ಪ್ಯಾನ್ ಕಾರ್ಡ್ ಕಳೆದುಹೋಗಿದೆಯೇ? ಹಾಗಿದ್ದರೆ ಅದನ್ನು ಸುಲಭವಾಗಿ ಡೌನ್‌ಲೋಡ್ ಮಾಡುವ ವಿಧಾನ ಇಲ್ಲಿದೆ
ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಅತ್ಯಗತ್ಯ ಹಣಕಾಸು ದಾಖಲೆಯಾಗಿದ್ದು, ಇದು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು, ಬ್ಯಾಂಕ್ ಖಾತೆ ತೆರೆಯಲು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು, ದೊಡ್ಡ ಮೊತ್ತದ ಹಣಕಾಸಿನ ವಹಿವಾಟುಗಳಿಗೆ ಅತ್ಯಗತ್ಯವಾಗಿದೆ. ಅನೇಕ ಬಾರಿ ಜನರು ತಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡು ಸಮಸ್ಯೆಯನ್ನು ಅನುಭವಿಸುತ್ತಾರೆ. ಆದರೆ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ಮೂಲಕ ಇ-ಪ್ಯಾನ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಈ ಸೌಲಭ್ಯವು ಹೊಸ ಆದಾಯ ತೆರಿಗೆ ಪೋರ್ಟಲ್ incometax.gov.in ನಲ್ಲಿ ಕೂಡ ಲಭ್ಯವಿದೆ. ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋದರೆ/ಹಾನಿಗೊಳಗಾದರೆ ಮತ್ತು ನಿಮ್ಮ ಪ್ಯಾನ್ ಸಂಖ್ಯೆ ನಿಮಗೆ ನೆನಪಿಲ್ಲದಿದ್ದರೆ, ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಹೊಸ ಆದಾಯ ತೆರಿಗೆ ವೆಬ್‌ಸೈಟ್‌ನಿಂದ ಇ-ಪ್ಯಾನ್ ಅನ್ನು ಡೌನ್‌ಲೋಡ್ ಮಾಡಬಹುದು. ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದವರಿಗೆ ಮಾತ್ರ ಈ ಆಯ್ಕೆ ಲಭ್ಯವಿದೆ.

ಈ ಕೆಳಗಿನ ಷರತ್ತುಗಳನ್ನು ಪೂರೈಸುವವರು ಮಾತ್ರ ಕ್ವಿಕ್ ಪ್ಯಾನ್ ಕಾರ್ಡ್ ಡೌನ್‌ಲೋಡ್ ಸೌಲಭ್ಯವನ್ನು ಪಡೆಯಬಹುದು
ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿರಬೇಕು
ಸಂಪೂರ್ಣ ಜನ್ಮ ದಿನಾಂಕ ಆಧಾರ್ ಕಾರ್ಡ್‌ನಲ್ಲಿ ಲಭ್ಯವಿರಬೇಕು
ಪ್ಯಾನ್‌ಗೆ ಅರ್ಜಿ ಸಲ್ಲಿಸುವ ದಿನಾಂಕದಂದು ಪ್ರಾಪ್ತ ವಯಸ್ಕರಾಗಿರಬೇಕು.
ಆಧಾರ್ ಪ್ಯಾನ್ ಲಿಂಕ್ ಪೂರ್ಣಗೊಂಡಿರದಿದ್ದರೆ ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಿಂದ ನಿಮಗೆ ಇ-ಪ್ಯಾನ್ ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ.
ಹೊಸ ಆದಾಯ ತೆರಿಗೆ ಪೋರ್ಟಲ್‌ನಿಂದ ಇ-ಪ್ಯಾನ್ ಅನ್ನು ತಕ್ಷಣ ಡೌನ್‌ಲೋಡ್ ಮಾಡಲು, ನೀವು ಮೊದಲು ಪೋರ್ಟಲ್‌ಗೆ ಲಾಗಿನ್ ಆಗಬೇಕು ಮತ್ತು ನಂತರ ‘ನಮ್ಮ ಸೇವೆಗಳು’ ಕ್ಲಿಕ್ ಮಾಡಿ. ನಂತರ ನೀವು ‘ತತ್ಕ್ಷಣ ಇ ಪ್ಯಾನ್’ ಕ್ಲಿಕ್ ಮಾಡಿ
ಪ್ಯಾನ್ ಕಾರ್ಡ್ ಸಂಖ್ಯೆ ಇಲ್ಲದೆ ಇ-ಪ್ಯಾನ್ ಡೌನ್‌ಲೋಡ್ ಮಾಡಲು ಕೆಲವು ಹಂತಗಳನ್ನು ಅನುಸರಿಸಬೇಕು.
ಹೊಸ ವೆಬ್‌ಸೈಟ್‌ಗೆ ಲಾಗಿನ್ ಮಾಡಿ – incometax.gov.in
ಕೆಳಗಿನ ಎಡಭಾಗದಲ್ಲಿರುವ ‘ನಮ್ಮ ಸೇವೆಗಳು’ ಕ್ಲಿಕ್ ಮಾಡಿ.
‘ಇನ್ಸ್ಟಾಂಟ್ ಇ ಪ್ಯಾನ್’ ಕ್ಲಿಕ್ ಮಾಡಿ.
‘ಹೊಸ ಇ-ಪ್ಯಾನ್’ ಕ್ಲಿಕ್ ಮಾಡಿ.
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಸ್ವೀಕರಿಸಿ ಬಟನ್ ಕ್ಲಿಕ್ ಮಾಡಿ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು ಒಟಿಪಿ ಪಡೆಯುತ್ತೀರಿ. ಅದನ್ನು ನಮೂದಿಸಿ.
ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ನಿಮ್ಮ ಇ-ಮೇಲ್ ಐಡಿಯನ್ನು ನಮೂದಿಸಿ ಮತ್ತು ‘ದೃಢಿಕರಿಸಿ’ ಬಟನ್ ಕ್ಲಿಕ್ ಮಾಡಿ.
ನಿಮ್ಮ ಇ-ಪ್ಯಾನ್ ಅನ್ನು ನೀವು ನೀಡಿದ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ.
ನಿಮ್ಮ ಇಮೇಲ್ ಗೆ ಲಾಗ್ ಇನ್ ಮಾಡಿ ಮತ್ತು ಇ-ಪ್ಯಾನ್ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1404627836321816582?s=19
https://twitter.com/SaakshaTv/status/1404292601021276162?s=19
https://twitter.com/SaakshaTv/status/1404598123775864833?s=19
https://twitter.com/SaakshaTv/status/1404235271634403329?s=19
https://twitter.com/SaakshaTv/status/1405115360504909826?s=19
#pancard #download







