ನೀವು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಪಿಪಿಎಫ್ ಉತ್ತಮ ಆಯ್ಕೆ
ನೀವು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ನಿಮಗೆ ಉತ್ತಮ ಆಯ್ಕೆಯಾಗಿದೆ. ಇದನ್ನು ಹೂಡಿಕೆಗೆ ಸುರಕ್ಷಿತವಾಗಿದೆ. ಅಲ್ಲದೆ ಇದು ಉತ್ತಮ ಆದಾಯವನ್ನು ನೀಡುತ್ತದೆ. ಕೇಂದ್ರ ಸರ್ಕಾರದಿಂದ ಖಾತರಿಪಡಿಸಲಾಗಿರುವ ಈ ಯೋಜನೆಯಲ್ಲಿ, ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದ್ರೆ ಸಾವಿರಾರು ರೂಪಾಯಿಗಳಿಂದ ಲಕ್ಷಗಳವರೆಗೆ ಪಡೆಯಬಹುದು . ಇನ್ನೊಂದು ಪ್ರಯೋಜನವೆಂದರೆ ಬಡ್ಡಿಯ ಮೇಲಿನ ಆದಾಯ ತೆರಿಗೆಯಲ್ಲಿ ವಿನಾಯಿತಿ. PPF ನಲ್ಲಿ ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ವಿಧಿಸಲಾಗುದಿಲ್ಲ.

PPF ನಲ್ಲಿ ಅಸ್ತಿತ್ವದಲ್ಲಿರುವ ಹೂಡಿಕೆಯ ಮೇಲೆ 7.1% ಬಡ್ಡಿದರವನ್ನು ಪಡೆಯಬಹುದು. ಈ ದರವು ಸೆಪ್ಟೆಂಬರ್ 30 ರವರೆಗೆ ಇರುತ್ತದೆ. ಮುಕ್ತಾಯ ಅವಧಿ 15 ವರ್ಷಗಳು ಮತ್ತು ಅದರ ನಂತರ ಹೂಡಿಕೆದಾರರು ತಮ್ಮ ಮೊತ್ತವನ್ನು ಹಿಂಪಡೆಯಬಹುದು ಅಥವಾ ಹೂಡಿಕೆಯನ್ನು ಮುಂದುವರಿಸಲು ಆಯ್ಕೆ ಮಾಡಬಹುದು.
ಹೂಡಿಕೆಯನ್ನು ಮುಕ್ತಾಯದ ನಂತರ ಐದು ವರ್ಷಗಳವರೆಗೆ ವಿಸ್ತರಿಸಬಹುದು.
ನೀವು ಪಿಪಿಎಫ್ನಲ್ಲಿ ಪ್ರತಿ ತಿಂಗಳು 1,000 ರೂ.ಗಳನ್ನು ಠೇವಣಿ ಮಾಡಿದರೆ, 15 ವರ್ಷಗಳಲ್ಲಿ ನೀವು ಸುಮಾರು 3.25 ಲಕ್ಷ ರೂ ಪಡೆಯಬಹುದು. ಹೂಡಿಕೆಯ ಅವಧಿಯಲ್ಲಿ ಬಡ್ಡಿ ದರ ಬದಲಾಗುವುದಿಲ್ಲ ಎಂಬ ಊಹೆಯ ಮೇಲೆ ಈ ಮೊತ್ತವನ್ನು ನಿರ್ಧರಿಸಲಾಗಿದೆ. ಈ 3.25 ಲಕ್ಷ ಮೊತ್ತದಲ್ಲಿ, ಸುಮಾರು 1.80 ಲಕ್ಷ ನಿಮ್ಮ ಹೂಡಿಕೆಯಾಗಿದ್ದು, ಸುಮಾರು 1.45 ಲಕ್ಷ ನಿಮ್ಮ ಹೂಡಿಕೆಗೆ 15 ವರ್ಷಗಳವರೆಗಿನ ಬಡ್ಡಿಯಾಗಿರುತ್ತದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ನಮ್ಮ ಆಹಾರದಲ್ಲಿರಬೇಕಾದ ಆಂಟಿ-ವೈರಲ್ ಆಹಾರಗಳು https://t.co/Mcc6m7ybXF
— Saaksha TV (@SaakshaTv) August 14, 2021
ಕೆಂಪು ತರಕಾರಿ ದೋಸೆ https://t.co/X7R9v2dRzg
— Saaksha TV (@SaakshaTv) August 14, 2021
ತಮಿಳುನಾಡು ಕೃಷಿ ಬಜೆಟ್ ನ ಮುಖ್ಯಾಂಶಗಳು – ದೇಶಕ್ಕೆ ಇದು ಮಾದರಿ ಬಜೆಟ್ ಆಗುತ್ತಾ?? https://t.co/XnbhtdkS0V
— Saaksha TV (@SaakshaTv) August 15, 2021
ಕನಿಷ್ಠ 210 ರೂ ಗಳ ಮಾಸಿಕ ಹೂಡಿಕೆಯ ಪಿಂಚಣಿ ಯೋಜನೆಯ ಪ್ರಯೋಜನಗಳು#Benefits #CentralGovernment #AtalPension https://t.co/cp3iRj8eBo
— Saaksha TV (@SaakshaTv) August 14, 2021
#PPF








