4ನೇ ಟಿ-ಟ್ವೆಂಟಿ ಪಂದ್ಯ- ರಾಹುಲ್, ಚಾಹಲ್ ಔಟ್.. ? ಗೆಲ್ಲಲೇಬೇಕಾದ ಒತ್ತಡದಲ್ಲಿ ಟೀಮ್ ಇಂಡಿಯಾ

1 min read
klrahul team india

4ನೇ ಟಿ-ಟ್ವೆಂಟಿ ಪಂದ್ಯ- ರಾಹುಲ್, ಚಾಹಲ್ ಔಟ್.. ? ಗೆಲ್ಲಲೇಬೇಕಾದ ಒತ್ತಡದಲ್ಲಿ ಟೀಮ್ ಇಂಡಿಯಾ 

india england – Drop Rahul, Chahal for 4th T20I

INDIA VS ENGLANDಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ-ಪಂದ್ಯ ಮಾರ್ಚ್ 18ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈಗಾಗಲೇ ಐದು ಪಂದ್ಯಗಳ ಟಿ-ಟ್ವೆಂಟಿ ಸರಣಿಯಲ್ಲಿ ಭಾರತ 1-2ರಿಂದ ಹಿನ್ನಡೆಯಲ್ಲಿದೆ. ಹೀಗಾಗಿ ಭಾರತ ನಾಲ್ಕನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಇನ್ನೊಂದೆಡೆ ಇಂಗ್ಲೆಂಡ್ ತಂಡ ಸರಣಿ ಗೆಲ್ಲುವ ತವಕದಲ್ಲಿದೆ. ಟೆಸ್ಟ್ ಸರಣಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಇಂಗ್ಲೆಂಡ್ ಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಅಲ್ಲದೆ ಈ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ.
ಆದ್ರೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಆರಂಭಿಕ ಕೆ.ಎಲ್. ರಾಹುಲ್ ಮತ್ತು ಯುಜುವೇಂದ್ರ ಚಾಹಲ್ ಹನ್ನೊಂದರ ಬಳಗದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಆದ್ರೂ ಇವರಿಬ್ಬರಿಗೆ ಇನ್ನೊಂದು ಅವಕಾಶ ಸಿಕ್ರೂ ಸಿಗಬಹುದು.
ಒಂದು ವೇಳೆ ಚಾಹಲ್ ಮತ್ತು ರಾಹುಲ್ 11ರ ಬಳಗದಿಂದ ಹೊರುಗಳಿಸಿದ್ರೆ, ಸೂರ್ಯ ಕುಮಾರ್ ಯಾದವ್ ಮತ್ತು ರಾಹುಲ್ ಟೇವಾಟಿಯ ಅಥವಾ ರಾಹುಲ್ ಚಾಹರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಹೀಗಾದಲ್ಲಿ ರೋಹಿತ್ ಶರ್ಮಾ ಜೊತೆ ಇಶಾನ್ ಕಿಶಾನ್ ಇನಿಂಗ್ಸ್ ಆರಂಭಿಸಲಿದ್ದಾರೆ.

team india saakshatvಅದೇ ರೀತಿ ಶಾರ್ದೂಲ್ ಥಾಕೂರ್ ಬದಲು ನವದೀಪ್ ಸೈನಿ ಅಥವಾ ಟಿ.ನಟರಾಜನ್ ಸ್ಥಾನ ಪಡೆದುಕೊಳ್ಳಬಹುದು.

ಟೀಮ್ ಇಂಡಿಯಾ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ನವದೀಪ್ ಸೈನಿ/ಟಿ.ನಟರಾಜನ್, ರಾಹುಲ್ ಟೆವಾಟಿಯಾ/ರಾಹುಲ್ ಚಾಹರ್.

ಇಂಗ್ಲೆಂಡ್ ತಂಡ
ಇಯಾನ್ ಮೊರ್ಗಾನ್ (ನಾಯಕ) ಜೋಸ್ ಬಟ್ಲರ್, ಜೇಸನ್ ರಾಯ್, ಡೇವಿಡ್ ಮಲಾನ್, ಜೋನಿ ಬೇರ್ ಸ್ಟೋವ್, ಬೆನ್ ಸ್ಟೋಕ್ಸ್, ಸ್ಯಾಮ್ ಕುರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚೆರ್, ಆದೀಲ್ ರಶೀದ್, ಮಾರ್ಕ್ ವುಡ್.

#klRahul #Narendra Modi stadium  #Yuzvendra Chahal #rahulchahar #suryakumaryadav #viratkohli

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd