IIIT Basara : ಕ್ಯಾಂಪಸ್ ಆವರಣದಲ್ಲಿ 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ
IIIT Basara : ವಿದ್ಯಾರ್ಥಿ ಆತ್ಮಹತ್ಯೆ
17 ವರ್ಷದ ವಿದ್ಯಾರ್ಥಿ ನೇಣಿಗೆ ಶರಣು
ತೆಲಂಗಾಣದಲ್ಲಿ ನಡೆದ ಘಟನೆ
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವಿದ್ಯಾರ್ಥಿ
ಡೆತ್ ನೋಟ್ ಬರೆದಿಟ್ಟು ಭಾನು ಪ್ರಸಾದ್ ಸಾವು
ಕಾಲೇಜು ಕ್ಯಾಂಪಸ್ ಆವರಣದಲ್ಲಿ ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಬಸಾರ್ ನಲ್ಲಿ ನಡೆದಿದೆ.. ರಾಜೀವ್ ಗಾಂಧಿ ಟೆಕ್ನಾಲಜಿ ಕಾಲೇಜಿನ 17 ವರ್ಷದ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ..
ವಿದ್ಯಾರ್ಥಿಯನ್ನು 17 ವರ್ಷದ ಭಾನು ಪ್ರಸಾದ್ ಎಂದು ಗುರುತಿಸಲಾಗಿದೆ.
ಐಐಐಟಿ ಬಾಸರ್ ಎಂದು ಜನಪ್ರಿಯವಾಗಿರುವ ಆರ್ ಜಿಯುಕೆಟಿ ಕ್ಯಾಂಪಸ್ ನಲ್ಲಿರುವ ಬಾಲಕರ ಹಾಸ್ಟೆಲ್ ನಲ್ಲಿ ತನ್ನ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಭಾನು ಪ್ರಸಾದ್ ಶವ ಪತ್ತೆಯಾಗಿದೆ.
ವಿದ್ಯಾರ್ಥಿಯು ತನ್ನ ಒಸಿಡಿ (ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್) ಸಮಸ್ಯೆಗಳಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ..
ಈತ ಅನಗತ್ಯ ಆಲೋಚನೆಗಳನ್ನ ಮಾಡುತ್ತಾ ಅನೇಕ ವಿಚಾರವಾಗಿ ಭಯಭೀತನಾಗಿದ್ದ ಎನ್ನಲಾಗಿದೆ..
ಮೃತನು ಮಾನಸಿಕವಾಗಿ ತೊಂದರೆಗೀಡಾಗಿದ್ದ ಎನ್ನಲಾಗಿದೆ..
ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ.
IIIT Basara , student commit sucide in campus premises , saakshatv








