Hubli: ಮುಸ್ಲಿಂರನ್ನ ಮದುವೆಯಾದರೆ SSK ಸಮಾಜದಿಂದ ಬಹಿಷ್ಕಾರ

1 min read
SSK Letter Saaksha Tv

ಮುಸ್ಲಿಂರನ್ನ ಮದುವೆಯಾದರೆ SSK ಸಮಾಜದಿಂದ ಬಹಿಷ್ಕಾರ

ಹುಬ್ಬಳ್ಳಿ: ಮುಸ್ಲಿಂ ಸಮಾಜದ ಯುವಕ-ಯುವತಿಯು ಮುಸ್ಲಿಂರನ್ನು ಮದುವೆಯಾದರೆ ಅವರನ್ನು ಸಮಾಜದಿಂದ ಭಹಿಷ್ಕರಿಸಿ ಎಂದು ಸರಕಾರಿ ನಾಮಾಂಕಿತದಲ್ಲೇ  ಹುಬ್ಬಳ್ಳಿ-ಧಾರವಾಡ ಅಧ್ಯಕ್ಷರು ಪತ್ರ ಬರೆದಿದ್ದಾರೆ.

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ್ ಕಲಬುರಗಿ ಅವರು ಈ ಪತ್ರವನ್ನು ಎಸ್ಎಸ್‌ಕೆ ಸಮಾಜದ ಧರ್ಮದರ್ಶಿಗಳಿಗೆ ಸರ್ಕಾರಿ ನಾಮಾಂಕಿತದಲ್ಲೇ ಬರೆದಿದ್ದಾರೆ. ಇನ್ನೂ ಈ ಪತ್ರದಲ್ಲಿ ತಮ್ಮ ಸಮಾಜದ ಯಾರೊಬ್ಬರೂ ಮುಸ್ಲಿಂ ಯುವಕ-ಯುವತಿಯರೊಂದಿಗೆ ಮದುವೆಯಾಗಿದರೂ ಅಂತಹ ಕುಟುಂಬಗಳನ್ನು ಸಮಾಜದಿಂದ ಹೊರಗಿಡಬೇಕು.

ಅಲ್ಲದೇ ದೇವಸ್ಥಾನ ಪ್ರವೇಶಕ್ಕೆ ನಿಷೇಧ ಹೇರುವುದು, ಅಂತಹ ಕುಟುಂಬಗಳಿಗೆ ಯಾರೂ ವಧು ಕೊಡುವಂತಿಲ್ಲ, ಸಮಾಜದ ಯಾವುದೇ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸದಂತೆ ನಿಷೇಧ ಹೇರಬೇಕು ಎಂದು ತಿಳಿಸಿದ್ದಾರೆ.

ಇಂತಹ ಪತ್ರಕ್ಕೆ ಕಾರಣ: ಕಳೆದ ಮೂರು ದಿನಗಳ ಹಿಂದೆಯಷ್ಟೇ ಎಸ್‌ಎಸ್‌ಕೆ ಸಮಾಜದ ಯುವತಿಯೊಬ್ಬರು ಮುಸ್ಲಿಂ ಯುವಕನೊಂದಿಗೆ ರಿಜಿಸ್ಟಾರ್ ಮ್ಯಾರೇಜ್ ಆಗಿದ್ದರು. ಇದಕ್ಕಾಗಿ ಲವ್ ಜಿಹಾದ್ ಎಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಯುವತಿ ತಾನೇ ಇಷ್ಟಪಟ್ಟು ಮದುವೆಯಾಗಿರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಮಾಜದ ಹಿತದೃಷ್ಟಿಯಿಂದ ಅವರನ್ನು ಬಹಿಷ್ಕರಿಸಿ ಎಂದು ಪತ್ರ ಆಗ್ರಹಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd