The Kashmir files ಕಾಲ್ಪನಿಕ ಅಂತ ಸಾಬೀತುಪಡಿಸಿದ್ರೆ ಸಿನಿಮಾ ಮಾಡುವುದನ್ನೇ ಬಿಡ್ತಿನಿ – ವಿವೇಕ್ ಅಗ್ನಿಹೋತ್ರಿ…
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿದೆ. ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಮಾತಿಗೆ ತಿರುಗೇಟು ನೀಡಿರುವ ನಿರ್ದೇಶಕ ಅಗ್ನಿಹೋತ್ರಿ “ಕಾಶ್ಮೀರ ಫೈಲ್ಸ್ನ ಒಂದು ಸಂಭಾಷಣೆ ಅಥವಾ ಒಂದೇ ಒಂದು ದೃಶ್ಯವೂ ಸುಳ್ಳಾದರೆ, ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆ” ಎಂದು ವಿವೇಕ್ ಅಗ್ನಿಹೋತ್ರಿ ಓಪನ್ ಚಾಲೆಂಜ್ ಹಾಕಿದ್ದಾರೆ.
ಗೋವಾದ 53ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೋಮವಾರ ಮಾತನಾಡಿದ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ The Kashmir files ಅಸಭ್ಯ ಮತ್ತು ಪ್ರಚಾರದ ಚಿತ್ರ ಎಂದು ಕರೆದಿದ್ದರು. ಈ ಹೇಳಿಕೆ ಚಿತ್ರರಂಗದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಯಿತು.
ಇದರ ಕುರಿತು ನಿರ್ದೇಶಕ ಅಗ್ನಿಹೋತ್ರಿ ವಿಡಿಯೋ ಬಿಡುಗಡೆ ಮಾಡಿದ್ದು, ಚಿತ್ರವನ್ನು ನಕಲಿ ಎಂದು ಕರೆಯುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ 700 ಜನರ ವೈಯಕ್ತಿಕ ಸಂದರ್ಶನದ ನಂತರ ಈ ಸಿನಿಮಾ ಮಾಡಿದ್ದೇನೆ. ಆ 700 ಜನರ ಅವರ ಪೋಷಕರನ್ನ, ಸಹೋದರರು ಮತ್ತು ಸಹೋದರಿಯರನ್ನು ಸಾರ್ವಜನಿಕವಾಗಿ ಕೊಲ್ಲಲಾಗಿದೆ. ಸಾಮೂಹಿಕ ಅತ್ಯಾಚಾರ ಮಾಡಿ ಎರಡು ತುಂಡುಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲ ಅಪಪ್ರಚಾರ ಮತ್ತು ಅಶ್ಲೀಲ ಮಾತುಗಳನ್ನಾಡುತಿದ್ದಾರೆಯೇ ?
ಸಂಪೂರ್ಣವಾಗಿ ಹಿಂದೂ ಭೂಮಿಯಾಗಿದ್ದ ಇಂದು ಹಿಂದೂಗಳು ಅಲ್ಲಿ ವಾಸಿಸುತ್ತಿಲ್ಲ. ಆ ನಾಡಿನಲ್ಲಿ ಇಂದಿಗೂ ಹಿಂದೂಗಳನ್ನು ಆಯ್ದು ಕೊಲ್ಲಲಾಗುತ್ತಿದೆ. ಇದು ಅಪಪ್ರಚಾರ ಮತ್ತು ಅಶ್ಲೀಲ ಮಾತೇ ? ಯಾಸಿನ್ ಮಲಿಕ್ ತನ್ನ ಭಯೋತ್ಪಾದನೆಯ ದುಷ್ಕೃತ್ಯವನ್ನು ಒಪ್ಪಿಕೊಂಡು ಜೈಲಿನಲ್ಲಿ ಕೊಳೆಯುತ್ತಿದ್ದಾರೆ, ಇದು ಪ್ರಚಾರ ಮತ್ತು ಅಶ್ಲೀಲ ವಿಷಯವೇ ? ಎಂದು ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
If you prove that The Kashmir files are fiction, you will stop making movies – Vivek Agnihotri…