ದಾವಣಗೆರೆ : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಲಿಂಗಾಯತರು 60 ರಿಂದ 70 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಲಿಂಗಾಯತ ವ್ಯಕ್ತಿಯೇ ಸಿಎಂ ಆಗಲಿದ್ದಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ(Shamanur Shivashankarappa) ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ನಲ್ಲಿ ಲಿಂಗಾಯತರು 60 ರಿಂದ 70 ಸೀಟ್ ಬಂದರೆ ಲಿಂಗಾಯತರು ಮುಖ್ಯಮಂತ್ರಿ ಆಗುತ್ತಾರೆ. ಅದರಲ್ಲಿ ಮೆಜಾರಿಟಿ ಯಾರದ್ದು ಬರುತ್ತೋ ಅವರು ಸಿಎಂ ನನ್ನು ಆಯ್ಕೆ ಮಾಡುತ್ತಾರೆ. ಅವರಿಗೆ ಬೇಕಾದವರು ಸಿಎಂ ಎಂದು ಘೋಷಣೆ ಮಾಡಿಕೊಳ್ಳುತ್ತಾರೆ ಎಂದರು.
ಸಿಎಂ ಆಗುವವರನ್ನು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ನಾನು ರಾಷ್ಟ್ರೀಯ ಅದ್ಯಕ್ಷ. ಎಲ್ಲಾ ಲಿಂಗಾಯತರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು. ಲಿಂಗಾಯತರಲ್ಲಿ, ಎಂಬಿ ಪಾಟೀಲ್, ಖಂಡ್ರೆ, ಎಸ್ ಎಸ್ ಮಲ್ಲಿಕಾರ್ಜುನ್ ಕೂಡ ರೇಸ್ ನಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.








