RCB ಒಂದು ಭಾರಿ ಟೋಫ್ರಿ ಗೆದ್ದರೆ ಮೂರ್ನಾಲ್ಕು ಭಾರಿ ಟೋಫ್ರಿ ಎತ್ತಲಿದೆ – ಎಬಿ ಡಿವಿಲಿಯರ್ಸ್
RCB ಒಂದು ಭಾರಿ ಟೋಫ್ರಿ ಗೆದ್ದರೆ ಮೂರ್ನಾಲ್ಕು ಭಾರಿ ಟೋಫ್ರಿಗಳನ್ನ ಎತ್ತುವ ಸಾಮರ್ಥ್ಯವಿದೆ ಎಂದು ಆರ್ ಸಿ ಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತಾನಾಡಿದ ಡಿವಿಲಿಯರ್ಸ್, ಟಿ20 ಕ್ರಿಕೆಟ್ ಒಂದು ಅದೃಷ್ಟದ ಆಟವಾಗಿದ್ದ,ಮುಂಬರುವ ಈವೆಂಟ್ಗಳಲ್ಲಿ ಅದೃಷ್ಟ RCB ಪರವಾಗಿರುತ್ತದೆ ಎಂದು ಭಾವಿಸಿದ್ದಾರೆ.
IPL ಶುರುವಾಗಿ ಇಲ್ಲಿಗೆ 14 ರಿಂದ 15 ಸೀಸನ್ ಗಳಾಗಿದ್ದು, ಟೋಫ್ರಿ ಗೆಲ್ಲುವ ಮೊದಲ ಸಂಕೋಲೆಯನ್ನ ಮುರಿದರೆ ಎರಡು, ಮೂರು ಮತ್ತು ನಾಲ್ಕನೇ ಟೋಫ್ರಿಗಳನ್ನ ಬೇಗನೇ ಗೆಲ್ಲುತ್ತಾರೆ ಎಂದು ಡಿವಿಲಿಯರ್ಸ್ ಭವಿಷ್ಯ ಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟಿಂಗ್ ಶ್ರೇಷ್ಠ ಎಬಿ ಡಿವಿಲಿಯರ್ಸ್ ಬೆಂಗಳೂರು ತಂಡದೊಂದಿಗೆ ಹೊಸ ಪಯಣವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ತಂಡದ ಮುಖ್ಯ ಅಥವಾ ಬ್ಯಾಟಿಂಗ್ ಕೋಚ್ ಆಗಿ RCB ಪಾಳಯ ಸೇರಬಹುದು ಎನ್ನಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇದುವರೆಗೆ ಪ್ರಶಸ್ತಿ ಗೆಲ್ಲದ ಮೂರು ತಂಡಗಳಲ್ಲಿ RCB ಒಂದಾಗಿದೆ.
‘If RCB wins this one, they will win three, four quickly’: AB de Villiers