ಸುಳ್ಳು ಹೇಳುವುದಕ್ಕೆ ನೊಬೆಲ್ ಪ್ರಶಸ್ತಿ ಕೊಡೋದಾದ್ರೆ ಮೋದಿಗೆ ಕೊಡಬೇಕು – ಸಿದ್ದರಾಮಯ್ಯ
ಬೆಳಗಾವಿ : ಸುಳ್ಲು ಹೇಳುವುದಕ್ಕೆ ನೊಬೆಲ್ ಪ್ರಶಸ್ತಿ ಏನಾದ್ರು ಕೊಡುವುದಾದ್ರೆ ಅದು ಪ್ರದಾನಿ ನರೇಂದ್ರ ಮೋದಿಯವರಿಗೆ ನೀಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ. ಬೆಳಗಾವಿಯಲ್ಲಿ ಲೋಕಸಭಾ ಚುನಾವಣಾ ರ್ಯಾಲಿ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ನೀಡುವ ಭರವಸೆಗಳನ್ನು ನೋಡಿದಾಗ ಇತಿಹಾಸದಲ್ಲಿ ಮೋದಿಯಂತಹ ಪ್ರಧಾನಿ ಎಂದಿಗೂ ಬಂದಿರಲಿಲ್ಲ ಅನ್ನಿಸುತ್ತದೆ. ಆದರೆ ಅವರು ನೀಡಿರುವ ಎಷ್ಟು ಭರವಸೆಗಳನ್ನು ಈವರೆಗೆ ಈಡೇರಿಸಿದ್ದಾರಾ. ಅಚ್ಛೇ ದಿನ್ ಆಯೇಗಾ ಎಂದರು. ಎಲ್ಲಿದೇ ಅಚ್ಛೇದಿನ್. ಎಂದು ಲೇವಡಿ ಮಾಡುತ್ತಾ ಪ್ರಶ್ನೆ ಮಾಡಿದರು.
ಇದೇ ವೇಳೆ ಮೋದಿಯವರು 7 ವರ್ಷಗಳಿಂದ ಪ್ರಧಾನಿಯಾಗಿದ್ದಾರೆ. ಈ ಹಿಂದೆ 15 ಲಕ್ಷ ಕೊಡುತ್ತೇನೆ ಎಂದಿದ್ದರು. 15 ಪೈಸೆನಾದ್ರು ಕೊಟ್ಟಿದ್ದಾರಾ. ಯುವಕರಿಗೆ ಸುಮ್ಮನೆ ಭ್ರಮೆ ಹುಟ್ಟಿಸಿದ್ದಾರೆ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದರು. 7 ವರ್ಷ ಆಯ್ತು 10 ಸಾವಿರ ಉದ್ಯೋಗ ಸಹ ಸೃಷ್ಟಿಯಾಗಿಲ್ಲ. ಉದ್ಯೋಗ ಸೃಷ್ಟಿ ಕುರಿತು ನೀಡಿರುವ ಭರವಸೆ ಬಗ್ಗೆ ಮೋದಿಗೆ ಯುವಕರು ಕೇಳಬೇಕು. ಕಾರ್ಮಿಕರೆಲ್ಲಾ ಬಿದಿ ಪಾಲಾಗಿದ್ದಾರೆ. ಹೇಳೊರಿಲ್ಲ ಕೇಳೋರಿಲ್ಲ. ಮೋದಿ ಅಚ್ಛೇ ದಿನ್ ಆಯೇಗಾ ಎಂದಿದ್ದರು. ಆದರೆ ಪೆಟ್ರೋಲ್, ಡಿಸೆಲ್, ಸಿಲಿಂಡರ್ ಬೆಲೆ ಈಗ ಏರಿಕೆಯಾಗಿವೆ. ರಸಗೊಬ್ಬರ ಬೆಲೆ, ಡಿಎಪಿ ಕ್ವಿಂಟಾಲ್ಗೆದ 1,400 ರೂ. ಜಾಸ್ತಿಯಾಗಿದೆ. 2,400 ರೂ.ಇದ್ದ ಬೆಲೆ 3800 ರೂ. ಆಗಿದೆ. ರೈತರು ಈ ಬಗ್ಗೆ ಯೋಚನೆ ಮಾಡಬೇಕು ಎಂದರು.