ಜೆಡಿಎಸ್ ನಮ್ಮ ಪಕ್ಷಕ್ಕೆ ಬಂದರೆ ಇಲ್ಲ ಎನ್ನುವುದಿಲ್ಲ : ಹೆಬ್ಬಾರ್
ಶಿರಸಿ : ನಮ್ಮ ಸಿದ್ದಾಂತವನ್ನ ಒಪ್ಪಿ ಜೆಡಿಎಸ್ ಬಿಜೆಪಿ ಜೊತೆ ಬಂದರೇ ಖಂಡಿತಾ ಸೇರಿಸಿಕೊಳ್ಳುತ್ತೇವೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಜೆಡಿಎಸ್ ಪಕ್ಷ ಬಿಜೆಪಿ ಬಗ್ಗೆ ಸಾಫ್ಟ್ ಕರ್ನರ್ ಹೊಂದಿರೋದು ಈಗ ಜಗತ್ ಜಾಹೀರಾಗಿದೆ. ಈ ಹಿನ್ನೆಲೆ ಜೆಡಿಎಸ್ ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ಹೋಗುತ್ತೆ ಎಂಬ ಚರ್ಚೆಗಳು ಈಗ ರಾಜಕೀಯ ವಲಯದಲ್ಲಿ ಶುರುವಾಗಿವೆ. ಈ ಬಗ್ಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಯಲ್ಲಾಪುರದ ಅರಬೈಲಿನಲ್ಲಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಶಿವರಾಜ್ ಹೆಬ್ಬಾರ್ ಅವರು ಮತದಾನ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ನವರು ಅವರಾಗಿ ಬಂದರೆ ನಾವು ಸೇರಿಸಿಕೊಳ್ಳಲ್ಲ ಅನ್ನುವಷ್ಟು ಮೂರ್ಖರಲ್ಲ.
ಒಂದು ಬಾರಿ ಕಾಂಗ್ರೆಸ್ ಇನ್ನೊಂದು ಬಾರಿ ಬಿಜೆಪಿ ಎಂದು ಹೋಗುತ್ತಾರೆ. ಜೆಡಿಎಸ್ ನಮ್ಮ ಪಕ್ಷಕ್ಕೆ ಬಂದರೆ ಇಲ್ಲ ಎನ್ನುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಕೊರೊನಾ ಲಸಿಕೆ ವಿತರಣೆ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ಲಸಿಕೆ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









