ ಟೆಸ್ಟ್ ನಲ್ಲಿ ಅರ್ಧಶತಕ ಸಿಡಿಸಿದ ಮಯಾಂಕ್ ಅಗರ್ವಾಲ್ ಒಂದು ಸ್ಥಾನ ಮೇಲೇರಿ 11ನೇ ಸ್ಥಾನ ಪಡೆದರೆ, ರಹಾನೆ ಎರಡು ಸ್ಥಾನಗಳು ಕುಸಿದು 25ನೇ ಸ್ಥಾನ ಪಡೆದಿದ್ದಾರೆ.
ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಎರಡು ಸ್ಥಾನ ಕುಸಿದು 9ನೇ ಸ್ಥಾನದಲ್ಲಿದ್ದಾರೆ.
ಭಾರತ ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆಸೀಸ್ ಲಬುಶನ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬೌಲಿಂಗ್ ವಿಭಾಗಕ್ಕೆ ಸಂಬಂಧಿಸಿದಂತೆ, ಟೀಂ ಇಂಡಿಯಾ ಬೌಲರ್‌ಗಳು ಈ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಸುಧಾರಿಸಿಕೊಂಡಿದ್ದಾರೆ.
ಮೊದಲ ಟೆಸ್ಟ್ ನಲ್ಲಿ ಐದು ವಿಕೆಟ್ ಪಡೆದ ಬುಮ್ರಾ ಟಾಪ್-10 (9ನೇ) ಸ್ಥಾನಕ್ಕೇರಿದರೆ, ಅದೇ ಪಂದ್ಯದಲ್ಲಿ ಮಿಂಚಿದ ಶಮಿ ಎರಡು ಸ್ಥಾನ ಮೇಲೇರಿ 17ನೇ ಸ್ಥಾನಕ್ಕೆ ತಲುಪಿದ್ದಾರೆ.
ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದು, ಆಸೀಸ್ ವೇಗಿ ಕಮ್ಮಿನ್ಸ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.









